ಮುಂಬೈ: ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯಿಂದ ಅನುಮತಿ ಪಡೆದಿದ್ದರೂ ಹಲವಾರು ಕಂಪನಿಗಳು ತಮ್ಮ ಐಪಿಒ(ಷೇರು ಮಾರಾಟ) ಯೋಜನೆಗಳನ್ನು ಜಾರಿಗೊಳಿಸಲು ಹಿಂದೇಟು ಹಾಕಲಾರಂಭಿಸಿವೆ. ಇದಕ್ಕೆ ಕಾರಣ ಎಲ್‌ಐಸಿ (ಭಾರತೀಯ ಜೀವವಿಮಾ ನಿಗಮ) ಐಪಿಒ!
ಹೌದು. ಸದ್ಯದಲ್ಲೇ ಎಲ್‌ಐಸಿ ಷೇರುಗಳ ಮಾರಾಟ ಆರಂಭವಾಗಲಿದ್ದು, 10 ಶತಕೋಟಿ ಡಾಲರ್ ಮೊತ್ತ ಸಂಗ್ರಹವಾಗುವ ನಿರೀಕ್ಷೆಯಿದೆ. ಎಲ್‌ಐಸಿ ಐಪಿಒ ಜೊತೆ ಕ್ಲ್ಯಾಶ್ ಆಗುವುದು ಬೇಡ ಎಂಬ ಉದ್ದೇಶದಿಂದ ಹಲವು ಕಂಪನಿಗಳು ತಮ್ಮ ಐಪಿಒಗಳನ್ನು ವಿಳಂಬ ಮಾಡುತ್ತಿವೆ ಎಂದು ಹೇಳಲಾಗಿದೆ.
ಎಲ್‌ಐಸಿಯ ಬೃಹತ್ ಷೇರು ಮಾರಾಟವು ಮುಗಿದ ಕೂಡಲೇ ತಮ್ಮ ಷೇರುಗಳನ್ನು ಮಾರಾಟಕ್ಕಿಡಲು ಹಲವು ಕಂಪನಿಗಳು ಕಾಯುತ್ತಿವೆ. ಎಲ್‌ಐಸಿ ಆಫರ್ ಓಪನ್ ಆಗುವ 10 ದಿನಗಳ ಮುಂಚೆ ಮತ್ತು ಅದು ಮುಗಿದ 15 ದಿನಗಳವರೆಗೆ ಯಾವುದೇ ಇತರೆ ಐಪಿಒಗಳನ್ನು ಮಾರುಕಟ್ಟೆಗೆ ಬಿಡದೇ ಇರಲು ನಿರ್ಧರಿಸಲಾಗಿದೆ ಎಂದು ಮರ್ಚೆಂಟ್ ಬ್ಯಾಂಕರ್‌ಗಳು ಹೇಳಿದ್ದಾರೆ.
ಇದನ್ನೂ ಓದಿ:5.550 ಜನಸಂಖ್ಯೆ ಇರುವ ಈ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ಮಶಾನವೇ ಇಲ್ಲ !.
ಗ್ಲೋಬಲ್ ಹೆಲ್ತ್, ಕೆವೆಂಟರ್ ಆಗ್ರೋ, ಎಂಕ್ಯೂರ್ ಫಾರ್ಮಾ, ಸ್ಟಲೈಟ್ ಪವರ್, ವಿಎಲ್‌ಸಿಸಿ, ಒನ್ ಮೊಬಿಕ್ವಿಕ್, ಗೋ ಏರ್‌ಲೈನ್ಸ್ ಇತ್ಯಾದಿ ಕಂಪನಿಗಳ ಐಪಿಒಗಳಿಗೆ ಸೆಬಿಯ ಒಪ್ಪಿಗೆ ಈಗಾಗಲೇ ದೊರೆತಿವೆ.