Advertisement

Padubidri: ಭೂ ಅವ್ಯವಹಾರದ ವಿರುದ್ಧ ಬೃಹತ್ ಸಾರ್ವಜನಿಕ ಪ್ರತಿಭಟನೆ

12:55 PM Dec 23, 2023 | Team Udayavani |

ಕಾಪು‌ : ಪಡುಬಿದ್ರಿ, ಪಲಿಮಾರು, ನಂದಿಕೂರು ಪರಿಸರದಲ್ಲಿ ಸುಜ್ಲಾನ್ ಎನರ್ಜಿ ಇಂಡಿಯಾ ಪ್ರೈ . ಲಿಮಿಟೆಡ್ ಗಾಗಿ ಕೆಐಎಡಿಬಿಯಿಂದ ಮಂಜೂರಾದ 1200 ಎಕರೆ ಜಮೀನನ್ನು ಖಾಸಗಿ ಕಂಪೆನಿ ಮತ್ತು ವ್ಯಕ್ತಿಗಳಿಗೆ ಮಾರಾಟ ಮಾಡುವ ಹುನ್ನಾರ ಮತ್ತು ಸರಕಾರಿ ಜಮೀನು ಉಳಿಸುವ ಬಗ್ಗೆ ಹಾಗೂ ಭೂ ಅವ್ಯವಹಾರದ ವಿರುದ್ಧ ಪಡುಬಿದ್ರಿ ಸುಜ್ಲಾನ್ ಗೇಟ್ ಬಳಿ ಶನಿವಾರ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್‌ ಸೊರಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

Advertisement

ಈ ಸಂದರ್ಭ ಮಾತನಾಡಿದ ಅವರು, ಪಡುಬಿದ್ರಿಯಲ್ಲಿ ನಡೆಯುತ್ತಿರುವ ಭೂ ಮಾಫಿಯಾದಿಂದ ಸರಕಾರಿ ಜಮೀನು ಖಾಸಗಿಯವರ ಪಾಲಾಗುತ್ತಿದೆ. ಇದನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ಮರಳಿ ಪಡೆಯಬೇಕು, ನಂದಿಕೂರು ದೇವರ ಕಾಡು ಉಳಿಸಿ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಪಲಿಮಾರು ಕಿಂಡಿ ಅಣೆಕಟ್ಟುವಿನಿಂದ ಸುಜ್ಲಾನ್ ಪ್ರಾಯೋಜಿತ ಎಂ 11 ಕಂಪೆನಿಗೆ ನೀರು ಸರಬರಾಜು ಆಗುತ್ತಿರುವುದನ್ನು ತಡೆಹಿಡಿದು ನೀರು ಉಳಿಸುವಂತೆ, ಹೆಜಮಾಡಿ ಟೋಲ್ ಗೇಟ್ ನಲ್ಲಿ ಸ್ಥಳೀಯ ಪಡುಬಿದ್ರಿ ಜಿ.ಪಂ. ವ್ಯಾಪ್ತಿಯ ಜನರಿಗೆ ಉಚಿತ ಸಂಚಾರ, ಕಂಚಿನಡ್ಕ – ಪಡುಬಿದ್ರಿಯಲ್ಲಿ ಟೋಲ್ ಗೇಟ್ ಸ್ಥಾಪನೆ ಹುನ್ನಾರ ವಿರುದ್ಧ ಮತ್ತು ಜಲಜೀವನ್ ಮಿಷನ್ ಯೋಜನೆಯ ಮುಖಾಂತರ ನಡೆಯುತ್ತಿರುವ ಕಾಮಗಾರಿಯಲ್ಲಿನ‌ ಅವ್ಯಹಾರ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು. ಕೇಂದ್ರ ಸರಕಾರಕ್ಕೆ ಸಂಬಂಧ ಪಟ್ಟ ವಿಚಾರದಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಸಮಸ್ಯೆ ನಿವಾರಣೆಗೆ ಮನವಿ ಮಾಡಲಾಗುವುದು ಎಂದರು.

ಮಾಜಿ ಮೇಯರ್ ಪ್ರತಿಭಾ ಕುಳಾಯಿ ಮಾತನಾಡಿ, ಕರಾವಳಿಯಲ್ಲಿ ಬಿಜೆಪಿ ಗೆದ್ದ ನಂತರ ಜನರ ನಿರೀಕ್ಷೆಗಳು ಹುಸಿಯಾಗಿವೆ. ಸುಜ್ಲಾನ್, ಯುಪಿಸಿಎಲ್, ನಾಗಾರ್ಜುನ ಸಂಸ್ಥೆಗಾಗಿ ಜಾಗ ಕೊಟ್ಟವರಿಗೆ ಉದ್ಯೋಗವೂ ಇಲ್ಲ, ನೆರವೂ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಂತೂ ಇವರ ಸಿ.ಎಸ್.ಆರ್ ಅನುದಾನಗಳು ಸಿಗುವುದೇ ಅಪರೂಪವಾಗಿದೆ. ಜನವಿರೋಧಿಯಾಗಿರುವ ಹೋರಾಟಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನತೆಯೂ ಒಂದಾಗಬೇಕಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಮರೆತು ಎಲ್ಲರೂ ಕೈಜೋಡಿಸೋಣ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶಮಂತ್, ಪಕ್ಷದ ಪ್ರಮುಖರಾದ ಉದಯ ಶೆಟ್ಟಿ ಮುನಿಯಾಲು, ಎಂ. ಎ. ಗಪೂರ್, ಪ್ರತಿಭಾ ಕುಳಾಯಿ, ಸುಧೀರ್ ಕುಮಾರ್ ಮುರೋಳಿ, ಮಾಜಿ ವಿ.ಪ. ಸದಸ್ಯ ಐವನ್ ಡಿ.ಸೋಜ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ,  ಮೊದಲಾದವರು ಮಾತನಾಡಿದರು.

Advertisement

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ನಾಯಕರಾದ ಕಾಪು ದಿವಾಕರ ಶೆಟ್ಟಿ, ರಮೇಶ್ ಕಾಂಚನ್, ದೀಪಕ್ ಕೋಟ್ಯಾನ್, ಮಲ್ಯಾಡಿ ಶಿವರಾಮ ಶೆಟ್ಟಿ, ವಿಶ್ವಾಸ್ ಅಮೀನ್, ಮಂಜುನಾಥ್ ಪೂಜಾರಿ, ಡಿ.ಆರ್. ರಾಜು, ವೆರೋನಿಕಾ‌ ಕರ್ನೇಲಿಯೋ, ಅಮೀರ್ ಮಹಮ್ಮದ್, ಎಚ್. ಅಬ್ದುಲ್ಲಾ, ವೈ. ಸುಕುಮಾರ್, ವಿನಯ್ ಬಲ್ಲಾಳ್, ಗೋಪಾಲ ಪೂಜಾರಿ, ರಮೀಜ್ ಹುಸೇನ್, ಜಿತೇಂದ್ರ ಪುರ್ಟಾಡೊ, ಶಶಿಧರ್ ಶೆಟ್ಟಿ, ಪ್ರಶಾಂತ್ ಜತ್ತನ್ನ, ಸೌರಭ್ ಬಲ್ಲಾಳ್, ಯಶವಂತ ಪೂಜಾರಿ, ಸುಧೀರ್ ಕರ್ಕೇರ, ಕಿಶೋರ್ ಎರ್ಮಾಳ್, ಶಾಂತಲತಾ ಶೆಟ್ಟಿ, ಶರ್ಫುದ್ದೀನ್ ಶೇಖ್, ಮಹಮ್ಮದ್ ಸಾಧಿಕ್, ಗೋಪಿನಾಥ್ ಪಡಂಗ, ಅಶೋಕ್ ಸಾಲ್ಯಾನ್, ಶಿವಾಜಿ ಸುವರ್ಣ, ಸದಾಶಿವ ದೇವಾಡಿಗ ಕಾರ್ಕಳ, ಮಲ್ಲಿಕಾ ಪೂಜಾರಿ ಬ್ರಹ್ಮಾವರ, ಸರಿತಾ ಶೆಟ್ಟಿ ಇನ್ನಾ, ಕುಶಾ ಮೂಲ್ಯ, ಎಮ್.ಪಿ. ಮೊಯಿದಿನಬ್ಬ, ರಾಜೇಶ್ ರಾವ್, ಸುಚರಿತಾ ಅಮೀನ್, ಜ್ಯೋತಿ ಮೆನನ್, ಅಶ್ವಿನಿ, ಅಬ್ದುಲ್ ರಹ್ಮಾನ್ ಕನ್ನಂಗಾರ್, ರಿಯಾಜ್ ಮುದರಂಗಡಿ, ಡಾ.ಸುನಿತಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಶಂಕರ್ ಕುಂದರ್, ಡಾ. ರೋಶನಿ  ಒಲಿವೆರಾ, ಯಶವಂತ ಶೆಟ್ಟಿ, ನಿಯಾಜ್, ಎಮ್.ಎಸ್.ಎಸ್.ಶಫಿ,  ದಿವಾಕರ ಕುಂದರ್, ದಿನಕರ ಹೇರೂರು, ಅಬ್ದುಲ್ ಅಝೀಝ್ ಹೆಜಮಾಡಿ, ಶೇಖ್ ವಾಹಿದ್ ದಾವೂದ್, ಉಮನಾಥ್ ಮೊದಲಾದವರು ಪಾಲ್ಗೊಂಡಿದ್ದರು.

ಮಾಜಿ ತಾ.ಪಂ. ಸದಸ್ಯ ದಿನೇಶ್ ಕೋಟ್ಯಾನ್ ಪಲಿಮಾರು ಪ್ರಸ್ತಾವನೆಗೈದರು.

ಕಾಪು ಬ್ಲಾಕ್ ಕಾಂಗ್ರೆಸ್, ಉಡುಪಿ ಜಿಲ್ಲಾ ಕಾಂಗ್ರೆಸ್, ವಿವಿಧ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next