Advertisement

ಸೆಮಿ ಫೈನಲ್ ನಲ್ಲಿ ಸೋಲುಂಡ ಪಾಕ್: ಮತ್ತೆ ಟ್ರೆಂಡ್ ಆಗುತ್ತಿದೆ ‘ಮೌಕಾ ಮೌಕಾ’

11:38 AM Nov 12, 2021 | Team Udayavani |

ಮುಂಬೈ: ಐಸಿಸಿ ವಿಶ್ವಕಪ್ ನ ದ್ವಿತೀಯ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡ ಪಾಕಿಸ್ಥಾನ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಸತತ ಐದು ಪಂದ್ಯಗಳನ್ನು ಗೆದ್ದು ಸೆಮಿ ಫೈನಲ್ ಗೆ ಎಂಟ್ರಿ ನೀಡಿದ್ದ ಬಾಬರ್ ಅಜಂ ಪಡೆ ಸೆಮಿ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಸೋಲನುಭವಿಸಿದೆ.

Advertisement

ಪಾಕಿಸ್ಥಾನ ವಿರುದ್ಧದ ಗೆಲುವಿನಲ್ಲಿ ಆಸೀಸ್ ಆಟಗಾರ ಮ್ಯಾಥ್ಯೂ ವೇಡ್ ಪ್ರಮುಖ ಪಾತ್ರ ವಹಿಸಿದರು. 10 ಎಸೆತದಲ್ಲಿ 20 ರನ್ ಬೇಕಾಗಿದ್ದಾಗ ಶಹೀನ್ ಅಫ್ರಿದಿ ಎಸೆತವನ್ನು ವೇಡ್ ಡೀಪ್ ಮಿಡ್ ವಿಕೆಟ್ ಗೆ ಬಾರಿಸಿದರು. ಆದರೆ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಸನ್ ಅಲಿ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆದ ಮ್ಯಾಥ್ಯೂ ವೇಡ್ ಮುಂದಿನ ಮೂರು ಎಸೆತದಲ್ಲಿ ಮೂರು ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದಿತ್ತರು. ವೇಡ್ 17 ಎಸೆತಗಳಲ್ಲಿ 41 ರನ್ ಗಳಿಸಿ ಅಜೇಯರಾಗುಳಿದರು.

ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಗ್ಯಾಂಗ್ ಸ್ಟರ್ ಪತ್ನಿ!

ಪಂದ್ಯದ ಬಳಿಕ ಮಾಜಿ ಆಟಗಾರರಾದ ವೀರೆಂದ್ರ ಸೆಹವಾಗ್, ವಾಸಿಂ ಜಾಫರ್, ಚೇತೇಶ್ವರ ಪೂಜಾರ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Koo App

Koo App

T20 cricket at its best!
Superp chase by Australia, who always find a way to win these big games!
The favourites from both the semi finals are out, which means we will have a new t20 world champion in a few days!#PakVsAus #t20worldcup #sabsebadastadium

Cheteshwar Pujara (@cheteshwarpujara) 12 Nov 2021

ಸೆಮಿ ಫೈನಲ್ ನಲ್ಲಿ ಪಾಕ್ ಸೋಲನುಭವಿಸುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಸಂಭ್ರಮ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಮೌಕಾ ಮೌಕಾ’, ‘ಔರ್ ಭಾಯ್.. ಆ ಗಯಾ ಸ್ವಾದ್’ ಮುಂತಾದ ಮೀಮ್ ಗಳು ಹರಿದಾಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next