ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು ಹೊಸ ಸಾರ್ವಕಾಲಿಕ ಎತ್ತರದಲ್ಲಿ ಕೊನೆಗಳಿಸಿದವು.
ಸೆನ್ಸೆಕ್ಸ್ 21.66 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 31,161.64 ಅಂಕಗಳ ಮಟ್ಟಕ್ಕೆ ಏರಿತು; ನಿನ್ನೆ ಮಂಗಳವಾರ ಸೆನ್ಸೆಕ್ಸ್ ದಿನಾಂತ್ಯಕ್ಕೆ ಕಂಡ ಎತ್ತರ 36,139.98.
ನಿಫ್ಟಿ ಇಂದು 2.30 ಅಂಕಗಳ ಮುನ್ನಡೆಯನ್ನು ಸಾಧಿಸಿ 11,086.00 ಅಂಕಗಳ ಮಟ್ಟವನ್ನು ತಲುಪಿ ಹೊಸ ದಾಖಲೆಯ ಎತ್ತರವನ್ನು ತಲುಪಿತು. ನಿಫ್ಟಿ ನಿನ್ನೆ ಕಂಡಿದ್ದ ಎತ್ತರ 11,083.70.
ನಾಳೆ ಗುರುವಾರ ಜನವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ ಗೊಳಿಸುವ ದಿನವಾಗಿರುವುದರಿಂದ ವಹಿವಾಟುದಾರರು ಇಂದು ಶಾರ್ಟ್ ಕವರಿಂಗ್ ಮಾಡಿದರು. ಟೆಲಿಕಾಂ ಶೇರುಗಳಿಂದು ತೀವ್ರ ಹಿನ್ನಡೆಗೆ ಗುರಿಯಾದವು.
ವಿದೇಶಿ ಹೂಡಿಕೆದಾರರು ಶೇರು ಖರೀದಿಯನ್ನು ನಿರಂತರವಾಗಿ ಮುಂದುವರಿಸುತ್ತಿದ್ದು ಅವರಿಂದ 1,229.35 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದರು. ದೇಶೀಯ ಸಾಂಸ್ಥಿಕ ಹೂಡಿಕೆರಾರು 169.03 ಕೊಟಿ ರೂ. ಶೇರುಗಳನ್ನು ನಿನ್ನೆ ಖರೀದಿಸಿದ್ದರು.