Advertisement

ಇಂಡೋ- ಕಿವೀಸ್ ಕದನ: ಹಿನ್ನಡೆ ಅನುಭವಿಸಿದ ಭಾರತಕ್ಕೆ ಆಸರೆಯಾದ ಅಗರ್ವಾಲ್

10:12 AM Feb 24, 2020 | keerthan |

ವೆಲ್ಲಿಂಗ್ಟನ್: ಭಾರತ ಮತ್ತು ಕಿವೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 183 ರನ್ ಗಳ ಹಿನ್ನಡೆ ಅನುಭವಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾಗೆ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ.

Advertisement

216 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಇಂದು ಬ್ಯಾಟಿಂಗ್ ಆರಂಭಿಸಿ 348 ರನ್ ಗಳಿಸಿತು. ಇಂದು ಕಾಲಿನ್ ಡಿ ಗ್ರಾಂಡ್ ಹೋಮ್ 43 ರನ್ ಕೈಲ್ ಜ್ಯಾಮಿಸನ್ 44 ರನ್ ಮತ್ತು ಟ್ರೆಂಟ್ ಬೌಲ್ಟ್ 38 ರನ್ ಗಳಿಸಿ ಕಿವೀಸ್ ಲೀಡ್ ಅನ್ನು ಹೆಚ್ಚಿಸುವಂತೆ ಮಾಡಿದರು.

ಭಾರತ ಪರ ವೇಗಿ ಇಶಾಂತ್ ಶರ್ಮಾ ಐದು ವಿಕೆಟ್ ಪಡೆದರೆ, ಅಶ್ವಿನ್ ಮೂರು ವಿಕೆಟ್ ಪಡೆದರು. ಬುಮ್ರಾ ಮತ್ತು ಶಮಿ ತಲಾ ಒಂದು ವಿಕೆಟ್ ಪಡೆದರು.

183 ರನ್ ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಪೃಥ್ವಿ ಶಾ ಮತ್ತೆ ಕೈ ಹಿಡಿಯಲಿಲ್ಲ. ಕೇವಲ 14 ರನ್ ಗೆ ಶಾ ಔಟಾದರೆ, 81 ಎಸೆತ ಎದುರಿಸಿದ ಪೂಜಾರ 11 ರನ್ ಗಳಿಸಿ ಔಟಾದರು. ಕನ್ನಡಿಗ ಮಯಾಂಕ್ ಅಗರ್ವಾಲ್ ಅರ್ಧಶತಕ ಬಾರಿಸಿದ್ದಾರೆ. ಚಹಾ ವಿರಾಮದ ವೇಳೆ ಭಾರತ ಎರಡು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next