Advertisement

TCS ನಿರೀಕ್ಷೆಗೂ ಮೀರಿದ ಫ‌ಲಿತಾಂಶ: ಸೆನ್ಸೆಕ್ಸ್‌ 4ನೇ ದಿನವೂ ಗೆಲುವು

04:33 PM Jul 11, 2018 | |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ನಿರಂತರ ನಾಲ್ಕನೇ ದಿನದ ಗೆಲುವಿನ ಓಟದಲ್ಲಿ ಇಂದು ಬುಧವಾರ 26 ಅಂಕಗಳ ಮುನ್ನಡೆಯನ್ನು ದಾಖಲಿಸಿ 36,255.93 ಅಂಕಗಳ ಮಟ್ಟಕ್ಕೇರಿತು. ಐಟಿ ರಂಗದ ದಿಗ್ಗಜ ಸಂಸ್ಥೆಯಾಗಿರುವ ಟಿಸಿಎಸ್‌ ನಿರೀಕ್ಷೆಗೂ ಮೀರಿದ ಉತ್ತಮ ಜೂನ್‌ ತ್ತೈಮಾಸಿಕ ಫ‌ಲಿತಾಂಶವನ್ನು ಪ್ರಕಟಿಸಿರುವುದೇ ಸೆನ್ಸೆಕ್ಸ್‌ ಗೆಲುವಿಗೆ ಕಾರಣವಾಯಿತು. 

Advertisement

ಟಿಸಿಎಸ್‌ ಶೇರು ಇಂದು ಶೇ.5.47ರ ಜಿಗಿತವನ್ನು ಕಂಡು ತನ್ನ ಜೀವವಾನದ ಎತ್ತರವಾಗಿ 1,979.60 ರೂ. ಮಟ್ಟಕ್ಕೆ ಏರಿತು. ಟಿಸಿಎಸ್‌ ನಿವ್ವಳ ಲಾಭ ಜೂನ್‌ ತ್ತೈಮಾಸಿಕದಲ್ಲಿ ಶೇ.23.4 ರಷ್ಟು ಏರಿರುವುದು ಮುಂಬಯಿ ಶೇರು ಮಾರುಕಟ್ಟೆಗೆ ಹೊಸ ಉತ್ತೇಜನ ನೀಡಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.05 ಅಂಕಗಳ ಅಲ್ಪ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟು° 10,948.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ನಿನ್ನೆ ಮಂಗಳವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು 293.96 ಕೋಟಿ ರೂ. ಶೇರು ಖರೀದಿಸಿದ್ದವು; ವಿದೇಶಿ ಹೂಡಿಕೆದಾರ ಸಂಸ್ಥೆಗಳು 20.73 ಕೋಟಿ ರೂ. ಶೇರು ಮಾರಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next