Advertisement

ಮಾಸಾಂತ್ಯಕ್ಕೆ ಕ್ಯಾನ್ಸರ್‌ ಆಸ್ಪತ್ರೆ ಸಮರ್ಪಣೆ

02:59 PM Feb 13, 2017 | |

ಕಲಬುರಗಿ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತವಾಗಿ ಮೇಲ್ದರ್ಜೆಗೇರಿಸಲಾಗಿರುವ ಪೆರಿಪೇರಲ್‌ ಕ್ಯಾನ್ಸರ್‌ ಆಸ್ಪತ್ರೆಯನ್ನು ಮಾಸಾಂತ್ಯಕ್ಕೆ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು. 

Advertisement

ನಗರದ ವರ್ತುಲ ರಸ್ತೆಯಲ್ಲಿನ ಶಾದಾಖ್‌ ಫಂಕ್ಷನ್‌ ಹಾಲ್‌ನಲ್ಲಿ ಮಾಜಿ ಮಹಾಪೌರ ಎಕ್ಬಾಲ್‌ ಅಹ್ಮದ್‌ ಶೀರಿನಿ μರೋಶ್‌ ಆಯೋಜಿಸಿದ ಉಚಿತ ಕಣ್ಣಿನ ತಪಾಸಣೆ ಮತ್ತು ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್‌ ಆಸ್ಪತ್ರೆಯನ್ನು ಈಗ ಸಂಪೂರ್ಣ ಆಧುನೀಕರಣಗೊಳಿಸಲಾಗಿದೆ.

ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 45 ಕೋಟಿ ರೂ.ಗಳನ್ನು ಒದಗಿಸಿವೆ ಎಂದರು. ಮೊದಲು 50 ಹಾಸಿಗೆಗಳ ಸಾಮರ್ಥ್ಯವಿದ್ದ ಕ್ಯಾನ್ಸರ್‌ ಆಸ್ಪತ್ರೆಯನ್ನು ಈಗ 80 ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸಲಾಗಿದೆ. 20 ಕೋಟಿ ರೂ.ಗಳನ್ನು ಆಸ್ಪತ್ರೆಯ ಆಧುನೀಕರಣಕ್ಕೆ ಹಾಗೂ ಇನ್ನು 20 ಕೋಟಿ ರೂ.ಗಳನ್ನು ಅತ್ಯಾಧುನಿಕ ಯಂತ್ರಗಳ ಖರೀದಿಗೆ ಬಳಕೆ ಮಾಡಲಾಗಿದೆ. 

ಸುಸಜ್ಜಿತ ಆಪರೇಷನ್‌ ಥೇಟರ್‌ ನಿರ್ಮಾಣಗೊಂಡಿದೆ. ಹಿಂದಿನ ಕೋಬಾಲ್ಟ್ ಯಂತ್ರ ತೆಗೆದು ಹೊಸ ಹೈ ಆ್ಯಂಡ್‌ ಎಕ್ಸಲೇಟರ್‌ ಯಂತ್ರ ಅಳವಡಿಸಲಾಗಿದೆ. ಲಿನ್ಯಾಕ್‌ ಹೊಸ  ಯಂತ್ರದ ಮೂಲಕ ಕ್ಯಾನ್ಸರ್‌ ರೋಗಿಗಳ ತಪಾಸಣೆಗಾಗಿ ಆಟೋಮಿಕ್‌ ರೆಗ್ಯೂಲ್ಯಾರಿಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶೀಘ್ರವೇ ಅನುಮತಿ ದೊರೆಯಲಿದೆ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಇಕಬಾಲ್‌ ಅಹ್ಮದ್‌ ಸರಡಗಿ ಅಧ್ಯಕ್ಷತೆ ವಹಿಸಿದ್ದರು. ಹಜರತ್‌ ಸೈಯದ್‌ ಶಾ ಬಾಬರ್‌ ಶಬ್ಬೀರ್‌ ಹುಸೇನಿಸಾಬ್‌, ಆಲಂಖಾನ್‌, ಬಾಬಾ ನಜಿರ್‌ ಮೊಹ್ಮದ್‌ ಖಾನ್‌, ತನುವೀರ್‌ ಅಹ್ಮದ್‌ ಸರಡಗಿ, ಮೊಹ್ಮದ್‌ ಅಜುಮುದ್ದೀನ್‌, ಪತ್ರಕರ್ತ ಅಜೀಜುಲ್ಲಾ ಸರಮಸ್ತ್, ಅಲ್ಲಿಖಾನ್‌, ಜಾವಿದ್‌, ಮಹಿಯುದ್ದೀನ್‌ ಆಗಮಿಸಿದ್ದರು. 

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಧಿಕಾರಿ ಡಾ| ಶಿವರಾಜ್‌ ಸಜ್ಜನಶೆಟ್ಟಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಸರ್ಜನ್‌ ಡಾ| ಬಿ.ಎಸ್‌. ಜೋಶಿ, ಡಾ| ಉದಯ ಪಾಟೀಲ, ಡಾ| ಮಿರ್ಜಾ ಮುನೀರ್‌ ಬೇಗ್‌ ಹಾಜರಿದ್ದರು. 

20ರಂದು ಉನ್ನತ ಸಭೆ: ರಾಜ್ಯದ ಬಜೆಟ್‌  ನಲ್ಲಿ ಹೆಚ್ಚಿನ ಅನುದಾನಕ್ಕಾಗಿ ಫೆ. 20ರಂದು ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಉನ್ನತ ಸಭೆಯೊಂದನ್ನು ಕರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು. ಈಗಾಗಲೇ ರಾಜ್ಯದ ಕಲಬುರ್ಗಿ, ಬೆಳಗಾವಿ, ಮೈಸೂರಿನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮಂಜೂರು ಮಾಡಲಾಗಿದೆ.

ಅದೇ ರೀತಿ ಬಾಗಲಕೋಟೆ, ಹಾವೇರಿ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪೂರದಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದ್ದು, ಈ ಎಲ್ಲ ಯೋಜನೆಗಳಿಗೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲು ಕೋರಲಾಗುವುದು ಎಂದು ಹೇಳಿದರು. 

ರಾಜ್ಯದಲ್ಲಿ ಈ ಬಾರಿ ವೃತ್ತಿ ಶಿಕ್ಷಣ ಪ್ರವೇಶಕ್ಕಾಗಿ ನೀಟ್‌ ಜಾರಿಗೆ ತರುವುದರಿಂದ ಸಿಇಟಿ ರದ್ದುಪಡಿಸಲಾಗಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕೇವಲ ನೀಟ್‌ ಪರೀಕ್ಷೆಗೆ ಹಾಜರಾಗಬೇಕು. ನೀಟ್‌ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಬಹುದಾಗಿದೆ. ಈ ಸಂಬಂಧ ಭಾರತೀಯ ವೈದ್ಯಕೀಯ ಮಂಡಳಿಯು ಒಪ್ಪಿಕೊಂಡಿದೆ ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next