Advertisement

ಮ್ಯಾಕ್ಸ್‌ವೆಲ್‌, ಬರ್ನ್ಸ್ ಬದಲಿ ಕ್ರಿಕೆಟಿಗರು

06:58 PM Mar 29, 2018 | |

ಮೆಲ್ಬರ್ನ್: ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ವೇಳೆ “ಬಾಲ್‌ ಟ್ಯಾಂಪರಿಂಗ್‌’ ನಡೆಸಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾದ ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಬದಲಿಗೆ ಕ್ರಿಕೆಟ್‌ ಆಸ್ಟ್ರೇಲಿಯ’ ಬದಲಿ ಆಟಗಾರರನ್ನು ಹೆಸ ರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯಕ್ಕೆಂದು ಮ್ಯಾಟ್‌ ರೆನ್‌ಶಾ, ಗ್ಲೆನ್‌ ಮ್ಯಾಕ್ಸ್‌ ವೆಲ್‌ ಮತ್ತು ಜೋ ಬರ್ನ್ಸ್ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯ ನಡುವಿನ 4ನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯ ಮಾ. 30ರಿಂದ ಜೊಹಾನ್ಸ್‌ ಬರ್ಗ್‌ನಲ್ಲಿ ಆರಂಭವಾಗ ಲಿದೆ. ಸರಣಿಯಲ್ಲಿ ಆತಿ ಥೇಯ ದಕ್ಷಿಣ ಆಫ್ರಿಕಾ 2-1 ಮುನ್ನಡೆಯಲ್ಲಿದೆ.

ಆರಂಭಕಾರ ಕ್ಯಾಮ ರೂನ್‌ ಬ್ಯಾನ್‌ಕ್ರಾಫ್ಟ್ ಬದಲು ಮ್ಯಾಟ್‌ ರೆನ್‌ಶಾ ಅವರನ್ನು ಮಂಗಳವಾರವೇ ಆರಿಸಲಾಗಿತ್ತು. ಮ್ಯಾಕ್ಸ್‌ ವೆಲ್‌ ಹಾಗೂ ಬರ್ನ್ಸ್ ಅವರನ್ನು ಬುಧವಾರ ಟೆಸ್ಟ್‌ ತಂಡಕ್ಕೆ ಸೇರಿಸಿಕೊಳ್ಳಲಾಯಿತು. 

ಮ್ಯಾಟ್‌ ರೆನ್‌ಶಾ ಬ್ರಿಸ್ಬೇನ್‌ನಲ್ಲಿ “ಶೆಫೀಲ್ಡ್‌ ಶೀಲ್ಡ್‌’ ಫೈನಲ್‌ ಪಂದ್ಯವನ್ನು ಆಡಿ ಮುಗಿಸಿದ ಬೆನ್ನಲ್ಲೇ ಮಂಗಳವಾರ ರಾತ್ರಿ ಜೊಹಾನ್ಸ್‌ಬರ್ಗ್‌ಗೆ ವಿಮಾನ ವೇರಿದರು. 

ಕಾಕತಾಳೀಯವೆಂದರೆ, ಕಳಪೆ ಫಾರ್ಮ್ ನಿಂದಾಗಿ ರೆನ್‌ಶಾ ಅವರನ್ನು ಪ್ರತಿಷ್ಠಿತ ಆ್ಯಶಸ್‌ ಸರಣಿಯಿಂದ ಕೈಬಿಡಲಾಗಿತ್ತು. ಇವರ ಬದಲು ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಅವಕಾಶ ಪಡೆದಿದ್ದರು. ಈಗ ಬ್ಯಾನ್‌ಕ್ರಾಫ್ಟ್ ಸ್ಥಾನವನ್ನು ರೆನ್‌ಶಾ ಅವರೇ ತುಂಬಬೇಕಾದ ಸಂದರ್ಭ ಎದುರಾಗಿದೆ!

Advertisement

21ರ ಹರೆಯದ ಎಡಗೈ ಆರಂಭಕಾರ ರೆನ್‌ಶಾ 2017ರ ಸೆಪ್ಟಂಬರ್‌ನಲ್ಲಿ ಕೊನೆಯ ಸಲ ಆಸ್ಟ್ರೇಲಿಯ ಟೆಸ್ಟ್‌ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅದು ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್‌ನಲ್ಲಿ ನಡೆದ ಪಂದ್ಯವಾಗಿತ್ತು. ಬಳಿಕ ದೇಶಿ ಕ್ರಿಕೆಟ್‌ನಲ್ಲಿ ವಿಕ್ಟೋರಿಯಾ ವಿರುದ್ಧ 170 ರನ್‌, ಸೌತ್‌ ಆಸ್ಟ್ರೇಲಿಯ ವಿರುದ್ಧ 112 ರನ್‌ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ಅಜೇಯ 143 ರನ್‌ ಬಾರಿಸಿ ಫಾರ್ಮ್ಗೆ ಮರಳಿದ್ದರು.

ಹೊಡಿಬಡಿ ಆಟಗಾರನಾಗಿರುವ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಅವರಿಗೆ ಟೆಸ್ಟ್‌ ಅನುಭವ ಕಡಿಮೆ. ಈವರೆಗೆ ಆಡಿದ್ದು 7 ಟೆಸ್ಟ್‌ ಮಾತ್ರ. ಆದರೆ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಎದುರಿನ ಇತ್ತೀಚಿನ ಟಿ20 ಸರಣಿಗಳಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಇಂಗ್ಲೆಂಡ್‌ ವಿರುದ್ಧ ಹೋಬರ್ಟ್‌ ಪಂದ್ಯದಲ್ಲಿ 58 ಎಸೆತಗಳಿಂದ 103 ರನ್‌ ಸಿಡಿಸಿದ್ದು ಮ್ಯಾಕ್ಸ್‌ವೆಲ್‌ ಅವರ ಸಾಧನೆಗಳಲ್ಲೊಂದು. 

ಗ್ಲೆನ್‌ ಮ್ಯಾಕ್ಸ್‌ವೆಲ್‌ 2017ರ ಸೆಪ್ಟಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್‌ನಲ್ಲಿ ಕೊನೆಯ ಟೆಸ್ಟ್‌ ಆಡಿದ್ದರು.ಜೋ ಬರ್ನ್ಸ್ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯ ಕೊನೆಯ 2 ಪಂದ್ಯಗಳಲ್ಲಿ ಬ್ಯಾಟಿಂಗ್‌ ಮಿಂಚು ಹರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next