ಮುಂಬಯಿ: ಮೀರಾ ರೋಡ್‌ನ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿಯ ನವೀಕೃತ ಭಜನಾ ಮಂದಿರ ಲೋಕಾರ್ಪಣೆ, 17ನೇ ವಾರ್ಷಿಕ ಮಂಗಳ್ಳೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆ, ದುರ್ಗಾನಮಸ್ಕಾರ ಪೂಜೆ ಹಾಗೂ ಇನ್ನಿತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ. 30ರಂದು ಪ್ರಾರಂಭಗೊಂಡಿದ್ದು, ಫೆ. 3ರ ವರೆಗೆ ಅದ್ದೂರಿಯಾಗಿ ನಡೆಯಲಿವೆ.
ಪುರೋಹಿತ ಶ್ರೀ ಕೃಷ್ಣರಾಜ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಜ. 30 ರಂದು ಸಂಜೆ 7 ರಿಂದ ರಾತ್ರಿ 9 ರವರೆಗೆ ವಾಸ್ತು ಹೋಮ, ಬಲಿವಾಸ್ತು ಪೂಜೆ, ಸುದರ್ಶನ ಹೋಮ ಜರಗಿತು. ಜ. 31 ರಂದು ಅಪರಾಹ್ನ 4.30 ರಿಂದ ಗಣಪತಿ, ಶ್ರೀ ದುರ್ಗಾಪರಮೇಶ್ವರಿ ಹಾಗೂ ಲಕ್ಷ್ಮೀನಾರಾಯಣ ದೇವರ ಮೆರವಣಿಗೆಯು ಬ್ರಹ್ಮ ಮಂದಿರದಿಂದ ಹೊರಟು ರಸ್‌ರಾಜ್ ಸಿನೇಮಾ, ಶೀತಲ್ ನಗರದ ಮುಖಾಂತರ ಲಕ್ಷಿ¾àನಾರಾಯಣ ಭಜನಾ ಮಂದಿರವನ್ನು ತಲುಪಿತು. ಚೆಂಡೆ, ವಾದ್ಯ, ವಾಲಗ ಹಾಗೂ ದೀಪದೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಫೆ. 1ರಂದು ಬೆಳಗ್ಗೆ 6.45 ರಿಂದ ಗಣಪತಿ, ಲಕ್ಷ್ಮೀನಾರಾಯಣ ಹಾಗೂ ದುರ್ಗಾದೇವಿಯ ಪ್ರತಿಷ್ಠಾ ಮಹೋತ್ಸವವು ನವೀಕೃತ ಗೊಂಡ ಮಂದಿರದಲ್ಲಿ ಜ್ಯೋತಿಷ್ಯ ಪುರೋಹಿತ ಕೃಷ್ಣರಾಜ್ ತಂತ್ರಿ ಅವರ ದಿವ್ಯಹಸ್ತದಿಂದ ಪ್ರತಿಷ್ಠಾಪನೆಗೊಂಡಿತು. ಆನಂತರ ಬೆಳಗ್ಗೆ 8 ರಿಂದ ಗಣಹೋಮ, ದುರ್ಗಾ ಹೋಮ, ಕಲೊ³àಕ್ತ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾರಿಜಾ ಜೆ. ಪೂಜಾರಿ ಮತ್ತು ಕಾರ್ಯದರ್ಶಿ ಸಂಗೀತ ಎಂ. ಐಲ್ ಅವರ ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪರಿಸರದ ತುಳು-ಕನ್ನಡಿಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಮಿತಿಯ ಅಧ್ಯಕ್ಷ ಹರೀಶ್ ಜಿ. ಪೂಜಾರಿ ದಂಪತಿ ಪ್ರತಿಷ್ಠಾಪನೆ, ಗಣಹೋಮ ಪೂಜೆಯ ಯಜಮಾನತ್ವ ವಹಿಸಿದ್ದರು. ಉಪಾಧ್ಯಕ್ಷ ರಮೇಶ್ ಅಮೀನ್, ಗೌರವ ಕಾರ್ಯದರ್ಶಿ ಮಾಧವ ಬಿ. ಐಲ್, ಕೋಶಾಧಿಕಾರಿ ಶಿವರಾಮ ಕೋಟ್ಯಾನ್, ಜತೆ ಕಾರ್ಯದರ್ಶಿ ಸಂಪತ್ ಶೆಟ್ಟಿ, ಜತೆ ಕೋಶಾಧಿಕಾರಿ ಸುಂದರ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾರಿಜಾ ಜೆ. ಪೂಜಾರಿ, ಕಾರ್ಯದರ್ಶಿ ಸಂಗೀತಾ ಎಂ. ಐಲ್, ಅರ್ಚಕರಾದ ಜನಾರ್ಧನ ಪೂಜಾರಿ, ಶಂಕರ ಬಿ. ಶೇರಿಗಾರ್, ಭುವಾಜಿ ಶ್ರೀಧರ ಶೆಟ್ಟಿ, ರಮೇಶ್ ಅಮೀನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುರೇಶ್ ಕರ್ಕೇರ, ಜಯ ಪೂಜಾರಿ, ಮಾಧವ ಕೋಟ್ಯಾನ್, ಶ್ರೀಧರ ಶೆಟ್ಟಿ, ಹೇಮಂತ ಮುಚ್ಚಾರು ಹಾಗೂ ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸ್ಥಳೀಯ ಧಾರ್ಮಿಕ ಮುಖಂಡರು, ರಾಜಕೀಯ ಧುರೀಣರು, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು, ತುಳು-ಕನ್ನಡಿಗ ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ಜನಾರ್ಧನ ಪೂಜಾರಿ, ಶಂಕರ ಬಿ. ಶೇರಿಗಾರ, ಭುವಾಜಿಗಳಾದ ಶ್ರೀಧರ ಶೆಟ್ಟಿ, ರಮೇಶ್ ಅಮೀನ್ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ