ಮಣಿಪಾಲ: ಭೋಪಾಲ್ ಅನಿಲ ದುರಂತದಂತಹ ಪ್ರಕರಣಗಳ ಬಳಿಕವೂ ಈ ಕಾಲದಲ್ಲೂ ಸಹ ವಿಷಾನಿಲ ದುರಂತ ಸಹಿತ ಕೈಗಾರಿಕಾ ದುರಂತಗಳನ್ನು ತಪ್ಪಿಸುವ ತಂತ್ರಜ್ಞಾನ/ವ್ಯವಸ್ಥೆಗಳು ನಮ್ಮಲ್ಲಿ ಇಲ್ಲದಿರುವ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ದಾವೂದ್ ಕೂರ್ಗ್: ಬೇರೆ ದೇಶಗಳಲ್ಲಿ ಇದನ್ನು ಯಾವ ರೀತಿ ನಿರ್ವಹಣೆ ಮಾಡ್ತಿದ್ದಾರೆ ಎನ್ನುವುದನ್ನು ನೋಡಿಕಲಿಯಬೇಕು.
ಸೈಮನ್ ಫೆರ್ನಾಂಡಿಸ್: ನಾವುಗಳು ಯಾವುದೇ ದುರಂತಗಳಿಂದಲೂ ಇನ್ನೂ ಬುದ್ಧಿ ಕಲಿತಿಲ್ಲ ಕಲಿಯುವುದು ಇಲ್ಲಾ ಕೆಲವೇ ದಿನಗಳಲ್ಲಿ ಎಲ್ಲವನ್ನು ಮರೆತುಬಿಡುತ್ತೇವೆ ಇನ್ನೊಂದು ದುರಂತ ನಡೆಯುವ ತನಕ ಯಾರು ಎಚ್ಚತ್ತು ಕೊಳ್ಳುವುದಿಲ್ಲ ಯಾಕೆ? ಅವರು ಇವರನ್ನು ಇವರು ಅವರನ್ನು ದೂರುವುದು ಬಿಟ್ಟರೆ ಮತ್ತೆ ಏನೂ ಇಲ್ಲಾ. ಇದು ಪ್ರತಿಯೊಬ್ಬರ ಅಜಾಗೂರಕತೆಯೇ ಸರಿ. ಇನ್ನೆಷ್ಟು ಜೀವಗಳ ಬಲಿ ಪಡೆ ದುಕೊಳ್ಳಬೇಕೋ ತಿಳಿಯುತಿಲ್ಲ.
ನಟರಾಜನ್ ಸುರೇಶ್: ತಂತ್ರಜ್ಞಾನ ಸುಧಾರಿಸಿದ್ರು , ವ್ಯವಸ್ಥೆ ಹಳ್ಳ ಹಿಡಿದಿದೆ
ಶ್ರೀನಿವಾಸ ನೆಲಮಂಗಲ: ಎಲ್ಲಾ ಆದ್ಮೇಲೆ ಕನಪ್ಪಾ ಗೊತ್ತಾಗೋದು. ಮುಂಚೆ ಯಾವನು ಎಂದ್ರು ಬಗ್ಗೆ ಯೋಚನೆ ಕೂಡ ಮಾಡಲ್ಲ
ರಾಘವೇಂದ್ರ ಬಿಲ್ಲವ: ಇಂತಹ ಫ್ಯಾಕ್ಟರಿಗಳು ಜನವಸತಿಯಿಂದ ಬಹಳ ದೂರ ಸ್ಥಾಪನೆಗೊಳ್ಳುವುದು ಉತ್ತಮ. ಈ ದುರಂತಕ್ಕೆ ಕಂಪನಿಯು ನೇರ ಕಾರಣ. ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಬಡವರ ಜೀವಕ್ಕೊಂದು ನ್ಯಾಯ ನೀಡಬೇಕು.
ಗಿರೀಶ್ ಗಿರೀಶ್: ಜನ ವಾಸದ ಪ್ರದೇಶದಿದ ದೂರ ಇರಬೇಕು