Advertisement

ಜಿಲ್ಲೆಯಲ್ಲಿ ಆಕ್ಸಿಜನ್‌ ಹಾಸಿಗೆ ಹೆಚ್ಚಿಸಲು ಕ್ರಮ

08:28 PM May 21, 2021 | Team Udayavani |

ತುಮಕೂರು: ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಹೆಚ್ಚು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಆಕ್ಸಿಜನ್‌ಹಾಸಿಗೆಗಳನ್ನು ಹೆಚ್ಚು ಮಾಡಬೇಕು. ವೈದ್ಯಕೀಯಕಾಲೇಜುಗಳಲ್ಲಿ ಆಕ್ಸಿಜನ್‌ ಹಾಸಿಗೆ ಹೆಚ್ಚಿಸಿ ಜೊತೆಗೆಲ್ಯಾಬ್‌ನಲ್ಲಿ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸಲುಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಡಾ.ಕೆ.ಸುಧಾಕರ್‌ ಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರಏರ್ಪಡಿಸಿದ್ದ ಕೊರೊನಾ ನಿಯಂತ್ರಣ ಕುರಿತ ಪ್ರಗತಿಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು,ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಎರಡುಮೆಡಿಕಲ್‌ ಕಾಲೇಜುಗಳು ಇದ್ದೂ ಆಕ್ಸಿಜನ್‌ ಹಾಸಿಗೆಗಳು ಕಡಿಮೆ ಇವೆ ಎಂದರೆ ಅದನ್ನು ಸಹಿಸಲು ಸಾಧ್ಯವಿಲ್ಲ.

ಎರಡು ಮೆಡಿಕಲ್‌ ಕಾಲೇಜುಗಳಲ್ಲಿ ಆಕ್ಸಿಜನ್‌ಬೆಡ್‌ ಹೆಚ್ಚಿಸಬೇಕು ಎಂದರು.ಶ್ರೀದೇವಿ ಮೆಡಿಕಲ್‌ ಕಾಲೇಜು ಪರವಾಗಿ ಡಾ.ರಮಣ್‌ ಹುಲಿನಾಯ್ಕರ್‌ ಮತ್ತು ಸಿದ್ಧಾರ್ಥ ಮೆಡಿಕಲ್‌ ಪರವಾಡಿ ಡಾ.ಪ್ರಭಾಕರ್‌ ನೀಡಿದ ಮಾಹಿತಿಗೆತೃಪ್ತರಾಗದ ಆರೋಗ್ಯ ಸಚಿವರು, ನೀವು ಹಾಸಿಗೆಹೆಚ್ಚಿಸಬೇಕು ಮತ್ತು ತಮ್ಮ ಲ್ಯಾಬ್‌ಗಳಲ್ಲಿ ಕೊರೊನಾಪರೀಕ್ಷೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.ರಾಜ್ಯದಲ್ಲಿ  2015 ವೈದ್ಯರ ನೇಮಕಾತಿ ಆದೇÍ ‌ಆಗಿದ್ದು, ನೇಮಕಾತಿ ಆದೇಶ ನೀಡಲಾಗುತ್ತಿದೆ.ತುಮಕೂರು ಜಿಲ್ಲೆಯಲ್ಲಿಯೂ ಖಾಲಿ ಇರುವ ಎಲ Éಹುದ್ದೆಗಳಿಗೆ ವೈದ್ಯರು ನೇಮಕಗೊಳ್ಳಲಿದ್ದಾರೆ. ಸೋಮವಾರದಿಂದ ಬುಧವಾರದೊಳಗೆ ನೇಮಕಗೊಂv ‌ವೈದ್ಯರು ಸೇವೆಗೆ  ಹಾಜರಾಗಲಿದ್ದಾರೆ. ಇದರಿಂದ ವೈದ್ಯರ ಕೊರತೆ ಸಮಸ್ಯೆ ಬಗೆಹರಿಯಲಿದೆ.ಇದರ ಜೊತೆಗೆ  ಆರೋಗ್ಯ ಸಿಬಂದಿ  ನೇಮಕ ‌ಮಾಡಲಾಗುತ್ತಿದೆ ಎಂದರು.

ಅಗತ್ಯಕ್ಕಿಂತಲೂ ಹೆಚ್ಚುವರಿ ಪೂರೈಕೆ: ಆರೋಗ್ಯಇಲಾಖೆಯಿಂದ ಜಿಲ್ಲೆಗೆ 6 ಆಕ್ಸಿಜನ್‌ ಉತ್ಪಾದನಾಘಟಕಗಳನ್ನು ನೀಡಲಾಗುವುದು. ಈಗಾಗಲೇ ಜಿಲ್ಲಾಸ್ಪತ್ರೆಗೆ ಬುಧವಾರ25 ಆಮ್ಲಜನಕ ಸಾಂದ್ರಕ ನೀಡಲಾಗಿದ್ದು, ಕೋವಿಡ್‌ ಔಷಧಗಳನ್ನು ಅಗತ್ಯಕ್ಕಿಂತಲೂಹೆಚ್ಚುವರಿಯಾಗಿ ಪೂರೈಕೆ ಮಾಡಲಾಗುವುದು.ಸೋಂಕು ದೃಢಪಟ್ಟ ಸೋಂಕಿತನಿಗೆ 5ಗಂಟೆಯೊಳಗೆಕೋವಿಡ್‌ ಮೆಡಿಕಲ್‌ ಕಿಟ್‌ ಅನ್ನು ತಲುಪಿಸಬೇಕು.ಪ್ರತಿ ತಾಲೂಕಿನಲ್ಲಿಯೂ ಶಾಸಕರು, ಅಧಿಕಾರಿಗಳುಕ್ರಿಯಾಶೀಲರಾಗಿ ಪರಿಣಾಮಕಾರಿಯಾಗಿ ಸೋಂಕಿತರಿಗೆ ಮೊದಲನೆ ದಿನದಿಂದಲೇ ಆರೈಕೆ ಮಾಡಲುಪ್ರಾರಂಭಿಸಬೇಕು ಎಂದರು.ಮೂರನೇ ಅಲೆ ಕಡಿವಾಣಕ್ಕೆ ಆರೋಗ್ಯ ಇಲಾಖೆಮೂಲ ಸೌಕರ್ಯ ಹೆಚ್ಚು ಮಾಡಿಕೊಂಡು ಸಮರ್ಪಕವಾಗಿನಿಯಂತ್ರಿಸುವನಿಟ್ಟಿನಲ್ಲಿಯೂಕಾರ್ಯೋನ್ಮುಖವಾಗುತ್ತಿದೆ.

ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆ್ಯಂಬುಲೆನ್ಸ್‌ಗಳಿಗೂ ದರನಿಗದಿ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದರು.ಸ್ವಯಂ ಆಮ್ಲಜನಕ ಉತ್ಪಾದನೆ: ಜಿಲ್ಲಾ ಉಸ್ತುವಾರಿಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಬಿಇಎಲ್‌,ರೋಟರಿ, ವಿಪ್ರೋ ಸಂಸ್ಥೆಯವರು ಆಮ್ಲಜನಕ ಘಟಕಸ್ಥಾಪನೆಗೆ ಮುಂದೆ ಬಂದಿದ್ದಾರೆ. ಹಾಗಾಗಿ ಎಲ್ಲತಾಲೂಕುಮಟ್ಟದ ಆಸ್ಪತ್ರೆಗಳಲ್ಲಿ ಸ್ವಯಂ ಆಮ್ಲಜನಕಉತ್ಪಾದನೆ ಮಾಡಿಕೊಳ್ಳಲು ಅವಕಾಶವಿದೆ.

Advertisement

ಆದ್ದರಿಂದ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಇನ್ನೂ 50ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಡಬೇಕು.ಅಲ್ಲದೆ, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿಗೆ50-100 ಹಾಸಿಗೆಗಳ ಸಮುದಾಯ ಆಸ್ಪತ್ರೆ ಕೊಡಬೇಕು. ಇದರಿಂದ ಮುಂಬರುವ ಕೋವಿಡ್‌ ಅಲೆಯಲ್ಲಿ ಪ್ರತಿ ತಾಲೂಕಿನಲ್ಲಿಯೂ 100 ಹಾಸಿಗೆಗಳವ್ಯವಸ್ಥೆಯಾಗಲಿದ್ದು, ಜಿಲ್ಲೆಯಲ್ಲಿ ಕೋವಿಡ್‌ ನಿಗ್ರಹವನ್ನು ಸಮರ್ಪಕವಾಗಿ ಮಾಡಬಹುದು ಎಂದುಸಚಿವರಿಗೆ ಮನವಿ ಮಾಡಿದರು.ಖಾಸಗಿ ಆಸ್ಪತ್ರೆಯವರು ಜನರಲ್‌ ಬೆಡ್‌ ಮೇಲೆಚಿಕಿತ್ಸೆ ನೀಡಿ ಐಸಿಯು ಬೆಡ್‌ ಚಿಕಿತ್ಸೆಯ ಬಿಲ್‌ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೋದ್ಯಮಿಗಳು ಹಾಗೂ ಸಂಘಸಂಸ್ಥೆಗಳು50 ಸಾವಿರ ಮಾಸ್ಕ್ ಮತ್ತು ಸಾವಿರ ಸ್ಯಾನಿಟೈಸರ್‌, 500-600 ಪಲ್ಸ್‌ ಆಕ್ಸಿಮೀಟರ್‌ ದಾನನೀಡಿದ್ದು, ಗ್ರಾಮ ಮಟ್ಟದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ದುಬಾರಿ ಹಣ ಪಡೆದರೆ ಕ್ರಮ: ಸಿಟಿ ಸ್ಕಾ ನ್‌ಮಾಡಲು ಬರುವ ಜನರಿಂದ ದುಬಾರಿ ಹಣ ವಸೂಲಿಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಒಬ್ಬ ರೋಗಿಯಿಂದ 4,500 ರೂ.ಪಡೆಯುತ್ತಿದ್ದಾರೆಎಂದು ಮಾಹಿತಿ ಇದ್ದು, ಇದಕ್ಕೆ ಕಡಿವಾಣ ಹಾಕಿನಿಗದಿ ಪಡಿಸಿರುವ ದರದಂತೆ ಬಿಪಿಎಲ್‌ ಹೊಂದಿರುವವರಿಗೆ-1500 ರೂ. ಮತ್ತು ಎಪಿಎಲ್‌ 2000 ರೂ.ಪಡೆಯಬೇಕು. ಸಿಟಿ ಸ್ಕಾನ್‌ ಗೆ ಸರ್ಕಾರ ನಿಗದಿಪಡಿಸಿರುವ ದರವನ್ನು ಮಾತ್ರವೇ ಪಡೆಯಬೇಕು.ಅದಕ್ಕಿಂತ ಹೆಚ್ಚು ಪಡೆದರೆ ಕ್ರಮ ಕೈಗೊಳ್ಳಬೇಕು.ಸೋಂಕಿತರಿಗೆ ಔಷಧಗಳ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನಿರ್ದೇಶಿಸಿದರು

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿಯೂ ಕೋವಿಡ್‌ ಸೋಂಕಿನ ನಿಯಂತ್ರಣಕ್ಕಾಗಿಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗ್ರಾಪಂ ಕಾರ್ಯಪಡೆ ಸೋಂಕಿತರ ಮನೆಗೆ ಭೇಟಿ ನೀಡಿ ಪರಿಶೀಲನೆನಡೆಸುತ್ತಿದೆ. ಸೋಂಕು ದೃಢಪಟ್ಟ ಗ್ರಾಮಗಳಿಗೆ ಸ್ಯಾನಿಟೈಸರ್‌ ಮಾಡಿಸಲಾಗುತ್ತಿದೆ. ಕೋವಿಡ್‌ ಕೇರ್‌ಸೆಂಟರ್‌ ತೆರೆದು ಸೋಂಕಿತರನ್ನು ಸ್ಥಳಾಂತರಿಸುವಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಸಂಸದ ಜಿ.ಎಸ್‌. ಬಸವರಾಜು, ಶಾಸಕ ಡಾ. ರಂಗನಾಥ್‌, ಜಿ.ಬಿ.ಜ್ಯೋತಿಗಣೇಶ್‌, ಡಾ.ರಾಜೇಶ್‌ ಗೌಡ,ಬಿ.ಸಿ.ನಾಗೇಶ್‌, ಮಸಾಲೆ ಜಯರಾಮ್‌, ಪಾಲಿಕೆಮೇಯರ್‌ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಡಾ.ಕೆ.ವಂಶಿಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next