Advertisement
421 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ ಫಾಲೋಆನ್ಗೆ ಸಿಲುಕಿತ್ತು. ನಾಯಕ ಶಾನ್ ಮಸೂದ್ (145)-ಬಾಬರ್ ಆಜಂ (81) ಮೊದಲ ವಿಕೆಟಿಗೆ 205 ರನ್ ಒಟ್ಟುಗೂಡಿಸಿ ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರುಮಾಡಿದರು. ದ್ವಿತೀಯ ಸರದಿಯಲ್ಲಿ ಪಾಕ್ 478 ರನ್ ಪೇರಿಸಿತು.
ಸೆಂಚುರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶ ಪಾಕಿಸ್ಥಾನದ ಮುಂದಿತ್ತು. ಆದರೆ ಇದನ್ನು 2 ವಿಕೆಟ್ಗಳಿಂದ ಕಳೆದುಕೊಂಡಿತು. ಈ ಫಲಿತಾಂಶದಿಂದ ದಕ್ಷಿಣ ಆಫ್ರಿಕಾ ಮೊದಲ ಸಲ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಿತ್ತು. ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-615 ಮತ್ತು ವಿಕೆಟ್ ನಷ್ಟವಿಲ್ಲದೆ 58. ಪಾಕಿಸ್ಥಾನ-194 ಮತ್ತು 478.