Advertisement

Karnataka Govt. ಒಂದನೇ ತರಗತಿ ಪ್ರವೇಶಕ್ಕೆ ಗರಿಷ್ಠ 8 ವರ್ಷ ವಯೋಮಿತಿ

12:16 AM Jul 13, 2024 | Team Udayavani |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ (2025-26)ದಿಂದ ಒಂದನೇ ತರಗತಿ ಪ್ರವೇಶಾತಿಗೆ ಗರಿಷ್ಠ 8 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

Advertisement

ಹಾಗೆಯೇ ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು ಆರು ವರ್ಷವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಸರಕಾರ ಎಲ್‌ಕೆಜಿಗೆ ಗರಿಷ್ಠ ಆರು ವರ್ಷ ಮತ್ತು ಯುಕೆಜಿಗೆ ಗರಿಷ್ಠ ಏಳು ವರ್ಷಗಳ ವಯೋಮಿತಿ ನಿಗದಿ ಪಡಿಸಲಾಗಿದೆ. ಎಲ್‌ಕೆಜಿ ಪ್ರವೇಶಕ್ಕೆ ಕನಿಷ್ಠ 4 ವರ್ಷ ಪೂರ್ಣಗೊಂಡಿರಬೇಕು.

ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ದಾಖಲಾತಿಗೆ ಕನಿಷ್ಠ ಅರ್ಹ ವಯೋಮಿತಿಯನ್ನು ಈ ಮೊದಲೇ ನಿಗದಿಪಡಿಸಲಾಗಿತ್ತು. ಆದರೆ ಗರಿಷ್ಠ ವಯೋಮಿತಿ ನಿಗದಿಪಡಿಸಿರಲಿಲ್ಲ. ಗರಿಷ್ಠ ವಯೋಮಿತಿ ನಿಗದಿ ಮಾಡದೇ ಇರುವುದರಿಂದ ಮಕ್ಕಳ ಡ್ರಾಪ್‌ ಔಟ್‌ ಹೆಚ್ಚಾಗಬಹುದು ಎಂಬ ಕಾರಣದಿಂದ ಗರಿಷ್ಠ ವಯೋಮಿತಿ ನಿಗದಿ ಪಡಿಸಲಾಗಿದೆ. ಈಗಾಗಲೇ 2023-24ನೇ ಸಾ ಲಿನ ಪ್ರವೇಶ ಪ್ರಕ್ರಿಯೆ ಮುಗಿದಿದೆ. 2024-25ನೇ ಸಾಲಿನ ಪ್ರವೇಶ ಪ್ರ ಕ್ರಿಯೆ ಪ್ರಗತಿಯಲ್ಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next