ಬಸ್ರೂರು: ಮಣಿಪಾಲದ ಮಾತೃಶ್ರೀ ಸೇವಾ ಸಂಘದ ವತಿಯಿಂದ ಸಾಧಕರಿಗೆ ಮಾತೃಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಬಸ್ರೂರು ಬಿ.ಎಚ್. ಬಳಿಯ ಮಾತೃಶ್ರೀ ಕೃಪಾ ವಠಾರದಲ್ಲಿ ಜರಗಿತು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಳ್ಕೂರು ಗೋಪಾಲ ಆಚಾರ್ಯರು ತಮ್ಮ ಸಂಪಾದನೆಯ ಒಂದು ಭಾಗವನ್ನು ಹೇಗೆ ಸಮಾಜ ಮುಖೀ ಚಟುವಟಿಕೆಗಳಿಗೆ ಬಳಸ
ಬಹುದು ಎನ್ನುದನ್ನು ತೋರಿಸಿಕೊಟ್ಟಿ ದ್ದಾರೆ. ಮಾತೃಶ್ರೀ ಸೇವಾ ಸಂಘ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯ
ಕ್ರಮಗಳನ್ನು ನಡೆಸುತ್ತಿದೆ. ಸಾಧಕ ಯಕ್ಷಗಾನ ಕಲಾವಿದರನ್ನು ಹಾಗೂ ದಾರು ಶಿಲ್ಪಿಗಳನ್ನು ಸಮ್ಮಾನಿಸುತ್ತಿದೆ. ವಿಶೇಷವೆಂದರೆ, ಇಂದು ಅರ್ಹ ವ್ಯಕ್ತಿಗಳು ಸಮ್ಮಾನಗೊಳ್ಳುತ್ತಿದ್ದಾರೆ. ಈ ಸಂಸ್ಥೆ ಇತರ ಸಂಘ-ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರು ಶುಭಕೋರಿದರು. ಗಣ್ಯರ ಉಪಸ್ಥಿತಿಯಲ್ಲಿ ಹಿರಿಯ ಸ್ತ್ರೀ ವೇಷಧಾರಿಗಳಾದ ಎಂ.ಕೆ. ರಮೇಶ ಆಚಾರ್ಯ, ನೀಲ್ಕೋಡು ಶಂಕರ ಹೆಗಡೆ, ರಕ್ತದಾನಿ ಅಶೋಕ್ ಎಲ್. ಕುಂದರ್ ಮಂದಾರ್ತಿ, ದಾರು ಶಿಲ್ಪಿಗಳಾದ ಕೇಶವ ಆಚಾರ್ಯ ಅಮಾಸೆ ಬೈಲು, ಸರ್ವೋತ್ತಮ ಆಚಾರ್ಯ ಗೋಳಿಯಂಗಡಿ ಅವರಿಗೆ ಸ್ವರ್ಣ ಪದಕಗಳನ್ನು ನೀಡಿ ಮಾತೃಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಸಾಯಿರಾಧಾ ಡೆವಲಪರ್ನ ಮಾಲಕ ಮನೋಹರ ಶೆಟ್ಟಿ, ಅನುರಾಧಾ ಎಂ. ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ರೋಹಿತ್ ಎಂ. ಶೆಟ್ಟಿ, ಮಣಿಪಾಲ ಮಾತೃಶ್ರೀ ಸೇವಾ ಸಂಘದ ಪ್ರವರ್ತಕ ಡಾ| ಬಳ್ಕೂರು ಗೋಪಾಲ ಆಚಾರ್ಯ, ಬಳ್ಕೂರು ಗ್ರಾ.ಪಂ. ಅಧ್ಯಕ್ಷ ಅಕ್ಷತ ಶೇರೆಗಾರ್, ಮೊಗವೀರ ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ಬಳ್ಕೂರು, ನ್ಯಾಯವಾದಿ ಆನಂದ ಮಡಿವಾಳ, ಮಾತೃಶ್ರೀ ಸೇವಾ ಸಂಘದ ಅಧ್ಯಕ್ಷ ಉದಯ ಸುವರ್ಣ ಕಕ್ಕುಂಜೆ ಶುಭಕೋರಿದರು.
ಮಾತೃಶ್ರೀ ಸೇವಾ ಸಂಘದ ಸ್ಥಾಪಕಾ ಧ್ಯಕ್ಷ ಸತೀಶ್ ಸಾಲ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಎನ್.ಆರ್. ದಾಮೋದರ ಶರ್ಮ ನಿರ್ವಹಿಸಿದರು.