ನವದೆಹಲಿ:ಜಾಗತಿಕ ಷೇರು ಮಾರುಕಟ್ಟೆಯ ನೆಗೆಟಿವ್ ಟ್ರೆಂಡ್ ಪರಿಣಾಮ ಬುಧವಾರ(ಜೂನ್ 30) ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಅಧಿಕ ಲಾಭಾಂಶವನ್ನು ಕಾಯ್ದಿರಿಸಿದ ಪರಿಣಾಮ 67 ಅಲ್ಪ ಅಂಕಗಳ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು.
ಇದನ್ನೂ ಓದಿ:ಮಂಗಳೂರು : ಸಿಸಿಬಿ ಅಧಿಕಾರಿಗಳ ದಾಳಿ, 30 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಗಾಂಜಾ ವಶ
ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಸುಮಾರು 400 ಅಂಕಗಳಷ್ಟು ಏರಿಕೆ ಕಂಡಿದ್ದು, ಬಳಿಕ ವಹಿವಾಟು ಯೂ ಟರ್ನ್ ಹೊಡೆದ ಪರಿಣಾಮ 66.95 ಅಂಕಗಳ ಕುಸಿತದೊಂದಿಗೆ 52,482.71 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 26.95 ಅಂಕಗಳ ಇಳಿಕೆಯೊಂದಿಗೆ 17,721.50 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು
ಅಂತ್ಯಗೊಳಿಸಿದೆ. ಪವರ್ ಗ್ರಿಡ್, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಎನ್ ಟಿಪಿಸಿ, ಎಚ್ ಯುಎಲ್ ಮತ್ತು ಎಲ್ ಆ್ಯಂಡ್ ಟಿ ಷೇರುಗಳು ನಷ್ಟ ಅನುಭವಿಸಿದೆ.
ಏತನ್ಮಧ್ಯೆ ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ನೆಸ್ಲೆ ಇಂಡಿಯಾ ಮತ್ತು ಮಾರುತಿ ಷೇರುಗಳು ಲಾಭಗಳಿಸಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಏರಿಕೆಯಿಂದ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಲಾಭಾಂಶ ಕಾಯ್ದಿರಿಸಿದ ಪರಿಣಾಮ ಷೇರುಪೇಟೆ ವಹಿವಾಟು ಇಳಿಕೆಯಾಗಲು ಕಾರಣವಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ ಹೆಡ್ ಬಿನೋದ್ ಮೋದಿ ತಿಳಿಸಿದ್ದಾರೆ.