Advertisement
ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿರುವ ಪ್ರಶ್ನೆ ಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಉತ್ತರದಿಂದ ಈ ಮಾಹಿತಿ ಸಿಕ್ಕಿದೆ. ಝಾರ್ಖಂಡ್, ಮಹಾರಾಷ್ಟ್ರ, ಬಿಹಾರ, ಕೇರಳ ಸಹಿತ 12 ರಾಜ್ಯಗಳು ಹಾಗೂ 4 ಕೇಂದ್ರಾಡಳಿತ ಪ್ರದೇಶಗಳು ಈ ಪ್ರಸ್ತಾವ ವನ್ನು ಬೆಂಬಲಿಸಿವೆ. ಆದರೆ, ಕರ್ನಾಟಕ, ಆಂಧ್ರ, ಗೋವಾ ಸಹಿತ 9 ರಾಜ್ಯಗಳು ಪರೀಕ್ಷೆಯನ್ನು ವಿರೋಧಿಸಿವೆ ಎಂದು ಸಚಿವಾಲಯ ತಿಳಿಸಿದೆ.
ಕೇವಲ ಸರಕಾರಿ ಮಾತ್ರವಲ್ಲ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಮುಗಿಸಿದವರೂ ಈ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಆಯಾ ವೈದ್ಯಕೀಯ ಕಾಲೇಜುಗಳಿಗೆ ದರ್ಜೆಗಳನ್ನು ನೀಡಲಾಗುತ್ತದೆ. ಪ್ರತಿ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶವನ್ನೂ ಬಹಿರಂಗಗೊಳಿಸಲಾಗುತ್ತದೆ.
Related Articles
ಎಲ್ಲ ಸರಕಾರಿ ವೈದ್ಯ ಕಾಲೇಜುಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಸರಕಾರ/ ಕೇಂದ್ರಾಡಳಿತ ಪ್ರದೇಶಗಳ ವೈದ್ಯಕೀಯ ಅಧಿಕಾರಿಗಳಿಗೆ ಮೀಸಲಿಡಬೇಕು. ಯಾವ ಅಧಿಕಾರಿಯು ಕುಗ್ರಾಮ ಅಥವಾ ಕಷ್ಟಕರ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೋ ಅವರಷ್ಟೇ ಕೋಟಾ ಪಡೆಯಲು ಅರ್ಹರಾಗಿರುತ್ತಾರೆ ಎನ್ನುತ್ತದೆ ಮಸೂದೆ.
Advertisement
ವಿರೋಧಿಸುವವರ ವಾದವೇನು?ಭಾರತದಲ್ಲಿ ಎಂಬಿಬಿಎಸ್ ಎನ್ನುವುದೇ ಅತೀ ಕಷ್ಟದ ಕೋರ್ಸ್. ಪರೀಕ್ಷೆಗಳಂತೂ ಕಬ್ಬಿಣದ ಕಡಲೆ. ಪ್ರತಿಭಾ ವಂತರಷ್ಟೇ ಪಾಸಾಗಿ ಈ ಕೋರ್ಸ್‌ಗೆ ಸೇರುತ್ತಾರೆ. ಹೀಗಿರುವಾಗ ಮತ್ತೂಮ್ಮೆ ಅವರನ್ನು ಪರೀಕ್ಷೆಗೊಳ ಪಡಿಸಬೇಕು ಎನ್ನುವ ವಾದ ಸರಿಯಲ್ಲ.
ಇದು ವೈದ್ಯಕೀಯವಾಗಿ ಪದವೀಧರನಾದ ವ್ಯಕ್ತಿಗೆ ವೈದ್ಯನಾಗಿ ಕೆಲಸ ಮಾಡಲು ಅವಕಾಶ ನಿರಾಕರಿಸಿದಂತೆ ಹಾಗೂ ದೌರ್ಜನ್ಯ ಎಸಗಿದಂತೆ. ಈ ಪರೀಕ್ಷೆಯು ಭಾರತದಲ್ಲಿ ಎಂಬಿಬಿಎಸ್ ಪದವೀಧರರ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ನೆಕ್ಸ್ಟ್ ಜಾರಿಯಾದರೆ, ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಪಡೆಯುವ ವೈದ್ಯ ಪದವಿಗೆ ಅಂಥ ವ್ಯತ್ಯಾಸ ವೇನೂ ಇರುವುದಿಲ್ಲ. ಹಾಗಾಗಿ ಹೆಚ್ಚಿನವರು ವಿದೇಶ ವನ್ನೇ ಆಯ್ಕೆ ಮಾಡಿಕೊಳ್ಳಬಹುದು. ನೆಕ್ಸ್ಟ್ನಲ್ಲಿ ಪಾಸಾಗದವರು ನಿರುದ್ಯೋಗಿಗಳಾಗುತ್ತಾರೆ. ಖಾಸಗಿ ಆಸ್ಪತ್ರೆಗಳು ಅವರನ್ನು ಕಡಿಮೆ ವೇತನ ಕೊಟ್ಟು ತಾರತಮ್ಯ ಮಾಡುವ ಸಾಧ್ಯತೆಯಿರುತ್ತದೆ. ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು ಕರ್ನಾಟಕ ವಿರೋಧಿಸಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕೇಂದ್ರ ಜಾರಿಗೊಳಿಸಿದರೆ ಅದಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಶ್ನೆ ಉದ್ಭವಿಸಲ್ಲ.
ಡಾ| ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ