Advertisement
ರೈಲ್ವೇಯ 2ನೇ ಮೇಲ್ಸೇತುವೆ ಕಾಮಗಾರಿ ನಡೆಯಿತ್ತಿದ್ದು, ತಿಂಗಳ ಹಿಂದೆ ಇದರ ರಕ್ಷಣಾ ಗೋಡೆ ಕಾಮಗಾರಿ ನಡೆದಿದೆ. ಈ ಕಾಮಗಾರಿ ರಾಜ್ಯ ಹೆದ್ದಾರಿ 67ರ ಪಕ್ಕದಲ್ಲಿಯೇ ನಡೆದಿತ್ತು. ಈ ವರ್ಷದ ಮಹಾಮಳೆಗೆ ಈಗ ಬಿರುಕು ಕಂಡಿದೆ. ಇದರಿಂದ ಈಗ ಅದು ಒಡೆದು ಅದರ ಕಲ್ಲು, ಮಣ್ಣುಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ. ಹಳಿಗೆ ಕಟ್ಟಿದ ರಕ್ಷಣಾ ಗೋಡೆಯ ಕಲ್ಲು ಸುಮಾರು 20 ಅಡಿ ಎತ್ತರವಿದೆ. ಇದು ರಾಜ್ಯ ಹೆದ್ದಾರಿ 67ರ ಮೇಲೆ ಬೀಳುವ ಸ್ಥಿತಿಯಲ್ಲಿದೆ. ಇಲಾಖೆ ಅಪಾಯವನ್ನು ಅರಿತು ಶೀಘ್ರವಾಗಿ ಈ ಬಿರುಕನ್ನು ಸರಿಪಡಿಸುವ ಕಾರ್ಯ ಮಾಡಬೇಕಾಗಿದೆ. Advertisement
ಮರವೂರು: ರೈಲ್ವೇ ಮೇಲ್ಸೇತುವೆ, ರಕ್ಷಣಾಗೋಡೆಯಲ್ಲಿ ಬಿರುಕು
01:02 PM Jun 11, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.