Advertisement

ಮತ್ಸ್ಯ ಸಂಪದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಡೀಸಿ

12:40 PM Aug 22, 2020 | Suhan S |

ಚಾಮರಾಜನಗರ: ಜಿಲ್ಲೆಯ ಸಂಪನ್ಮೂಲ ಬಳಸಿಕೊಂಡು ಮತ್ಸ್ಯ ಸಂಪದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚಿಸಿದರು.

Advertisement

ಮತ್ಸ್ಯ ಸಂಪದ ಯೋಜನೆ ಕುರಿತ ಸಂಬಂಧ ಗೂಗಲ್‌ ಮೀಟ್‌ ಮೂಲಕ ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಮೀನುಗಾರಿಕೆ ಇಲಾಖೆ ಮತ್ಸ್ಯ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು, ಮೀನುಗಾರರಲ್ಲಿ ನವತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ಮೀನು ಸಾಕಾಣಿಕೆಯಲ್ಲಿ ಪ್ರಗತಿ ಸಾಧಿಸಲು ವೈಜ್ಞಾ ನಿಕ ವಾದ ತಂತ್ರಜ್ಞಾನ ಅನುಸರಿಸಬೇಕು. ಮೀನು ಪರಿಪಾಲನಾ ಕೇಂದ್ರ ಸೂಕ್ತ ರೀತಿಯಲ್ಲಿ ಮೀನು ಮರಿ, ಮೊಟ್ಟೆಗಳನ್ನು ಒದಗಿಸಬೇಕು ಎಂದರು.

ತಿ.ನರಸೀಪುರ, ನಂಜನಗೂಡು, ಬೇಗೂರು ಮತ್ತು ಪುಣಜೂರು ರಸ್ತೆ ಭಾಗದಲ್ಲಿ ಮೀನಿನ ಅಂಗಡಿ ಮತ್ತು ಮಾರುಕಟ್ಟೆ ಸ್ಥಾಪಿಸಬೇಕು. ಈ ಸಂಬಂಧ ಗ್ರಾಮ, ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕು ಎಂದು ಹೇಳಿದರು. ಅಲಂಕಾರಿಕ ಮೀನುಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೀನು ಮಾರಾಟ ಗಾರರಿಗೆ, ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದರು. ಮೀನುಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಕೆ.ಎಸ್‌.ರೆಡ್ಡಿ ಪ್ರಶಾಂತ್‌ರೆಡ್ಡಿ, ಮೀನುಗಾರಿಕೆ ಪ್ರೊಫೆಸರ್‌ ಶಿವಕುಮಾರ್‌ ಮಗದ ಇದ್ದರು.

 

50 ಅಡಿ ಆಳದ ಬಾವಿಗೆ ಹಸು ರಕ್ಷಣೆ :

Advertisement

ಹನೂರು: ಆಯ ತಪ್ಪಿ 50 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಕೌದಳ್ಳಿ ಸಮೀಪದ ಎಂ.ಜಿ.ದೊಡ್ಡಿ ಗ್ರಾಮದ ಶಾಂತರಾಜು ಎಂಬವರು ತಮ್ಮ ಹಸುವನ್ನು ಶುಕ್ರವಾರ ಬೆಳಗ್ಗೆ ಜಮೀನಿನಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಮೇಯುತ್ತಿದ್ದ ಹಸು ಆಯತಪ್ಪಿ ಪಕ್ಕದಲ್ಲಿ ಇದ್ದ 50 ಅಡಿ ಆಳದ ತೆರೆದ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಹನೂರು ಪಟ್ಟಣದ ಅಗ್ನಿಶಾಮಕ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ಶೇಷ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಅದೃಷ್ಟವಶಾತ್‌ ಹಸುವಿಗೆ ಯಾವುದೇ ತೊಂದರೆಯಾಗಿಲ್ಲ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಗಿರೀಶ್‌, ನಾಗೇಶ್‌, ಜಯಪ್ರಕಾಶ್‌, ಆನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next