Advertisement

ಮದುವೆ ಅಂದ್ರೆ  ರಾಜ- ರಾಣಿ ಕತೆಯಲ್ಲ!

07:45 AM Sep 13, 2017 | Harsha Rao |

ಸಂಬಂಧ ಕೂಡಿ ಬಂದಿದೆ. ಮದುವೆಯ ದಿನಾಂಕವು ಫಿಕ್ಸ್‌ಆಗಿದೆ. ಹೊಸ ಬದುಕಿನ ನೂರಾರು ಹೊಂಗನಸುಗಳನ್ನು ಕಂಡಿದ್ದೂ ಆಗಿದೆ. ಅಷ್ಟೇ ಅಲ್ಲ, ಮದುವೆಯ ನಂತರ ಹೇಗೆಲ್ಲಾ ಬಾಳಬೇಕು ಎಂದು ಮನಸು ಬಯಸಿದಂತೆಲ್ಲಾ ಯೋಚಿಸಿದ್ದೂ ಆಗಿದೆ. ಆದರೂ ಮನಸ್ಸಿನ ಯಾವುದೇ ಮೂಲೆಯಲ್ಲಿ ತಳಮಳ. ಭವಿಷ್ಯದಲ್ಲಿ ನಮಗೆ ಕಷ್ಟಗಳು ಎದುರಾಗಿಬಿಟ್ಟರೆ, ಅದೃಷ್ಟ ಕೈ ಕೊಟ್ಟು ಬಿಟ್ಟರೆ, ಅಕಸ್ಮಾತ್‌ ಹೊಂದಾಣಿಕೆಯೇ ತಪ್ಪಿಹೋಗಿ ಸಂಸಾರದ ಸರಿಗಮದಲ್ಲಿ ತಾಳ ತಪ್ಪಿದರೆ ಗತಿಯೇನು ಎಂಬುದು ಹೆಚ್ಚಿನವರ ಆತಂಕ. ಇಂಥ ಗೊಂದಲಗಳ ಜೊತೆಗೇ ಹೊಸ ಬದುಕು ಆರಂಭಿಸುವ ಮಂದಿ ಹೇಗೆ ಬದುಕಬೇಕು, ಜೀವನವನ್ನು ಹೇಗೆಲ್ಲಾ ಅರ್ಥ ಮಾಡಿಕೊಳ್ಳಬೇಕು ಅಂದರೆ-
ಮದುವೆಯ ಬಂಧವು ಪ್ರೀತಿಯ ಅನುಬಂಧ. ಅದು ಸಾಕಾರಗೊಳ್ಳಲು ಸ್ವಲ್ಪ ಶ್ರಮ, ಸುಮನಸು, ಅಲ್ಪ ಪ್ರೀತಿಯ ಸವಿಲೇಪನ, ಹೀಗೆ ಹಲವು ಭಾವನೆಗಳ ಸಮ್ಮಿಲನದ ಭಾವ ಬೆಸುಗೆ ಬೇಕು. ಕೇವಲ ಭಾವನೆ, ಕಲ್ಪನೆಗಳಿಂದ ಜೀವನ ಅಸಾಧ್ಯ. ಕಲ್ಪನೆಯೇ ಎಲ್ಲವೂ ಅಲ್ಲ, ಕಲ್ಪನಾಲೋಕವೇ ಬೇರೆ ವಾಸ್ತವವೇ ಬೇರೆ. ಇದನ್ನು ಎÇÉಾ ಯುವಕ, ಯುವತಿಯರು ಸಹಜವಾದ ನೆಲೆಗಟ್ಟಿನಲ್ಲಿ ಯೋಚಿಸಬೇಕು. 

Advertisement

ಕಲ್ಪನಾಲೋಕದಲ್ಲಿ ಕಾಣುವ ರಾಜಕುಮಾರ ಅಥವಾ ರಾಜಕುಮಾರಿ, ಬಣ್ಣ ಬಣ್ಣದ ಕನಸುಗಳು, ಮಹದಾಸೆಯ ಉತ್ತುಂಗ ಶಿಖರ ಇವೆಲ್ಲವೂ ನಿಜ ಜೀವನದಲ್ಲಿ ತಕ್ಷಣ ಸಾಕಾರ ಗೊಳ್ಳದಿ¨ªಾಗ, ಅಸಹನೆ, ಸಿಟ್ಟು, ಉದಾಸೀನ, ಬೇಸರ ಎಲ್ಲವೂ ಸೇರಿ ಜೀವನ ನರಕ ಎನಿಸುತ್ತದೆ. 

ಹೆಚ್ಚಿನ ಊಹಾಪೋಹಗಳ ಸಾಮ್ರಾಜ್ಯ ಕಟ್ಟದೆ, ಪ್ರೀತಿ, ಮದುವೆ, ಸಂಸಾರ ಎಲ್ಲವನ್ನೂ ವಾಸ್ತವದ ನೆಲೆಗಟ್ಟಿನಲ್ಲಿ ಚಿಂತಿಸಿ, ಭವಿಷ್ಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಗೃಹಸ್ಥಾಶ್ರಮಕ್ಕೆ ಕಾಲಿಡುವ ಮುನ್ನ ಯೋಚಿಸಬೇಕು. ಮದುವೆಯಾಗುವಾಗ, ನಂತರದ ಹೊಂದಾಣಿಕೆಯ ಬಗ್ಗೆ, ಜೀವನದ ಗುರಿಯ ಕಡೆಗೆ ಮುಂಜಾಗ್ರತೆಯಿಂದ, ಮುನ್ನೆಚ್ಚರಿಕೆಯಾಗಿ ಯೋಚಿಸಿ ವರ್ತಿಸಿದರೆ ನಲಿವಿನ ಬಾಳು, ಪ್ರೀತಿಯ ಜೀವನ, ಸುಖದ ಶಿಖರ ಏರಲು ಸಾಧ್ಯ. ಅಲ್ಲವೇ? ವಿವಾಹಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಅವು ನಡೆಯುವುದು ಭೂಮಿಯಲ್ಲಿ ಎನ್ನುವ ಆಡುಮಾತನ್ನು ಮದುವೆಯೆಂಬ ಪ್ರೀತಿಯ ಬೆಸುಗೆಯ ಭಾವ ಬಂಧವನ್ನು ಆಶಾಭಾವದಿಂದ ಒಲಿಸಿ ಜೀವನವನ್ನು ಸ್ವರ್ಗಸಮಾನವಾಗಿ ರೂಪಿಸುವುದು ನಮ್ಮ ಕೈಯಲ್ಲಿದೆ. ಸ್ವಲ್ಪ ಪ್ರೀತಿಯ ಲೇಪನ, ಹೊಂದಾಣಿಕೆ, ತಾಳ್ಮೆ, ಒಳ್ಳೆಯ ಮನಸ್ಥಿತಿ ಇವೆÇÉಾ ನಮ್ಮಲ್ಲಿ ಒಗ್ಗೂಡಿಸಿಕೊಂಡರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬಾಳಬಹುದು. ದಾಂಪತ್ಯದ ಸುಖ, ಸಂತೋಷದ ಹೊಳೆಯಲ್ಲಿ ಈಜಬಹುದು.

– ಶಾರದಾ ಮೂರ್ತಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next