Advertisement

ಕುಡಿಯುವ ನೀರು ಪೂರೈಕೆಗೆ ಆಗ್ರಹ

03:49 PM Jun 25, 2020 | Naveen |

ಮರಿಯಮ್ಮನಹಳ್ಳಿ: ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗದೇ ಜನ ಪರಿತಪಿಸುತ್ತಿದ್ದಾರೆ. ತುಂಗಭದ್ರಾ ನದಿ ಅಣೆಕಟ್ಟಿಗಾಗಿ ಊರುಗಳನ್ನೇ ತೊರೆದು ಬಂದ ನಮ್ಮ ಜನ ನದಿ ನೀರಿನಿಂದ ವಂಚಿತರಾಗಿದ್ದಾರೆ. ಆದರೆ ಪಾವಗಢ ತಾಲೂಕಿನ ಬಹುಗ್ರಾಮಗಳಿಗೆ ನದಿ ನೀರನ್ನು ಪೂರೈಸುವ ಯೋಜನೆ ಆರಂಭವಾಗುತ್ತಿದೆ. ಮರಿಯಮ್ಮನಹಳ್ಳಿ ಪಟ್ಟಣದ ಜನತೆಗೂ ಕುಡಿಯುವ ನೀರು ಒದಗಿಸಬೇಕು ಎಂದು 114 ಡಣಾಪುರ ಕ್ಷೇತ್ರದ ಜಿಪಂ ಸದಸ್ಯೆ ರೇಖಾ ಪೂಜಾರ್‌ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ಗೆ ಮನವಿ ಸಲ್ಲಿಸಿದ್ದಾರೆ. ಮರಿಯಮ್ಮನಹಳ್ಳಿ ಪಟ್ಟಣದಲ್ಲಿ 18 ವಾರ್ಡ್‌ಗಳಿದ್ದು ಸುಮಾರು 25 ಸಾವಿರ ಜನಸಂಖ್ಯೆ ಇದೆ. ಈಗಿರುವ ಹನುಮನಹಳ್ಳಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸಮರ್ಪಕ ಕುಡಿಯುವ ನೀರನ್ನು ಒದಗಿಸಲಾಗುತ್ತಿಲ್ಲ. ಹೆಚ್ಚಾದ ಜನಸಂಖ್ಯೆಗನುಗುಣವಾಗಿ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಾಂಕೇತಿಕ ಪ್ರತಿಭಟನೆ: ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜೊತೆಗೇ ಮರಿಯಮ್ಮನಹಳ್ಳಿ ಪಟ್ಟಣಕ್ಕೂ ಕುಡಿಯುವ ನೀರಿನ ಯೋಜನೆ ಒದಗಿಸಿಕೊಡಲು ಒತ್ತಾಯಿಸಿ ಜೂ.25 ರಂದು ಪಟ್ಟಣದ ನಾಣಿಕೆರೆ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಪೂಜಾರ್‌ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next