Advertisement

ಬ್ಯಾಟ್ಸ್‌ಮನ್‌ ಅಲ್ಲ, “ಬ್ಯಾಟರ್‌’!

09:36 PM Sep 22, 2021 | Team Udayavani |

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಿಗೆ ತಿದ್ದುಪಡಿ ಮಾಡುವ ಸಂಸ್ಥೆ ಎಂಸಿಸಿ (ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌) ಈ ಬಾರಿ ಅತ್ಯಂತ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಇದುವರೆಗೆ ಪುರುಷ ಮತ್ತು ಮಹಿಳಾ ತಂಡಗಳಲ್ಲಿ ಬ್ಯಾಟ್‌ ಮಾಡುವ ಆಟಗಾರರನ್ನು ಬ್ಯಾಟ್ಸ್‌ಮನ್‌ (ಏಕವಚನ) ಅಥವಾ ಬ್ಯಾಟ್ಸ್‌ಮೆನ್‌ (ಬಹುವಚನ) ಎಂದು ಕರೆಯಲಾಗುತ್ತಿತ್ತು. ಇನ್ನು ಮುಂದೆ ಅವರನ್ನು ಬ್ಯಾಟರ್‌ ಅಥವಾ ಬ್ಯಾಟರ್ಸ್‌ ಎನ್ನಲಾಗುತ್ತದೆ. ಕ್ರಿಕೆಟ್‌ನಲ್ಲಿ ಲಿಂಗ ತಾರತಮ್ಯ ಇರಬಾರದು, ಎಲ್ಲರನ್ನೂ ಒಳಗೊಳ್ಳುವ ಪದ ಇರಬೇಕೆಂದು ಈ ಬದಲಾವಣೆ ಮಾಡಿಕೊಳ್ಳಲಾಗಿದೆ.

Advertisement

ಬ್ಯಾಟ್ಸ್‌ಮನ್‌ ಪದ ಪುಲ್ಲಿಂಗ, ಇದು ಪುರುಷರಿಗೆ ಬಳಸುವಂಥದ್ದು. ಮಹಿಳೆಯರಿಗೆ ಯಾವ ಪದ ಬಳಸುವುದು ಎಂಬ ಬಗ್ಗೆ ನಿರಂತರ ಚರ್ಚೆಯಾಗುತ್ತಿತ್ತು. 2017ರಲ್ಲಿ ಇದೇ ವಿಚಾರ ಚರ್ಚೆಗೆ ಬಂದಾಗ ಐಸಿಸಿ ಮತ್ತು ಎಂಸಿಸಿ ಪರಸ್ಪರ ಚರ್ಚಿಸಿ ಬ್ಯಾಟ್ಸ್‌ಮನ್‌ ಪದವನ್ನೇ ಉಳಿಸಿಕೊಂಡಿದ್ದವು. ಕೆಲವರು “ಬ್ಯಾಟ್ಸ್‌ವುಮನ್‌’ ಎಂದು ಬಳಸಿದ್ದೂ ಇದೆ. ಈ ಬಾರಿ ಮಾತ್ರ “ಬ್ಯಾಟರ್‌’ ಪದಕ್ಕೆ ಸಮ್ಮತಿಯ ಮುದ್ರೆಯನ್ನೊತ್ತಲಾಗಿದೆ. ಆದರೆ ಬೌಲರ್‌, ಫೀಲ್ಡರ್‌ ಪದಗಳು ನಿಯಮಗಳ ವ್ಯಾಪಿತ್ತಯಲ್ಲೇ ಬರುತ್ತವೆ, ಇಲ್ಲಿ ಬದಲಾವಣೆ ಅಗತ್ಯವಿಲ್ಲ ಎಂದು ಎಂಸಿಸಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next