Advertisement

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ರವಿವಾರ ಮದುವೆಯೋ ಮದುವೆ…!ಕಟೀಲಿನಲ್ಲಿ 35 ಜೋಡಿ ವಿವಾಹ

01:56 PM Jan 04, 2021 | Team Udayavani |

ಮಂಗಳೂರು/ ಉಡುಪಿ : ಶುಭ ಸಮಾರಂಭಗಳಿಗೆ ರವಿವಾರ ಉತ್ತಮ ದಿನವಾದ ಹಿನ್ನೆಲೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಹಲವಾರು ವಿವಾಹಗಳು ರವಿವಾರ ಜರಗಿವೆ. ಮಂಗಳೂರೊಂದರಲ್ಲೇ ಅಂದಾಜು 75 ಹಾಗೂ ಉಡುಪಿ ಜಿಲ್ಲೆಯಲ್ಲಿ 60ಕ್ಕೂ ಮೇಲ್ಪಟ್ಟು ಮದುವೆಗಳು ನಡೆದಿವೆ.

Advertisement

ಮಂಗಳೂರಿನಲ್ಲಿ ಸುಮಾರು 35 ಹಾಗೂ ಉಡುಪಿಯಲ್ಲಿ ನಗರದಲ್ಲಿ 20ಕ್ಕೂ ಹೆಚ್ಚು ವಿವಾಹ ಮಂಟಪಗಳಿದ್ದು, ಕೆಲವು ಮಂಟಪಗಳಲ್ಲಿ ದೊಡ್ಡ ಮತ್ತು ಮಿನಿ ಹಾಲ್‌ಗ‌ಳಿರುತ್ತವೆ. ಕೆಲವು ಹಾಲ್‌ಗ‌ಳಲ್ಲಿ ಮೂರು ಪ್ರತ್ಯೇಕ ಹಾಲ್‌ಗ‌ಳಿವೆ. ಈ ಎಲ್ಲ ಹಾಲ್‌ಗ‌ಳ ಪೈಕಿ ಶೇ. 95ರಷ್ಟು ಹಾಲ್‌ಗ‌ಳಲ್ಲಿ ರವಿವಾರ ಮದುವೆಗಳು ನಡೆದಿವೆ.

ಕ್ಯಾಟರಿಂಗ್‌ ಸೇವೆಗೂ ರವಿವಾರ ಬೇಡಿಕೆ ಹೆಚ್ಚಿತ್ತು ಎಂದು ಕ್ಯಾಟರಿಂಗ್‌ ಮಾಲಕರ ಸಂಘದ ಗೌರವಾ ಧ್ಯಕ್ಷ ಸುಧಾಕರ ಕಾಮತ್‌ ಎಂ. ತಿಳಿಸಿದ್ದಾರೆ. ಕೆಲವು ಕಡೆ ಮನೆಗಳಲ್ಲೇ ವಿವಾಹಗಳು ಜರಗಿವೆ.

ಇದನ್ನೂ ಓದಿ:ಮುಂದಿನ ಐದಾರು ತಿಂಗಳಲ್ಲಿ ಗೋಕಾಕ ಪ್ರತ್ಯೇಕ ಜಿಲ್ಲೆ ಮಾಡೋಣ: ರಮೇಶ್ ಜಾರಕಿಹೊಳಿ

ಕಟೀಲು: 35 ಜೋಡಿ ವಿವಾಹ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 35 ಜೋಡಿಗಳಿಗೆ ಸರಳ ರೀತಿಯಲ್ಲಿ ವಿವಾಹವು ರವಿವಾರ ನಡೆಯಿತು. ಬೆಳಗ್ಗೆ 8.45ರಿಂದ ಆರಂಭವಾದ ವಿವಾಹ ಮುಹೂರ್ತ 1 ಗಂಟೆಯ ತನಕ ನಡೆಯಿತು. 10 ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 6 ಸಾವಿರ ಮಂದಿ ಭೋಜನ ಸ್ವೀಕರಿಸಿದ್ದಾರೆ.

Advertisement

ಕೊಲ್ಲೂರು: ಭಕ್ತರ ಸಂಖ್ಯೆ ಗಣನೀಯ ವೃದ್ಧಿ
ಕೊಲ್ಲೂರು: ಹೊಸ ವರ್ಷದ ಮೊದಲ ರವಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಹೊಸ ವರುಷದ ಆರಂಭ, ವಾರಾಂತ್ಯ ಹಾಗೂ ಶಾಲಾ ಕಾಲೇಜುಗಳು ತೆರೆಯುತ್ತಿರುವ ಸಲುವಾಗಿ ದಿನೇದಿನೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ವಿಶೇಷ ಸೇವೆಗಾಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ರವಿವಾರ 5 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವಿಯ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next