ಮುಂಬಯಿ : ರಾಮರಾಜ ಕ್ಷತ್ರಿಯ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯ 41ನೇ ವಾರ್ಷಿಕ ಮಹಾಸಭೆಯು ಜ. 30ರಂದು ಸಾಕಿನಾಕಾದ ಸಾಗರ್ ಪ್ಲಾಜಾ ಸಭಾಗೃಹದಲ್ಲಿ ರಾಮರಾಜ ಕ್ಷತ್ರಿಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಕೆ. ಶ್ರೀಧರ್ ಶೇರೆಗಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಸ್ಥೆಯ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ವನ್ನು ಸೊಸೈಟಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುಧಾಕರ್ ಕೆ. ಹಾಗೂ ಸೊಸೈಟಿಯ ಪ್ರಬಂಧಕರಾದ ಜಯಂತ್ ಗಂಗೂಲಿ, ಸದಾಶಿವ ಜಿ. ಬಂಗೇರ ಅವರು ಸಭೆಯಲ್ಲಿ ಮಂಡಿಸಿದರು. ಮಹಾಸಭೆಯಲ್ಲಿ ಗ್ರಾಹಕರಿಗೆ ಶೇ. 10ರಷ್ಟು ಡಿವಿಡೆಂಟ್ ಘೋಷಿಸಲಾಯಿತು. ಲೆಕ್ಕ ಪರಿಶೋಧಕರಾಗಿ ಸಿಎ ರಮೇಶ್ ಶೆಟ್ಟಿ ಅವರನ್ನು ಹಾಗೂ ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಕೆ. ವಿಶ್ವನಾಥ್ ಹೆಗ್ಗಡೆ, ಪ್ರಭಾಕರ್ ವಿ. ನಾಯಕ್, ಪೂರ್ಣಾನಂದ ಶೇರೆಗಾರ್ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಶ್ರೀಧರ ಶೇರೆಗಾರ್ ಅವರು, ರಾಮರಾಜ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿ ಸದಸ್ಯ ಬಾಂಧವರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ನಡೆ ಯುತ್ತಿದ್ದು, ಇನ್ನು ಮುಂದೆಯೂ ಎಲ್ಲರ ಸಹಕಾರ ಪ್ರೋತ್ಸಾಹ ಬೇಕಾಗಿದೆ ಎಂದು ತಿಳಿಸಿ, ಸಂಸ್ಥೆಯ ಪ್ರಗತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ
ಸಲ್ಲಿಸಿ ಶುಭ ಹಾರೈಸಿದರು.
ಇದನ್ನೂ ಓದಿ:ದಾನ-ಧರ್ಮಕ್ಕೆ ಕುಕ್ಯಾನರು ಸದಾ ಸ್ಮರಣೀಯರು: ಗೋಪಾಲ್ ವೈ. ಶೆಟ್ಟಿ
ಉಪ ಕಾರ್ಯಾಧ್ಯಕ್ಷರಾದ ಬಿ. ಗಣಪತಿ, ಸದಸ್ಯರಾದ ಎನ್. ಎಸ್. ಶೇರೆಗಾರ್, ದೇವರಾಯ ಎಂ. ಶೇರೆಗಾರ್, ಆಶಾ ಶೇರೆಗಾರ್, ವೆಂಕಟೇಶ್ ಬಿಜೂರು, ಸಲಹಾ ಸಮಿತಿಯ ಜೆ. ಸುಬ್ರಾಯ ಶೇರೆಗಾರ್, ವೆಂಕಟೇಶ ಆರ್. ನಾಯಕ್, ಕೆ. ನಾರಾಯಣ್ ಶೇರೆಗಾರ್ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಬಾಂಧವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಸುಭಾಷ್ ಶಿರಿಯಾ