Advertisement

ಮಾಸ್ಟರ್‌ ಬ್ಲಾಸ್ಟರ್‌ ಬರ್ತ್‌ ಡೇ ; ಶುಭಾಶಯಗಳ ಮಹಾಪೂರ

09:08 AM Apr 25, 2019 | Vishnu Das |

ಮುಂಬಯಿ: ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಬುಧವಾರ 46 ನೇ ವಸಂತಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳು ಸಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

Advertisement

ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಬಗೆ ಬಗೆಯ ಸಚಿನ್‌ ಸಾಧನೆ ಬಿಂಬಿಸುವ ಚಿತ್ರಗಳನ್ನುಪೋಸ್ಟ್‌ ಮಾಡಿ ಶುಭಾಶಯಗಳನ್ನು ಕೋರಿದ್ದಾರೆ.

ವಿಶ್ವದ ಟಾಪ್‌ 10 ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಸಚಿನ್‌ ತೆಂಡುಲ್ಕರ್‌ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ.

2011 ರ ವಿಶ್ವಕಪ್‌ ಗೆದ್ದು ಭಾವುಕರಾದ ಕ್ಷಣ ಕ್ರಿಕೆಟ್‌ ಜೀವನದ ಸ್ಮರಣೀಯ ದಿನ ಎನ್ನುವುದನ್ನು ಸಚಿನ್‌ ಎಂದಿಗೂ ಹೇಳುತ್ತಿರುತ್ತಾರೆ.

463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್‌ 18,426 ರನ್‌ಗಳನ್ನು ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next