Advertisement

ಪ್ರಾಯೋಗಿಕ ಅನುಷ್ಠಾನಕ್ಕೆ ಗ್ರಾಮಗಳ ಆಯ್ಕೆ

12:55 AM Feb 15, 2019 | Team Udayavani |

ಕುಂದಾಪುರ: ಮದುವೆ, ಮೆಹಂದಿ ಕಾರ್ಯಕ್ರಮಗಳಲ್ಲಿ ಮದ್ಯ ನಿಷೇಧ ಮಾಡಬೇಕೆಂಬುದು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಸಾರ್ವಜನಿಕರ ಆಶಯವಾಗಿದ್ದು ಇದರ ಅನುಷ್ಠಾನಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಒಂದೊಂದು ಗ್ರಾಮವನ್ನು ಆಯ್ದುಕೊಂಡಿದೆ ಎಂದು ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

Advertisement

ಮಂಗಳವಾರ ಇಲ್ಲಿನ ಶಿವಪ್ರಸಾದ್‌ ಗ್ರ್ಯಾಂಡ್‌ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಮಟ್ಟದ ಸಭೆಯಲ್ಲಿ  ಅವರು ಮಾತನಾಡಿದರು.

ಉಡುಪಿ ಜಿಲ್ಲೆಯ ಕಾಪು, ಹೆಬ್ರಿ, ಕಿರಿಮಂಜೇಶ್ವರ, ಬಸೂÅರು ವಲಯದ ತಲಾ ಒಂದು ಗ್ರಾಮಗಳನ್ನು ಪ್ರಾಯೋಗಿಕವಾಗಿ ಮದ್ಯ ರಹಿತ ಕಾರ್ಯಕ್ರಮಗಳಿಗಾಗಿ ಆಯ್ದುಕೊಳ್ಳಲಾಗಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರ ಜತೆ ಚರ್ಚಿಸಿ ಅನುಷ್ಠಾನ ಮಾಡ ಲಾಗುವುದು. ಮುಂದಿನ ದಿನಗಳಲ್ಲಿ ಇದು ವ್ಯಾಪಕವಾಗಬೇಕಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪುರುಷೋತ್ತಮ್‌ ಪಿ.ಕೆ., ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ 13,321 ವಿದ್ಯಾರ್ಥಿಗಳು ಭಾಗವಹಿಸಿದ್ದು ಯಶಸ್ವಿ ಯಾಗಿ ಜಾಥಾ, ಚಲನಚಿತ್ರ ಪ್ರದರ್ಶನ ನಡೆಸಲಾಗಿದೆ. ಒಟ್ಟು  83 ಸಂಘ ಸಂಸ್ಥೆಗಳು ಜತೆಗೂಡಿದ್ದವು ಎಂದರು.

ಕಾರ್ಕಳದಲ್ಲಿ  ಈಗಾಗಲೇ ತಾಲೂಕು ಜನಜಾಗೃತಿ ಸಮಿತಿ ರಚಿಸಲಾಗಿದ್ದು ಬಾಕಿ ಉಳಿದ ಉಡುಪಿ, ಬೈಂದೂರು, ಕುಂದಾಪುರದಲ್ಲಿ ಸಮಿತಿ ರಚಿಸುವ ಕುರಿತು ಚರ್ಚಿಸಲಾಯಿತು. ವಲಯ ಮಟ್ಟದಲ್ಲೂ ಪದಾಧಿಕಾರಿಗಳನ್ನು ಬದಲಾಯಿಸ ಬೇಕೆಂದು ಜಿಲ್ಲಾಧ್ಯಕ್ಷ ನವೀನ್‌ ಅಮೀನ್‌ ತಿಳಿಸಿದರು.

Advertisement

ಜನಜಾಗೃತಿ ವೇದಿಕೆಯ ತಿಮ್ಮಯ ನಾಯ್ಕ ಪೂರಕ ಮಾಹಿತಿ ನೀಡಿದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ದೇವದಾಸ ಹೆಬ್ಟಾರ್‌, ಉಡುಪಿ ಅಧ್ಯಕ್ಷ ಹರೀಶ್‌ ಶೆಟ್ಟಿ ಚೇರ್ಕಾಡಿ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಮುರಳೀಧರ ಶೆಟ್ಟಿ ವರದಿ ವಾಚಿಸಿದರು. ಉದಯ್‌ ಕುಮಾರ್‌ ಹೆಗ್ಡೆ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next