Advertisement

ಜಿಡಿಪಿ ಏರಿಕೆ ನಿರೀಕ್ಷೆ; ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಭರ್ಜರಿ ಜಿಗಿತ, ಹೊಸ ದಾಖಲೆ

09:54 AM Nov 29, 2019 | Team Udayavani |

ಮುಂಬೈ: ಎರಡನೇ ತ್ರೈಮಾಸಿಕದ ಜಿಡಿಪಿ ಸಂಖ್ಯೆ ಏರಿಕೆ ಕಾಣಲಿದೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಗುರುವಾರವೂ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ದಾಖಲೆಯ ವಹಿವಾಟು ನಡೆಸಿದೆ. ಬ್ಯಾಂಕಿಂಗ್, ಮೆಟಲ್ ಹಾಗೂ ಫೈನಾಶ್ಶಿಯಲ್ ಶೇರುಗಳ ಭರ್ಜರಿ ಖರೀದಿಯಾದ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 109.56 ಅಂಕಗಳ ಏರಿಕೆಯೊಂದಿಗೆ  41,130.17 ಅಂಕಗಳೊಂದಿಗೆ ದಾಖಲೆ ವಹಿವಾಟು ಮುಗಿಸಿದೆ.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 53.60 ಅಂಕಗಳ ಏರಿಕೆಯೊಂದಿಗೆ 12,154.30 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

ಮಂಗಳವಾರ ಕೂಡಾ ಮೊದಲ ಬಾರಿ 41,000 ಅಂಕಗಳ ಗಡಿ ದಾಟುವ ಮೂಲಕ ಮುಂಬೈ ಶೇರುಪೇಟೆ ದಾಖಲೆ ನಿರ್ಮಿಸಿತ್ತು.  ಬುಧವಾರವೂ ಕೂಡಾ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 199 ಅಂಕ ಏರಿಕೆ ಕಂಡು 41,020ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು.

ಭರ್ಜರಿ ಶೇರು ಪೇಟೆ ಸೆನ್ಸೆಕ್ಸ್ ಸೂಚ್ಯಂಕ ಏರಿಕೆಯಿಂದ ಯೆಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎಸ್ ಬಿಐ, ಭಾರ್ತಿ ಏರ್ ಟೆಲ್ ಶೇರುಗಳಿಗೆ ಹೆಚ್ಚಿನ ಲಾಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next