Advertisement

ಮಸೀದಿಯೊಳಗೆ ಹನುಮಾನ್‌ ಚಾಲೀಸ ಪಠಣಕ್ಕೆ ಕರೆ: ಮಥುರಾದಲ್ಲಿ 144 ಸೆಕ್ಷನ್‌ ಜಾರಿ; ಬಿಗಿ ಭದ್ರತೆ

10:51 AM Dec 06, 2022 | Team Udayavani |

ಉತ್ತರ ಪ್ರದೇಶ: ಮಸೀದಿಯೊಳಗೆ ಹನುಮಾನ್‌ ಚಾಲೀಸ ಪಠಿಸುತ್ತೇವೆ ಎಂದು ಹಿಂದೂ ಮಹಾಸಭಾ ಕರೆಕೊಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮಥುರಾದಲ್ಲಿ ಮಂಗಳವಾರ ಬಿಗಿ ಪೊಲೀಸ್‌ ಬಂದೋಬಸ್ತನ್ನು ಮಾಡಲಾಗಿದೆ.

Advertisement

ಸುಮಾರು 1,500 ಪೊಲೀಸರು, ಸಶಸ್ತ್ರ ಪೊಲೀಸ್‌ ಪಡೆ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶ್ರೀ ಕೃಷ್ಣ ಜನ್ಮಸ್ಥಾನದ ದೇವಸ್ಥಾನ,ಶಾಹಿ ಮಸೀದಿ ಈದ್ಗಾ ಬಳಿ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಪಿಟಿಐಗೆ ಹೇಳಿದ್ದಾರೆ.

ಸೋಮವಾರ, ಅಖಿಲ ಭಾರತ ಹಿಂದೂ ಮಹಾಸಭಾದ ದಿನೇಶ್ ಕೌಶಿಕ್, ಮಸೀದಿಯೊಳಗೆ ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ ಎಂದು ಕರೆ ನೀಡಿದ್ದರು. ಈ ಕಾರಣದಿಂದ ಯಾವುದೇ ಅನಾಹುತ ಸಂಭವಿಸಬಾರದು, ಕೋಮುಗಲಭೆಗೆ ಕಾರಣವಾಗಬಾರದೆನ್ನುವ ನಿಟ್ಟಿನಲ್ಲಿ ಮಥುರಾದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಮಾಡಲಾಗಿದೆ.

ಸೆಕ್ಷನ್‌ 144 ನ್ನು ಜಾರಿಗೊಳಿಸಲಾಗಿದ್ದು, ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಕಳೆದ ವರ್ಷವೂ ಹಿಂದೂ ಮಹಸಭಾ ಇಂಥದ್ದೇ ಕರೆಯನ್ನು ನೀಡಿತ್ತು. ಆ ಯೋಜನೆಯನ್ನು ಕೂಡ ಜಿಲ್ಲಾಡಳಿತ ವಿಫಲವಾಗಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next