Advertisement

ಹಾಕಿ: ಮನ್‌ಪ್ರೀತ್‌ ಸಾಹಸ  ಭಾರತಕ್ಕೆ ರೋಚಕ ಜಯ

02:26 PM Aug 15, 2017 | Team Udayavani |

ಹೊಸದಿಲ್ಲಿ: ಮನ್‌ಪ್ರೀತ್‌ ಸಿಂಗ್‌ ದಾಖಲಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತೀಯ ಪುರುಷರ ಹಾಕಿ ತಂಡ ಹಾಲೆಂಡ್‌ ವಿರುದ್ಧ ನಡೆದ ರೊಬೊ ಸೂಪರ್‌ ಸೀರೀಸ್‌ ಹಾಕಿ ಪಂದ್ಯದಲ್ಲಿ 4-3 ಗೋಲು ಅಂತರದ ಗೆಲುವು ಸಾಧಿಸಿದೆ.

Advertisement

ವಿಶ್ವದ ನಾಲ್ಕನೇ ಶ್ರೇಯಾಂಕಿತ ಹಾಲೆಂಡ್‌ ತಂಡವನ್ನು ಭಾರತ ಮಣಿಸಿತು ಎನ್ನುವುದು ವಿಶೇಷ. ಕಳೆದ ವಾರವಷ್ಟೇ ಬಲಿಷ್ಠ ಜರ್ಮನಿ ತಂಡವನ್ನು 7-1 ಗೋಲುಗಳ ಅಂತರದಿಂದ ಹಾಲೆಂಡ್‌ ಮಣಿಸಿತ್ತು. ಭಾರತದ ವಿರುದ್ಧವೂ ಭಾರೀ ಹೋರಾಟ ಪ್ರದರ್ಶಿಸುವ ಸೂಚನೆಯನ್ನು ಹಾಲೆಂಡ್‌ ನೀಡಿತ್ತು. ಆದರೆ ಮನ್‌ಪ್ರೀತ್‌ (30 ಹಾಗೂ 44ನೇ ನಿಮಿಷ), ವರುಣ್‌ ಕುಮಾರ್‌ (17 ನೇ ನಿಮಿಷ) ಹಾಗೂ ಹರ್ಜೀತ್‌ ಸಿಂಗ್‌ (49ನೇ ನಿಮಿಷ) ಗೋಲು ಗಳಿಸಿದ್ದರಿಂದ ಭಾರತ ಗೆಲುವು ಗಳಿಸಿತು.

ಆರಂಭದಲ್ಲಿ ಹಾಲೆಂಡ್‌ 1-0 ಅಂತರದ ಮುನ್ನಡೆ ಪಡೆದಿತ್ತು. ಆದರೆ 17ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಭಾರತ 1-1 ಗೋಲುಗಳಿಂದ ಸಮಬಲ ಸಾಧಿಸಿತು. 30ನೇ ನಿಮಿಷದಲ್ಲಿ ಮನ್‌ಪ್ರೀತ್‌ ಗೋಲು ದಾಖಲಿಸಿದ್ದರಿಂದ ಭಾರತ ಗೋಲಿನ ಗಳಿಕೆಯನ್ನು 2-1ಗೆ ಹೆಚ್ಚಿಸಿ ಕೊಂಡಿತು. ಅಂತಿಮ ಅವಧಿಯ ಆಟದ ವೇಳೆ ಭಾರತ ಗೋಲಿನ ಸಂಖ್ಯೆಯನ್ನು 3-1ಕ್ಕೆ ಹೆಚ್ಚಿಸಿಕೊಂಡ ಬಳಿಕ  ಹಾಲೆಂಡ್‌ ಕೂಡ ಗೋಲು ದಾಖಲಿಸಿತು. ಗೋಲಿನ ಅಂತರವನ್ನು 3-2ಕ್ಕೆ ಏರಿಸಿಕೊಂಡಿತು. ಕೊನೆಯಲ್ಲಿ ಭಾರತ ಮತ್ತೂಂದು ಗೋಲು ದಾಖಲಿಸಿ 4-2 ಮುನ್ನಡೆ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next