Advertisement

ದಡಾರ-ರುಬೆಲ್ಲಾ ತಡೆಗೆ 1.65 ಕೋಟಿ ಮಕ್ಕಳಿಗೆ ಲಸಿಕೆ

03:45 AM Jan 26, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರವು ದಡಾರ ನಿರ್ಮೂಲನೆ ಮತ್ತು ರುಬೆಲ್ಲಾ ನಿಯಂತ್ರಣಕ್ಕೆ ಲಸಿಕಾ ಅಭಿಯಾನ ಆಯೋಜಿಸಲು
ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಫೆ. 7ರಿಂದ 28ರವರೆಗೆ ರಾಜ್ಯಾದ್ಯಂತ 9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್‌ ಹಾಗೂ ಶಿಕ್ಷಣ ಸಚಿವ ತನ್ವೀರ್‌ ಸೇs… ಅವರು ಮಂಗಳವಾರ
ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ರಾಜ್ಯದಲ್ಲಿರುವ 15 ವರ್ಷದೊಳಗಿನ ಸುಮಾರು 1.65 ಕೋಟಿ ಮಕ್ಕಳಿಗೆ ದಡಾರ ಹಾಗೂ ರುಬೆಲ್ಲಾ ಲಸಿಕೆ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವದ್ವಯರು, ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿ ಪ್ರಕಾರ ಈ ಅಭಿಯಾನ
ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯದ ಎಲ್ಲಾ ಆರೋಗ್ಯ ಸಂಸ್ಥೆಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಹಳ್ಳಿ, ಪಟ್ಟಣ ಪ್ರದೇಶ ಮತ್ತು
ಮೊಹಲ್ಲಾಗಳಲ್ಲಿ ಲಸಿಕೆ ನೀಡಲಾಗುವುದು. ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳು, ವಲಸೆ ಬಂದವರ ಮಕ್ಕಳು, ಕಟ್ಟಡ ನಿರ್ಮಾಣ ಮತ್ತು ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕುಟುಂಬದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 

ಲಸಿಕೆ ನೀಡುವ ಸಂದರ್ಭದಲ್ಲಿ ಪಾಲಕರಲ್ಲಿ ಆತಂಕ ಉಂಟಾಗುತ್ತದೆ. ಅದನ್ನು ತಡೆಗಟ್ಟಲು ಪ್ರತಿಯೊಂದು ಶಾಲೆಗಳು ಸಭೆ ನಡೆಸಿ ಈ ಕುರಿತು ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ಶಾಲೆಗಳೇ ಲಸಿಕಾ ಕೇಂದ್ರಗಳಾಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಹೇಳಿದರು.

ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ವಲ್ಲದಿದ್ದರೂ ಒಂಭತ್ತು ತಿಂಗಳಿನಿಂದ ಹದಿನೈದು ವರ್ಷದೊಳಗಿನ ಮಕ್ಕಳು ಲಸಿಕೆ
ಹಾಕಿಸಿಕೊಳ್ಳುವುದು ಉತ್ತಮ. ಮೊದಲೇ ಲಸಿಕೆ ಹಾಕಿಕೊಂಡಿದ್ದರೂ ಮತ್ತೆ ಲಸಿಕೆ ಹಾಕಿಸಿಕೊಳ್ಳಬಹುದು. ಮೊದಲ ಬಾರಿ ಲಸಿಕೆ
ಹಾಕಿಸಿಕೊಂಡಾಗ ಮಕ್ಕಳ ರೋಗ ನಿರೋಧಕ ಶಕ್ತಿ ಶೇ. 85ರಷ್ಟು, ಎರಡನೇ ಬಾರಿ ಹಾಕಿಸಿಕೊಂಡಾಗ ಶೇ. 95ರಷ್ಟು ಹಾಗೂ ಮೂರನೇ ಬಾರಿ ಹಾಕಿದಾಗ ಶೇ. 100ರಷ್ಟು ಹೆಚ್ಚುತ್ತದೆ ಎಂದು ವಿವರಿಸಿದರು.

Advertisement

ಮಕ್ಕಳಿಗೆ ಸಮಸ್ಯೆ ಇಲ್ಲ: ದಡಾರ ಹಾಗೂ ರುಬೆಲ್ಲಾ ಲಸಿಕೆ ತೆಗೆದುಕೊಂಡ ಕೆಲ ಮಕ್ಕಳಲ್ಲಿ ಜ್ವರ ಹಾಗೂ ವಾಂತಿಯ ಲಕ್ಷಣಗಳು ಕಂಡು  ಬರಬಹುದು. ನುರಿತ ವೈದ್ಯರ ತಂಡ ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಲಿದೆ. ಒಂದು ವೇಳೆ ಚಿಕಿತ್ಸಾ ವೆಚ್ಚ ಹೆಚ್ಚಾದರೂ ಸರ್ಕಾರವೇ ಅದನ್ನು ಭರಿಸುತ್ತದೆ ಎಂದು ಅವರು ತಿಳಿಸಿದರು. 

ಹಣ ಪಡೆದರೆ ಜೋಕೆ 

ಸರ್ಕಾರ ಉಚಿತವಾಗಿ ಲಸಿಕೆ ಒದಗಿಸಿದರೂ ಖಾಸಗಿ ಆಸ್ಪತ್ರೆಗಳು ಮಕ್ಕಳ ಪಾಲಕರಿಂದ ಹಣ ವಸೂಲಿ ಮಾಡುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಲಸಿಕೆ ಸಂಪೂರ್ಣ ಉಚಿತವಾಗಿದ್ದು, ಯಾವ ಕಾರಣಕ್ಕೂ ಶುಲ್ಕ ಪಡೆಯುವಂತಿಲ್ಲ. ಒಂದು ವೇಳೆ ಶುಲ್ಕ ಪಡೆದ ಬಗ್ಗೆ ಮಾಹಿತಿ ನೀಡಿದರೆ ಸಂಬಂಧಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next