Advertisement

ಮರವಂತೆ : ಅಲೆಗಳ ಹೊಡೆತಕ್ಕೆ ದೋಣಿ ಪಲ್ಟಿ , ನಾಲ್ಕು ಮಂದಿ ಮೀನುಗಾರರು ಪಾರು

05:23 PM Aug 26, 2020 | sudhir |

ಉಪ್ಪುಂದ: ಮರವಂತೆ ರಾ.ಹೆದ್ದಾರಿ 66ರ ಬಳಿಯ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿದ ಘಟನೆ ಬುಧುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಮಾರಸ್ವಾಮಿಯ ಗಂಗಾಧರೇಶ್ವರ ದೇವಸ್ಥಾನದ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಒಂಟಿದೋಣಿ (ಡಿಂಗಿ) ಅಲೆಗಳಿಗೆ ಸಿಲುಕಿದ ಪರಿಣಾಮ ದೋಣಿಯು ಮೀನುಗಾರರ ನಿಯಂತ್ರಣ ತಪ್ಪಿದ್ದು, ದೋಣಿಯಲ್ಲಿದ್ದ ನಾಲ್ವರು ಅದೃಷ್ಟವಶಾತ್‌ ಜೀವಾಪಾಯದಿಂದ ಪಾರಾದರು.

ಗಂಗೊಳ್ಳಿಯ ಗುಡ್ಡೆಕೇರಿ ಶ್ರೀನಿವಾಸ ಖಾರ್ವಿ ಅವರಿಗೆ ಸೇರಿದ ಆದಿ ಆಂಜನೇಯ ಹೆಸರಿನ ಎರಡು ಎಂಜಿನ್‌ಗಳ ದೋಣಿಯಲ್ಲಿ ಗಂಗೊಳ್ಳಿಯ ಸುಬ್ಬ ಖಾರ್ವಿ, ಮಗ ರಾಮ ಖಾರ್ವಿ, ಶೇಷ ಖಾರ್ವಿ ಅವರ ಮಗ ಶಂಕರ ಖಾರ್ವಿ, ನಾರಾಯಣ ಖಾರ್ವಿ ಅವರ ಮಗ ಕೃಷ್ಣ ಖಾರ್ವಿ ಮತ್ತು ಕುಂದಾಪುರ ಕೋಡಿಯ ಲಕ್ಷ್ಮಣ ಖಾರ್ವಿ ಅವರ ಮಗ ಸುಭಾಸ್‌ ಖಾರ್ವಿ ಎಂದಿನಂತೆ ಬಲೆಬಿಟ್ಟು ಮೀನು ಹಿಡಿಯುತ್ತಿದ್ದಾಗ ಏಕಾಏಕ್ಕಿ ಭಾರೀ ಗಾತ್ರದ ಅಲೆಯೊಂದು ಬಂದು ದೋಣಿಗೆ ಅಪ್ಪಳಿಸಿತ್ತು. ಅಲೆಗಳ ರಭಸಕ್ಕೆ ದೋಣಿ ಪಲ್ಟಿ ಹೊಡೆದು ಎರಡು ಚುರಾಯಿತು. ತಕ್ಷಣ ಮೀನುಗಾರರು ಈಜಿ ಹತ್ತಿರದ ದೋಣಿಗಳನ್ನು ಆಶ್ರಯಿಸಿದರಿಂದ ದುರಂತವೊಂದು ತಪ್ಪಿದೆ.

ದೋಣಿ ಸಂಪೂರ್ಣ ಒಡೆದು ಹೋಗಿದ್ದು , 10 ಅಶ್ವಶಕ್ತಿಯ ಎರಡು ಯಮಾಹ ಔಟ್‌ಬೋರ್ಡ್‌ ಎಂಜಿನ್‌ ಮತ್ತು ಬಲೆ ಸಮದ್ರ ಪಾಲಾಗಿದೆ. ಒಟ್ಟು ರೂ 10 ಲಕ್ಷ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ದಡಕ್ಕೆ ತೇಲಿಬಂದ ದೋಣಿಯ ಅವಶೇಷವನ್ನು ಮೇಲೆತ್ತಲಾಗಿದೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಎಸ್‌ಐ ಭೀಮಾಶಂಕರ ಎಸ್‌ ಮತ್ತು ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಘಟನ ಸ್ಥಳಕ್ಕೆ ನೂರಾರು ಸಾರ್ವಜನಿಕರು ಜಮಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next