Advertisement
ಒಂದೆಡೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರೆ ಇನ್ನೊಂದೆಡೆ ಬಾಲರಾಮನ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ. ಅದೆಷ್ಟೋ ವರ್ಷಗಳ ಕನಸು ನನಸ್ಸಾಗಿದ್ದು ಇಡೀ ವಿಶ್ವವೇ ರಾಮಮಯವಾಗಿದೆ.
Related Articles
Advertisement
ಕೊರೆವ ಚಳಿಯ ನಡುವೆಯೂ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದಾರೆ.
ಮುಂಬೈನಿಂದ ದರ್ಶನಕ್ಕೆಂದು ಕುಟುಂಬ ಸಮೇತ ಬಂದಿದ್ದ ಮಹಿಳಾ ಭಕ್ತೆಯೊಬ್ಬರು ಮಾಹಿತಿ ನೀಡಿದ್ದು ‘ಮೂರು ದಿನಗಳಿಂದ ಇಲ್ಲಿಯೇ ಇದ್ದೇವೆ, ರಾಮನ ದರ್ಶನದ ನಂತರವೇ ಊರಿಗೆ ತೆರಳುತ್ತೇವೆ’ ಎಂದು ಹೇಳಿದ್ದಾರೆ.
ರಾಮ ಮಂದಿರದ ಹೊರಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು. ದೇಗುಲದ ಮುಖ್ಯ ದ್ವಾರದ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಅಯೋಧ್ಯೆಗೆ ಭಕ್ತರು ಆಗಮಿಸುವ ಪ್ರಕ್ರಿಯೆ ಮುಂದುವರಿದಿದೆ. ಹೊರಗಿನಿಂದ ಬರುವ ಭಕ್ತರಲ್ಲದೆ ಅಯೋಧ್ಯೆ ನಿವಾಸಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ.
ಬಂದಿರುವ ಮಾಹಿತಿ ಪ್ರಕಾರ ಭಕ್ತರ ದಂಡೇ ನೆರೆದಿರುವುದರಿಂದ ಅಯೋಧ್ಯೆಯ ಹೋಟೆಲ್, ಲಾಡ್ಜ್ ಗಳು ಹೌಸ್ ಫುಲ್ ಆಗಿವೆ. ಹಲವು ಹೋಟೆಲ್‌ಗಳಲ್ಲಿ ಬಾಡಿಗೆಯನ್ನೂ ಹೆಚ್ಚಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ರಾಮಮಂದಿರದ ಉದ್ಘಾಟನೆ ದಿನ ಜನಿಸಿದ ಮಗುವಿಗೆ ‘ರಾಮ್ ರಹೀಮ್’ ಎಂದು ಹೆಸರಿಟ್ಟ ಮುಸ್ಲಿಂ ಕುಟುಂಬ