Advertisement

ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮೇಯರ್‌ ಕರೆ

11:31 AM Aug 21, 2017 | |

ಬೆಂಗಳೂರು: ಸಾರ್ವಜನಿಕರು ಗಣಪತಿ ಮೂರ್ತಿಗಳನ್ನು ಮನೆಗಳಲ್ಲೇ ತಯಾರಿಸಿ ಪೂಜಿಸುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಣೆ ಮಾಡಬೇಕು ಎಂದು ಮೇಯರ್‌ ಜಿ.ಪದ್ಮಾವತಿ  ಕರೆ ನೀಡಿದರು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ “ಜಾಗೃತಿಗಾಗಿ ಓಟ’ಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಗಣೇಶ ಹಬ್ಬದಂದು ಮೂರ್ತಿ ಪೂಜೆ ಮಾಡುವವರು ಮಣ್ಣಿ ನ ಗಣೇಶನನ್ನೇ ಪೂಜಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಗ್ರೀನ ಸ್ಟೇಜ್‌ ತಂಡದವರು ಬೀದಿ ನಾಟಕದ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಣೆ ಕುರಿತು ಜಾಗೃತಿ ಮೂಡಿಸಿದರು. ಜಾಗೃತಿ ಓಟದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರು ಪಾಲ್ಗೊಂಡಿದ್ದರು.

ಕಬ್ಬನ್‌ ಉದ್ಯಾನದ ಮುಖ್ಯ ದ್ವಾರದಿಂದ ಆರಂಭವಾದ ಓಟ, ಕೇಂದ್ರ ಗ್ರಂಥಾಲಯದ ಮೂಲಕ ನೃಪತುಂಗ ರಸ್ತೆಯಲ್ಲಿ ಸಾಗಿ ಮತ್ತೆ ಕಬ್ಬನ್‌ ಮುಖ್ಯದ್ವಾರಕ್ಕೆ ಬಂದು ತಲುಪಿತು. ಓಟದಲ್ಲಿ ಪಾಲಿಕೆಯ ತೆರಿಗೆ ಅಧಿಕಾರಿ ಸುಧಾಕರ್‌ ಹಾಗೂ ಆಶಾ ಅವರು ಮೊದಲ ಸ್ಥಾನ ಪಡೆದು ತಲಾ 10 ಸಾವಿರ ನಗದು ಬಹುಮಾನ ಪಡೆದರು.

ರಸ್ತೆ ಓಟದಲ್ಲಿ ಭಾಗವಹಿಸಿದ್ದವರು ಸಾರ್ವಜನಿಕರಿಗೆ ಪರಿಸರ ಗಣಪತಿಯ ಬಗ್ಗೆ ಅರಿವು ಮೂಡಿಸಲು ಕರಪತ್ರ ವಿತರಿಸಿದರು. ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಸಂಘದ ಅಧ್ಯಕ್ಷ ಎ.ಅಮೃತರಾಜ್‌, ಗೌರವಾಧ್ಯಕ್ಷ ಎಚ್‌.ವಿ.ಅಶ್ವತ್ಥ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next