Advertisement
ಜಪ್ಪಿನಮೊಗರುವಿನಲ್ಲಿ ಕಡೇಕಾರ್‌ನಿಂದ ತಾರ್ದೊಲ್ಯ ಹೋಗುವ ರಸ್ತೆಯು ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಆದರೆ, ಕೆಲವು ತಿಂಗಳ ಹಿಂದೆ ಡ್ರೈನೇಜ್ ಕಾಮಗಾರಿಗಾಗಿ ಈ ರಸ್ತೆಯನ್ನು ಅಗೆದದ್ದು ಬಿಟ್ಟರೆ, ಮತ್ತೆ ರಸ್ತೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಸ್ಥಳೀಯ ನಿವಾಸಿಗಳ ದ್ವಿಚಕ್ರ ವಾಹನಗಳಿಗಂತು ಈ ರಸ್ತೆ ನಿತ್ಯ ಸಮಸ್ಯೆಯ ಕೂಪವಾಗಿದೆ.
Related Articles
Advertisement
ಇದಿಷ್ಟು ಪಂಪ್‌ವೆಲ್-ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿ ರುವ ನಗರ ವ್ಯಾಪ್ತಿಯ ಸಂಗತಿಯಾದರೆ, ಬೆಂಗ ಳೂರು ರಾ.ಹೆದ್ದಾರಿ 75ಕ್ಕೆ ಸಂಪರ್ಕ ಕಲ್ಪಿಸುವ ಪಡೀಲ್ ಸನಿಹದ ಬಜಾಲ್, ಅಳಪೆ ಉತ್ತರದ ಕಥೆ ಮತ್ತೂಂದು ರೀತಿಯಿದೆ.
ಇನ್ನಷ್ಟು ಸುಧಾರಣೆಯಾಗಬೇಕಿದೆಅಳಪೆ ಉತ್ತರ ಭಾಗ ಸಾಮಾನ್ಯವಾಗಿ ಗ್ರಾಮೀಣ ಪರಿಸರವನ್ನು ಹೊಂದಿರುವ ನಗರ ವ್ಯಾಪ್ತಿ. ಹಳ್ಳಿಯ ಸೊಗಡನ್ನು ವ್ಯಾಪಿಸಿ ರುವ ಇಲ್ಲಿ ಡಾಮರು ರಸ್ತೆಗಳು ಸಾಕಷ್ಟು ಕಾಣಸಿಗುತ್ತಿವೆ. ಆದರೆ ಎಲ್ಲವೂ ಸರಿ ಇದೆ ಎನ್ನುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಕೊಡಕ್ಕಲ್ ವೈದ್ಯನಾಥ ದೇವಸ್ಥಾನದಿಂದ ರೈಲ್ವೇ ಅಂಡರ್‌ಪಾಸ್‌ವರೆಗಿನ ರಸ್ತೆ ಇನ್ನಷ್ಟು ಸುಧಾರಣೆಯಾಗಬೇಕಿದೆ. ಅಲ್ಲಿಂದ ನೂಜಿಗೆ ಸಂಪರ್ಕಿಸುವ ರಸ್ತೆ ಕೂಡ ಡಾಮರು ಕಿತ್ತು ಹೋಗಿದ್ದು, ಸವಾರರು ಸಂಕಷ್ಟ ಪಡುವಂತಾಗಿದೆ. ಸದ್ಯ ಮಳೆ ಕೂಡ ಕಾಡುತ್ತಿರುವ ಕಾರಣದಿಂದ ಒಳರಸ್ತೆ ಸುಧಾರಣೆಯಾಗಿಲ್ಲ. ಜನವಸತಿ ವ್ಯಾಪ್ತಿಯನ್ನು ಹೊಂದಿರುವ ಇಲ್ಲಿನ ರಸ್ತೆಗೆ ಪುನರುಜ್ಜೀವ ನೀಡಬೇಕಿದೆ. ಈ ಮಧ್ಯೆ ಸರಿಪಳ್ಳ ರಸ್ತೆ ಹೊಸ ನಿರೀಕ್ಷೆಯೊಂದಿಗೆ ವಿಸ್ತರಣೆ ಯೊಂದಿಗೆ ಸುಸಜ್ಜಿತಗೊಳ್ಳುತ್ತಿರುವುದು ಸ್ಥಳೀಯರಿಗೆ ಕೊಂಚ ಸಮಾಧಾನ. ಬಜಾಲ್ ವ್ಯಾಪ್ತಿ ಗ್ರಾಮೀಣ ಸೊಗಡು ಹೊಂದಿರುವ ಪ್ರದೇಶ. ತೀರಾ ಗ್ರಾಮೀಣ ಸ್ವರೂಪದ ಚಿತ್ರಣ ಈ ವ್ಯಾಪ್ತಿಯಲ್ಲಿದೆ. ಜತೆಗೆ ಗುಡ್ಡಗಾಡು ವ್ಯಾಪ್ತಿಯನ್ನು ಒಳಗೊಂಡಿ ರುವ ಪ್ರದೇಶವಿದು. ಹೆಚ್ಚಾ ಕಡಿಮೆ ಇಲ್ಲಿ ಡಾಮರು ರಸ್ತೆ ಇದೆಯಾದರೂ ಸುಧಾರಣೆಯಾಗಲು ಅವಕಾಶ ತುಂಬಾ ಇದೆ. ಜನವಸತಿ ವ್ಯಾಪ್ತಿಯನ್ನು ಒಳಗೊಂಡ ಇಲ್ಲಿ ಒಳರಸ್ತೆಯನ್ನು ವಿಭಿನ್ನ ನೆಲೆಯಲ್ಲಿ ಅಭಿವೃದ್ಧಿಪಡಿಸಬಹುದಾಗಿದೆ. ನಾಗರಿಕರ ಬೇಡಿಕೆಗಳೇನು?
-ಒಳರಸ್ತೆಯಿಂದ ರಾ.ಹೆದ್ದಾರಿಗೆ ಸಂಪರ್ಕಕ್ಕೆ ಎದುರಾಗಿರುವ ಬಹು ಸಮಸ್ಯೆಗಳಿಗೆ ಪರಿಹಾರ.
– ಜಪ್ಪು ನೇತ್ರಾವತಿ ಸೇತುವೆಯ ಕೆಳಭಾಗದ ಕಚ್ಚಾರಸ್ತೆ ಸುಧಾರಣೆಯಾಗಲಿ.
– ಮೋರ್ಗನ್‌ಗೇಟ್ ಜಪ್ಪಿನಮೊಗರು ರಸ್ತೆ ದುರಸ್ತಿಯಾಗಲಿ.
– ಅಗೆದು ಹಾಕಿರುವ ತಂದೊಲಿಗೆ ರಸ್ತೆ ಸರಿಯಾಗಲಿ.
– ಕೊಡಕ್ಕಲ್-ನೂಜಿ ರಸ್ತೆ ಸರಿಯಾಗಬೇಕಿದೆ.
– ಸರಿಪಳ್ಳ ರಸ್ತೆ ಶೀಘ್ರ ಮುಕ್ತಾಯವಾಗಲಿ. ಜಪ್ಪಿನಮೊಗರು, ಅತ್ತಾವರ ಅಳಪೆ ಉತ್ತರ, ಬಜಾಲ್ ವಾರ್ಡ್‌ಗಳಲ್ಲಿ ಉದಯವಾಣಿ ಸುದಿನ ತಂಡ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದು, ಈ ಪ್ರದೇಶದ ಕೆಲವೆಡೆ ಡ್ರೈನೇಜ್ ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಮತ್ತೆ ಸರಿಪಡಿಸಿಲ್ಲ. ಹಲವಡೆ ರಸ್ತೆಯ ಡಾಮರು ಕಿತ್ತು ಹೋಗಿ ಹೊಂಡಗಳು ಸೃಷ್ಟಿಯಾಗಿದ್ದು, ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 9900567000 ನಂಬರ್‌ಗೆ ಕಳುಹಿಸಬಹುದು. -ದಿನೇಶ್ ಇರಾ ಚಿತ್ರಗಳು: ಸತೀಶ್ ಇರಾ