Advertisement

MCODS: ಮಣಿಪಾಲ ಪ್ರೀಮಿಯಂ ಸಂಜೆ ದಂತ ಚಿಕಿತ್ಸಾಲಯ ಉದ್ಘಾಟನೆ

04:54 PM Aug 01, 2024 | Team Udayavani |

ಮಣಿಪಾಲ: ಮಣಿಪಾಲದ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ(ಎಂಸಿಒಡಿಎಸ್‌) ಮಣಿಪಾಲ ಪ್ರೀಮಿಯಂ ಸಂಜೆ ಕ್ಲಿನಿಕ್‌ನ ಉದ್ಘಾಟನೆ ನಡೆಯಿತು.

Advertisement

ಮಾಹೆ ವಿ.ವಿ. ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್‌ ಅವರು ಈ ಕ್ಲಿನಿಕ್‌ ಉದ್ಘಾಟಿಸಿ, ಇದು ಸ್ಥಳೀಯ ಸಮುದಾಯಕ್ಕೆ ಅಗತ್ಯವಿರುವ ದಂತ ಆರೈಕೆಯ ಬಲವರ್ಧನೆಗೆ ಪೂರಕವಾಗಲಿದೆ. ಈ ಕ್ಲಿನಿಕ್‌ ಸಾರ್ವಜನಿಕರಿಗೆ ಬಹು ಅವಶ್ಯಕ ಸೌಲಭ್ಯವಾಗಿದೆ. ಪ್ರೀಮಿಯಂ ಸಂಜೆ ಡೆಂಟಲ್‌ ಕ್ಲಿನಿಕ್‌ಗಳೊಂದಿಗೆ ಗುಣಮಟ್ಟದ ದಂತ ಆರೈಕೆ ಸಿಗಲಿದೆ. ನಿಯಮಿತ ಕೆಲಸದ ಸಮಯ ಹೊರತುಪಡಿಸಿ ಆಸ್ಪತ್ರೆಗೆ ಭೇಟಿ ನೀಡುವ ವೃತ್ತಿಪರರಿಗೆ, ವಿದ್ಯಾರ್ಥಿಗಳು ಮತ್ತು ಇತರರಿಗೆ ಅನೂಕೂಲವಾಗಲಿದೆ ಎಂದರು.

ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಮಾತನಾಡಿ, ಸಂಜೆ ಡೆಂಟಲ್‌ ಕ್ಲಿನಿಕ್‌ಗಳು ಎಲ್ಲ ಕೆಲಸದ ದಿನಗಳಲ್ಲಿ ಸಂಜೆ 5 ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿದೆ. ವಿಸ್ತೃತ ಸೇವೆಯನ್ನು ಒದಗಿಸುತ್ತದೆ. ದಂತ ವೈದ್ಯರು ಸಮಾಲೋಚನೆಗಾಗಿ ಲಭ್ಯವಿರುತ್ತಾರೆ ಮತ್ತು ದಂತ ಸಂಬಂಧಿತ ಕಾರ್ಯವಿಧಾನಗಳು ಲಭ್ಯವಿದ್ದು, ಸಮುದಾಯದ ದಂತ ಆರೋಗ್ಯ ಅಗತ್ಯಗಳನ್ನು ಪೂರೈಸಲಿದೆ ಎಂದರು.

ಸಂಜೆ ಚಿಕಿತ್ಸಾಲಯದಲ್ಲಿ ಬಾಯಿಯ ಆರೋಗ್ಯ ತಪಾಸಣೆ ಮತ್ತು ಆರೈಕೆ, ಮಕ್ಕಳ ದಂತ ಚಿಕಿತ್ಸೆ , ರೂಟ್‌ ಕೆನಾಲ್‌ ಚಿಕಿತ್ಸೆ ಮತ್ತು ಫಿಲ್ಲಿಂಗ್‌, ಹಲ್ಲು ಕೀಳುವುದು ಮತ್ತು ಹಲ್ಲಿನ ಶಸ್ತ್ರಚಿಕಿತ್ಸೆ, ಬದಲಿ ಹಲ್ಲು ಜೋಡಣೆ ಹಾಗೂ ಇಂಪ್ಲಾಂಟಾಲಜಿ ಚಿಕಿತ್ಸೆ, ವಕ್ರದಂತ ಚಿಕಿತ್ಸೆ , ಸೌಂದರ್ಯ ದಂತ ವೈದ್ಯ ಕಾರ್ಯವಿಧಾನ ಸೇರಿದಂತೆ ಎಲ್ಲ ರೀತಿಯ ದಂತ ಚಿಕಿತ್ಸೆ ಮತ್ತು ಕಾರ್ಯವಿಧಾನ ಲಭ್ಯವಿರಲಿದೆ.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ| ಆನಂದ್‌ ವೇಣುಗೋಪಾಲ್‌, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ, ಹಿರಿಯ ದಂತ ವೈದ್ಯರು ಉಪಸ್ಥಿತರಿದ್ದರು. ಎಂಸಿಒಡಿಎಸ್‌ ಡೀನ್‌ ಡಾ| ಮೋನಿಕಾ ಸಿ. ಸೊಲೊಮನ್‌ ಪ್ರಸ್ತಾವನೆಗೈದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next