ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಶುಕ್ರವಾರ ಮೂರನೇ ದಿನದ ಬಜೆಟ್ ರಾಲಿಯನ್ನು ಮುಂದುವರಿಸಿತಾದರೂ ದಿನದ ವಹಿವಾಟನ್ನು ಅತ್ಯಲ್ಪ ಗಳಿಕೆಯಾಗಿ 13.91 ಅಂಕಗಳ ಏರಿಕೆಯೊಂದಿಗೆ 28,240.52 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಶೇರು ಸೂಚ್ಯಂಕವು 6.70 ಅಂಕಗಳ ಅಲ್ಪ ಗಳಿಕೆಯೊಂದಿಗೆ ದಿನದ ವಹಿವಾಟನ್ನು 8,740.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಾರದ ನೆಲೆಯಲ್ಲಿ ಸೆನ್ಸೆಕ್ಸ್ ಒಟ್ಟಾರೆಯಾಗಿ ಕಂಡಿರುವ ಏರಿಕೆ 358.06; ನಿಫ್ಟಿ ಕಂ ಡಿರುವ ಏರಿಕೆ 99.70 ಅಂಕಗಳು.
ಈಚೆಗೆ ಸಾರ್ವಜನಿಕರಿಗೆ ತಲಾ 806 ರೂ. ದರದಲ್ಲಿ ನೀಡಲ್ಪಟ್ಟಿದ್ದ ಬಿಎಸ್‌ಇ ಶೇರುಗಳು ಇಂದು 1,069.20 ರೂ. ಬೆಲೆಯಲ್ಲಿ ಲಿಸ್ಟ್ ಆದದ್ದು ವಿಶೇಷವೆನಿಸಿತು.
ವಿದೇಶಿ ಹೂಡಿಕೆದಾರರು 108.59 ಕೋಟಿ ರೂ.ಗಳ ಶೇರುಗಳನ್ನು ಖರೀದಿಸಿದರೆ ದೇಶೀಯ ಹೂಡಿಕೆದಾರರು 1,133.74 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿರುವುದು ದಾಖಲಾಗಿದೆ.