Advertisement
ರವಿವಾರ ನಡೆದ ಫೈನಲ್‌ನಲ್ಲಿ ಮೇರಿ ಕೋಮ್ ಆಸ್ಟ್ರೇಲಿಯದ ಎಪ್ರಿಲ್ ಫ್ರ್ಯಾಂಕ್ಸ್ ಅವರನ್ನು 5-0 ಅಂಕಗಳ ಅಂತರದಿಂದ ಮಣಿಸಿದರು. ಮೇರಿ ಪಟ್ಟುಗಳಿಗೆ ತತ್ತರಿಸಿದ ಫ್ರ್ಯಾಂಕ್ಸ್ ಪ್ರತಿಹೋರಾಟ ನೀಡುವಲ್ಲಿ ಸಂಪೂರ್ಣ ವಿಫಲರಾದರು. ಸ್ಪರ್ಧೆ ಏಕಪಕ್ಷೀಯವಾಗಿ ಮುಗಿಯಿತು.
ಮುಂಬರುವ ವಿಶ್ವ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಟೂರ್ನಿಯ ಹಿನ್ನೆಲೆಯಲ್ಲಿ ಮೇರಿ ಕೋಮ್ ಅವರಿಗೆ ಈ ಕೂಟ ಅತ್ಯಂತ ಮಹತ್ವದ್ದಾಗಿತ್ತು. 2019ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ರಶ್ಯದ ಯೆಕಟೆರಿನ್‌ಬರ್ಗ್‌ನಲ್ಲಿ ಸೆ. 7ರಿಂದ 21ರ ತನಕ ನಡೆಯಲಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸುವ ನಿಟ್ಟಿನಲ್ಲಿ ಮೇರಿ ಕೋಮ್ ಪಾಲಿಗೆ ಇದು ಮಹತ್ವದ ಕೂಟವಾಗಿದೆ.
Related Articles
Advertisement
ಈ ಕೂಟದಲ್ಲಿ ಭಾರತ ಒಟ್ಟು 9 ಪದಕ ಗೆದ್ದಿತು. ಇದರಲ್ಲಿ 7 ಚಿನ್ನದ ಪದಕಗಳಾದರೆ, 2 ಬೆಳ್ಳಿ ಪದಕಗಳಾಗಿವೆ. ಫೈನಲ್ ತಲುಪಿದ ಎಲ್ಲ 4 ವನಿತಾ ಬಾಕ್ಸರ್‌ಗಳು ಚಿನ್ನ ಜಯಿಸಿದರು. ಪುರುಷರು 3 ಚಿನ್ನ, 2 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಸಿಮ್ರನ್‌ಜಿತ್ ಕೌರ್, ಜಮುನಾ ಬೋರೊ, ಮೋನಿಕಾ, ಪುರುಷರ ವಿಭಾಗದಲ್ಲಿ ಅಂಕುಷ್ ದಹಿಯಾ, ನೀರಜ್ ಸ್ವಾಮಿ, ಅನಂತ್ ಪ್ರಹ್ಲಾದ್ ಸ್ವರ್ಣ ಸಾಧನೆಗೈದ ಬಾಕ್ಸರ್‌ಗಳು.