Advertisement

ಮಸೂದ್‌ ಅಜರ್‌ ಜಾಗತಿಕ ಉಗ್ರ: ವಿಳಂಬಕ್ಕೆ ಎನ್‌ಡಿಎ ಸರಕಾರ ಕಾರಣ: ಕಾಂಗ್ರೆಸ್‌ ಟೀಕೆ

10:06 AM May 03, 2019 | Sathish malya |

ಹೊಸದಿಲ್ಲಿ : ಪುಲ್ವಾಮಾ ಆತ್ಮಾಹುತಿ ದಾಳಿ ಮತ್ತು ಮುಂಬಯಿ ಉಗ್ರ ದಾಳಿ ಸಹಿತ ಭಾರತದಲ್ಲಿ ನಡೆದಿದ್ದ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌, ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌, ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆಯಿಂದ ಘೋಷಿಸಲ್ಪಡುವಲ್ಲಿ ಆಗಿರುವ ಭಾರೀ ವಿಳಂಬಕ್ಕೆ ಕಾಂಗ್ರೆಸ್‌ ಪಕ್ಷ  ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದೆ.

Advertisement

2009ರಲ್ಲೇ ಕಾಂಗ್ರೆಸ್‌ ನೇತೃತ್ವದ ಆಗಿನ ಯುಪಿಎ ಸರಕಾರ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂದು ವಿಶ್ವಸಂಸ್ಥೆಯಲ್ಲಿ ಪಟ್ಟು ಹಿಡಿದಿತ್ತು ಎಂದು ಹಿರಿಯ ನಾಯಕ ಪಿ ಚಿದಂಬರಂ ಹೇಳುವ ಮೂಲಕ ಹೇಳಿದ್ದು ಆ ಮೂಲಕ ಅಜರ್‌ ಜಾಗತಿಕ ಉಗ್ರನೆಂದು ಘೋಷಿಸಲ್ಪಟ್ಟಿರುವುದರ ಲಾಭವನ್ನು ಪಡೆಯಲು ಕಾಂಗ್ರೆಸ್‌ ಪಕ್ಷ ಯತ್ನಿಸಿದೆ.

ಮಸೂದ್‌ ಅಜರ್‌ ಜಾಗತಿಕ ಉಗ್ರನೆಂದು ಘೋಷಿಸಲ್ಪಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಸಾಕಷ್ಟು ವಿಳಂಬಿತ ಪ್ರಕ್ರಿಯೆಗಳನ್ನು ನಡೆದಿವೆ ಎಂದು ಕಾಂಗ್ರೆಸ್‌ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next