ಮಸ್ಕಿ: ಪಟ್ಟಣದ ಪಿಡಬ್ಲ್ಯೂ ಕ್ಯಾಂಪಿನ ಕರ್ನಾಟಕ ಪಬ್ಲಿಕ್ ಶಾಲೆಯ ಮೇಲ್ಚಾವಣಿ ಕುಸಿದು ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ಶುಕ್ರವಾರ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗಳು ನಮನ ರಾಘವೇಂದ್ರ ಕೊರೆಕಾರ (7 ವ) ಹಾಗೂ ಅಪ್ಪಾಜಿ ಹನುಮೇಶ ವೆಂಕಟಾಪೂರ (7 ವ) ಎಂದು ಗುರುತಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳು ಎರಡನೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ.
ಮುಂದಿನ ಬೆಂಚ್ ನಲ್ಲಿ ಕುಳಿತಿದ್ದ ಈ ವಿದ್ಯಾರ್ಥಿಗಳ ಮೇಲೆ ಮೇಲ್ಛಾವಣಿಗೆ ಮಾಡಿದ್ದ ಪ್ಲಾಸ್ಟರ್ ನ ಪದರು ಬಿದ್ದು ತಲೆಗೆ ಗಾಯವಾಗಿವೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಗೆ ಕಚ್ಚಿತು ನಾಗರಹಾವು… ಮುಂದೇನಾಯ್ತು?
ಘಟನೆ ತಿಳಿಯುತ್ತಲೇ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.
ಎಂಟು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದ ಮೇಲೆ ವೇರಿಂಗ್ ಕೋಟ್ ಇಲ್ಲದ ಕಾರಣ ನೀರು ಹರಿದು ಹೋಗದಾಗಿದ್ದು, ಈ ಮೇಲ್ಛಾವಣಿಯ ಪ್ಲಾಸ್ಟರ್ ಪದರ ಉದುರಿದೆ ಎನ್ನಲಾಗುತ್ತಿದೆ.