ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ವಹಿವಾಟಿನ ಪರಿಣಾಮ ಮಂಗಳವಾರ (ಜೂನ್ 14) ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 150ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಪರಿಷ್ಕೃತ ಪಠ್ಯಪುಸ್ತಕವು ಬಿಜೆಪಿ ಹಾಗೂ ಆರೆಸ್ಸೆಸ್ ನ ಭಿತ್ತಿ ಪತ್ರ: ಪ್ರಿಯಾಂಕ್ ಖರ್ಗೆ ಆರೋಪ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 153.13 ಅಂಕಗಳಷ್ಟು ಇಳಿಕೆಯೊಂದಿಗೆ 52,693.57 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 42.30 ಅಂಕ ಕುಸಿತದೊಂದಿಗೆ 15,732.10 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್ ಇಳಿಕೆಯಿಂದಾಗಿ ಬಜಾಜ್ ಆಟೋ, ಇಂಡಸ್ ಇಂಡ್ ಬ್ಯಾಂಕ್, ಹಿಂಡಲ್ಕೋ ಇಂಡಸ್ಟ್ರೀಸ್, ಒಎನ್ ಜಿಸಿ ಮತ್ತು ಟೆಕ್ ಮಹೀಂದ್ರ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎನ್ ಟಿಪಿಸಿ, ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಏರ್ ಟೆಲ್, ಅಪೋಲೊ ಆಸ್ಪತ್ರೆ ಮತ್ತು ಡೇವಿಸ್ ಲ್ಯಾಬ್ಸ್ ಷೇರುಗಳು ಲಾಭಗಳಿಸಿದೆ.
ಇನ್ನುಳಿದಂತೆ ಆಟೋ, ಮೆಟಲ್, ತೈಲ ಮತ್ತು ಅನಿಲ ಸೆಕ್ಟರ್ ಗಳ ಷೇರುಗಳ ಮೌಲ್ಯ ಕುಸಿತ ಕಂಡಿದೆ. ಕ್ಯಾಪಿಟಲ್ ಗೂಡ್ಸ್, ಪವರ್ ಸೆಕ್ಟರ್ ಷೇರುಗಳ ಬೆಲೆ ಏರಿಕೆಯಾಗಿರುವುದಾಗಿ ಮಾರುಕಟ್ಟೆ ವರದಿ ತಿಳಿಸಿದೆ.