Advertisement

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

07:31 AM Nov 29, 2024 | Team Udayavani |

ಮೇಷ: ಯಶಸ್ಸಿನ ಕಡೆಗೆ ಸಾಗುವ ಸನ್ನಿವೇಶ. ಉದ್ಯೋಗಸ್ಥರಿಗೆ ಸುಖಾನುಭೂತಿ. ಗೃಹಾಲಂಕಾರ ಸಾಮಗ್ರಿ ಮಾರಾಟಗಾರರಿಗೆ ಅಧಿಕ ಲಾಭ. ಕೃಷಿಕರಿಗೆ, ಶ್ರಮಜೀವಿಗಳಿಗೆ ತಕ್ಕ ಪ್ರತಿಫ‌ಲ. ಪಾಲುದಾರಿಕೆ ವ್ಯವಹಾರಸ್ಥರಿಗೆ ಅನುಕೂಲ.

Advertisement

ವೃಷಭ: ಆತುರವಿಲ್ಲದೆ ಮುಂದುವರಿದರೆ ಯಶಸ್ಸು ಖಚಿತ. ವಸ್ತ್ರೋದ್ಯಮಿಗಳಿಗೆ ಮಂದಗತಿಯ ಮುನ್ನಡೆ. ಹಿರಿಯರ ಆರೋಗ್ಯ, ಆವಶ್ಯಕತೆಗಳತ್ತ ಗಮನವಿರಲಿ. ಹೊಸ ವಾಹನ ಖರೀದಿಗೆ ಯೋಚನೆ.

ಮಿಥುನ: ಧಾರ್ಮಿಕ ಚಿಂತನೆ, ದೇವತಾರ್ಚನೆಯಲ್ಲಿ ಆಸಕ್ತಿ. ಉದ್ಯೋಗಸ್ಥರಿಗೆ ವೃತ್ತಿ ಪ್ರಾವೀಣ್ಯ ವೃದ್ಧಿ. ಖಾದಿ, ಗ್ರಾಮೋದ್ಯೋಗ ವ್ಯವಹಾರಸ್ಥರಿಗೆ ಲಾಭ. ಅಂಗಸಾಧನೆ ಮಾಡುವವರಿಗೆ ಎಚ್ಚರಿಕೆ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ.

ಕರ್ಕಾಟಕ: ಅನಿರೀಕ್ಷಿತ ಧನಾಗಮ ಸಂಭವ. ಗುರು ಹಿರಿಯರಿಂದ ಸಕಾಲಿಕ ಮಾರ್ಗದರ್ಶನ. ಸಂಗಾತಿಯಿಂದ ಉತ್ತಮ ಸಹಕಾರ. ಹೂವು, ತರಕಾರಿ ಬೆಳೆಗಾರರಿಗೆ ಅಧಿಕ ಲಾಭ. ಗೃಹಿಣಿಯರು, ಮಕ್ಕಳಿಗೆ ಉಲ್ಲಾಸದ ವಾತಾವರಣ.

ಸಿಂಹ: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು. ದೀರ್ಘ‌ಕಾಲೀನ ಹೂಡಿಕೆಗಳಲ್ಲಿ ಆಸಕ್ತಿ. ಶುಭ ಕಾರ್ಯಕ್ಕಾಗಿ ಸಡಗರದ ವಾತಾವರಣ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ.

Advertisement

ಕನ್ಯಾ: ದೈವಾನುಗ್ರಹಕ್ಕಾಗಿ ವಿಶೇಷ ಪ್ರಯತ್ನ. ಇಷ್ಟ ಮಿತ್ರರೊಡನೆ ಭೇಟಿ. ಉದ್ಯೋಗ ರಂಗದಲ್ಲಿ ಕಾರ್ಯ ನಿರ್ವಿಘ್ನ. ಆಪ್ತ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ನಿರ್ಮಾಣ ಸಾಮಗ್ರಿ ವಿತರಕರಿಗೆ ಅನುಕೂಲ.

ತುಲಾ: ಮನಸ್ಸಿನ ಸಮತೋಲನ ಕಾಯ್ದು ಕೊಳ್ಳಿರಿ. ಹತ್ತಿರದ ದೇವತಾ ಸನ್ನಿಧಿ ಸಂದರ್ಶನ ಉದ್ಯೋಗದಲ್ಲಿ ಅಭಿವೃದ್ಧಿ. ವ್ಯವಹಾರ ಕ್ಷೇತ್ರದಲ್ಲಿ ಮಂದಗತಿಯ ಮುನ್ನಡೆ. ಹಿತಶತ್ರುಗಳ ಕುರಿತು ಎಚ್ಚರಿಕೆಯಲ್ಲಿರಿ.

ವೃಶ್ಚಿಕ: ಸಮಾಧಾನದಿಂದ ಮುನ್ನಡೆಯಿರಿ. ವ್ಯವಹಾರ ವಿಸ್ತರಣೆಯಲ್ಲಿ ಎಚ್ಚರದಿಂದ ಮುನ್ನಡೆಯಿರಿ. ಉದ್ಯೋಗ ಕ್ಷೇತ್ರದ ಕಿರಿಕಿರಿ ಪ್ರತಿಫ‌ಲ ಪ್ರಾಪ್ತಿಗೆ ಅಡ್ಡಿಯಾಗದು.ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಧನು: ಹೊಂದಾಣಿಕೆಯ ಮನೋಭಾವದಿಂದ ಸವಾಲು ನಿರ್ವಹಣೆ. ನಿರೀಕ್ಷಿತ ಲಾಭ ಕೈಸೇರಿ ಮನಸ್ಸು ನಿರಾಳ. ಸಹಾಯಕರಿಂದ ಅಪೇಕ್ಷಿತ ಸಹಕಾರದ ವರ್ತನೆ. ಸಂಗಾತಿಯಿಂದ ಸಹಕಾರ. ಸಂಸಾರ ಜೀವನ ಸುಗಮ.

ಮಕರ: ಅಪೇಕ್ಷಿತ ಕಾರ್ಯಗಳೆಲ್ಲವೂ ಸುಗಮ. ಆಗಾಗ ಎದುರಾಗುವ ವಿಘ್ನಗಳು ದೂರ. ಉದ್ಯೋಗ ಕ್ಷೇತ್ರದ ಕಿರಿಕಿರಿಗಳು ತೊಲಗಿ ಮನಸ್ಸಿಗೆ ಶಾಂತಿ. ಆರ್ಥಿಕ ವ್ಯವಹಾರ ನಿರ್ವಾಹಕರಿಗೆ ಹೊಸ ಜವಾಬ್ದಾರಿಗಳು. ಮನೆಯಲ್ಲಿ ಶಾಂತಿ, ನೆಮ್ಮದಿ.

ಕುಂಭ: ಸತ್ಕಾರ್ಯಗಳಿಗೆ ಸಕ್ರಿಯವಾಗಿ ನೆರವಾಗುವ ಅವಕಾಶ. ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ. ಸಾಮಾಜಿಕ ಜವಾಬ್ದಾರಿಗಳ ನಿರ್ವಹಣೆ ಸುಲಭವಾಗಲಿದೆ.ಹತ್ತಿರದ ಬಂಧುವರ್ಗ ದಲ್ಲಿ ಶುಭಕಾರ್ಯ. ಪ್ರಕೃತಿ ಸೌಂದರ್ಯದ ತಾಣವೊಂದಕ್ಕೆ ಭೇಟಿ. ಸಂಸಾರದಲ್ಲಿ ವಿಶ್ವಾಸ ವೃದ್ಧಿ.

ಮೀನ: ಗುರು ದೇವತಾನುಗ್ರಹದಿಂದ ಕಾರ್ಯಗಳು ನಿರ್ವಿಘ್ನ. ಹೊಸ ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರಿಕೆಯಿರಲಿ. ವಾಹನಾದಿ ವ್ಯವಹಾರಸ್ಥರಿಗೆ ಸಂಧಿಕಾಲ. ಮುದ್ರಣ ವ್ಯವಹಾರಸ್ಥರಿಗೆ ಶುಭ. ಹಿರಿಯರ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ನಿಶ್ಚಿಂತೆಯ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next