ವಿರುದ್ಧ ತಮ್ಮ ಪ್ರತಿಭಟನೆಯನ್ನು ವಿನೂತನವಾಗಿ ವ್ಯಕ್ತಪಡಿಸಿದರು. ರಾಜಾನುಕುಂಟೆ ಬಳಿಯ ಮಾರಸಂದ್ರ ದಲ್ಲಿರುವ ತಮ್ಮ ನಿವಾಸದಿಂದ ಬೈಸಿಕಲ್ ಏರಿ ಹೊರಟ ಮಥಾಯಿ ಬಹುಮಹಡಿ ಕಟ್ಟಡದಲ್ಲಿನ ತಮ್ಮ ಕಚೇರಿ ತಲುಪಿದರು. ಮಥಾಯಿ ಅವರ ಓಡಾಟಕ್ಕೆ ಮಂಜೂರಾಗಿದ್ದ ಗುತ್ತಿಗೆ ವಾಹನಕ್ಕೆ ಮಾಸಿಕ 30,000 ರೂ. ಬಾಡಿಗೆ ನಿಗದಿಯಾಗಿತ್ತು. ಆದರೆ ಶನಿವಾರದಿಂದ ಗುತ್ತಿಗೆ ಸಂಸ್ಥೆಯು ವಾಹನ ಸೌಲಭ್ಯ ಸ್ಥಗಿತಗೊಳಿಸಿದೆ. ಉದ್ದೇಶಪೂರ್ವಕವಾಗಿಯೇ ಸಾರಿಗೆ ಭತ್ಯೆ ತಡೆ ಹಿಡಿಯಲಾಗಿದೆ ಎಂದು ಮಥಾಯಿ ಆರೋಪಿಸಿದ್ದಾರೆ. ವಾಹನ ಭತ್ಯೆ ತಡೆ ಹಿಡಿದಿರುವುದರಿಂದ ಗುತ್ತಿಗೆ ವಾಹನ ಸೇವೆ ಸ್ಥಗಿತಗೊಂಡಿರುವ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಮುಖೇನ ಮಾಹಿತಿ ನೀಡಿದ್ದೇನೆ ಎಂದು ಮಥಾಯಿ ತಿಳಿಸಿದ್ದಾರೆ. ಸಕಾಲ ಯೋಜನೆ ಹಳಿ ತಪ್ಪಲು ಹಿರಿಯ ಐಎಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು
ಆರೋಪಿಸಿದ್ದ ಮಥಾಯಿ ಅವರು ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಅಲ್ಲದೇ ಲೋಕಾಯುಕ್ತರಿಗೂ ದೂರು ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಈ ಹಿಂದೆಯೂ ವಾಹನ ಭತ್ಯೆ ಸ್ಥಗಿತಗೊಳಿಸಿದ್ದಕ್ಕೆ ಬೇಸರಗೊಂಡಿದ್ದ ಮಥಾಯಿ ಅವರು ತಾವು ಸೈಕಲ್‌ನಲ್ಲಿ ಕಚೇರಿಗೆ ಬರಲು ನಿರ್ಧರಿಸಿದ್ದು, ತಮ್ಮ ಸೈಕಲ್‌ಗೆ ರಕ್ಷಣೆ ನೀಡುವಂತೆ ಕೋರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದನ್ನು ಸ್ಮರಿಸಬಹುದು.
Advertisement