Advertisement

MC Stan: 9 ಮಿಲಿಯನ್‌ ಫಾಲೋವರ್ಸ್​ಯಿದ್ದ ಬಿಗ್‌ ಬಾಸ್‌ ವಿಜೇತನ ಯೂಟ್ಯೂಬ್ ಚಾನೆಲ್ ಹ್ಯಾಕ್

03:41 PM Mar 12, 2024 | Team Udayavani |

ಮುಂಬಯಿ: ಬಿಗ್‌ ಬಾಸ್‌ 16 ವಿಜೇತ ಖ್ಯಾತ ರ‍್ಯಾಪರ್ ಎಂಸಿ ಸ್ಟಾನ್‌  ತನ್ನ ಯೂಟ್ಯೂಬ್‌ ಚಾನೆಲ್‌ ಹ್ಯಾಕ್‌ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

Advertisement

ತನ್ನ ರ‍್ಯಾಪ್‌ ಹಾಡುಗಳಿಂದಲೇ ಲಕ್ಷಾಂತರ ಹಿಂಬಾಲಕರನ್ನು ಪಡೆದಿರುವ ಸ್ಟಾನ್‌  , ಸಲ್ಮಾನ್‌ ಖಾನ್‌ ಅವರ ಬಿಗ್‌ ಬಾಸ್‌ 16 ಕಾರ್ಯಕ್ರಮದಲ್ಲಿ ಭಾಗಿಯಾಗಿ, ವಿಜೇತರಾಗಿ ಹೊರಹೊಮ್ಮಿದ್ದರು. ಆ ಮೂಲಕ ಅವರಿಗೆ ಮತ್ತಷ್ಟು ಜನಪ್ರಿಯತೆ ಸಿಕ್ಕಿದೆ. ಎಂಸಿ ಸ್ಟಾನ್‌  ಅವರ ಯೂಟ್ಯೂಬ್‌ ಚಾನೆಲ್‌ ನಲ್ಲಿ 9.38 ಮಿಲಿಯನ್‌ ಸಬ್‌ ಸ್ಕ್ರೈಬರ್ಸ್‌ ಗಳಿದ್ದಾರೆ.

ಸ್ಟಾನ್‌  ಅವರ ಯೂಟ್ಯೂಬ್‌ ಚಾನೆಲ್‌ ಹ್ಯಾಕರ್ಸ್‌ ಗಳು ಹ್ಯಾಕ್‌ ಮಾಡಿದ್ದು, ಬಿಟ್‌ ಕಾಯಿನ್‌ ಸಂಬಂಧಿತ ವಿಡಿಯೋಗಳನ್ನು ಆಪ್ಲೋಡ್‌ ಮಾಡಿದ್ದಾರೆ. ಈ ಕುರಿತು ಎಂಸಿ ಸ್ಟಾನ್‌  ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

“ಫ್ಯಾಮ್, ನನ್ನ ಯೂಟ್ಯೂಬ್ ಚಾನೆಲ್ ಅನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಸಮಸ್ಯೆ ಏನೆಂದು ನನಗೆ ಗೊತ್ತಿಲ್ಲ. ದಯವಿಟ್ಟು ಸ್ವಲ್ಪ ತಾಳ್ಮೆಯಿಂದಿರಿ” ಎಂದು ಬರೆದುಕೊಂಡಿದ್ದಾರೆ.

ಅವರ ಯೂಟ್ಯೂಬ್‌ ಚಾನೆಲ್‌ ನಲ್ಲಿ ಹಾಕಿರುವ ವಿಡಿಯೋದಲ್ಲಿ ಕ್ಯೂಆರ್‌ ಕೋಡ್‌ ನ್ನು ಹಾಕಲಾಗಿದೆ. ಈ ಕುರಿತು ಎಂಸಿ ಸ್ಟಾನ್‌  “QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಮತ್ತು ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ನಿಮಗೆ ಗೊತ್ತಿಲ್ಲ, ನೀವು ವಂಚನೆಗೊಳಗಾಗಬಹುದು” ಎಂದು ಬರೆದುಕೊಂಡಿದ್ದಾರೆ.

Advertisement

ʼಯೂಟ್ಯೂಬ್‌ ಇಂಡಿಯಾʼ ಗೆ ಅವರು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next