Advertisement

Bengaluru ಮಾ. 14: ಪೇಜಾವರ ಶ್ರೀಗಳಿಗೆ ಸ್ವಾಗತ

12:57 AM Mar 12, 2024 | Team Udayavani |

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಅನಂತರ 48 ದಿನಗಳ ಮಂಡಲೋತ್ಸವವನ್ನು ಪೂರ್ಣಗೊಳಿಸಿ ಬೆಂಗಳೂರಿಗೆ ಆಗಮಿಸುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಮಾ. 14ರಂದು ಭವ್ಯವಾದ ಪುರಪ್ರವೇಶ ಸ್ವಾಗತ ಹಾಗೂ ಅಭಿನಂದನೆಯನ್ನು ಹಮ್ಮಿಕೊಳ್ಳಲಾಗಿದೆ.

Advertisement

ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥರ ಅಭಿನಂದನ ಸಮಿತಿಯು ಮಾ. 14ರಂದು ಸಂಜೆ 3.30ಕ್ಕೆ ಪಿಇಎಸ್‌ ಕಾಲೇಜಿನ ಹಿಂಭಾಗದ ನೈಸ್‌ ರಸ್ತೆಯ ಟೋಲ್‌ ಬಳಿಯಿಂದ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದವರೆಗೆ ಬೈಕ್‌ ರ್‍ಯಾಲಿ, ಸಂಜೆ 5ಕ್ಕೆ ದೊಡ್ಡ ಗಣಪತಿ ದೇವಸ್ಥಾನದಿಂದ ಪೂರ್ಣಪ್ರಜ್ಞಾ ವಿದ್ಯಾಪೀಠದವರೆಗೆ ಶ್ರೀರಾಮ-ರಾಮಾಯಣಗಳ ಜತೆ ಸ್ವಾಮೀಜಿಯವರ ಶೋಭಾ ಯಾತ್ರೆ ಆಯೋಜಿಸಲಾಗಿದೆ.

ಸಂಜೆ 6ಕ್ಕೆ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಅಭಿವಂದನ ಸಮಾರಂಭ ನಡೆಯಲಿದ್ದು ಸಾರಿಗೆ ಸಚಿವ ರಾಮ
ಲಿಂಗಾರೆಡ್ಡಿ, ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಅಭಿನಂದನ ಸಮಿತಿಯ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ಪಾಲ್ಗೊಳ್ಳಲಿದ್ದಾರೆ. ಶ್ರೀ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

‘ರಾಮಮಂದಿರದಿಂದ ರಾಮರಾಜ್ಯದೆಡೆಗೆ’ ಎಂಬ ಪೇಜಾವರ ಶ್ರೀಗಳ ಆಶಯದಂತೆ ಕಾರ್ಯಕ್ರಮ
ದಲ್ಲಿ ಶಿಕ್ಷಣ, ಆರೋಗ್ಯ, ಗೋ ಸೇವೆ ಮುಂತಾದ ಕ್ಷೇತ್ರಕ್ಕೆ ಸಂಬಂಧಿಸಿ ದೊಡ್ಡ ಮಟ್ಟದ ಸಮಾಜ ಸೇವೆ ನಡೆಯಲಿದೆ. ವಿದ್ಯಾಪೀಠದ ಪ್ರಾಂಶುಪಾಲ ಡಾ| ಎಚ್‌. ಸತ್ಯನಾರಾಯಣ ಆಚಾರ್ಯ ಅವರು ‘ಅಯೋಧ್ಯಾ ಮಂಡಲೋತ್ಸವ’ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next