Advertisement
ಸದನದೊಳಗೆ ಕ್ಯಾನಿಸ್ಟರ್ ಮೂಲಕ ಹೊಗೆ ಬಾಂಬ್ ಸಿಡಿಸುವ ಯೋಜನೆ ಮೈಸೂರಿನ ಮನೋ ರಂಜನ್‌ನದ್ದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂಸತ್ತಿನಲ್ಲಿ ಕೋಲಾಹಲ ಉಂಟುಮಾಡಲೆಂದೇ ಆರೋಪಿಗಳಾದ ಮನೋರಂಜನ್ ಮತ್ತು ಸಾಗರ್ ಶರ್ಮಾ ತಮಗೆ ಬೇಕಾದಂತಹ “ವಿಶೇಷ ಶೂ”ಗಳನ್ನು ಮಾಡಿಸಿಕೊಂಡಿದ್ದರು.
Related Articles
Advertisement
ಹಿಂದೆಯೂ 40 ಬಾರಿ ಭದ್ರತ ವೈಫಲ್ಯ: ಅಮಿತ್ ಶಾ
“ಸಂಸತ್ತಿನಲ್ಲಿ ಈ ಹಿಂದೆ ಸುಮಾರು 40 ಬಾರಿ ಭದ್ರತ ಉಲ್ಲಂಘನೆ ಗಳಾಗಿವೆ. ಸದನದೊಳಗೆ ಗನ್ ತಂದ ಘಟನೆಗಳೂ ನಡೆದಿವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಭದ್ರತ ವೈಫಲ್ಯ ವಿಚಾರ
ವನ್ನೆತ್ತಿಕೊಂಡು ವಿಪಕ್ಷಗಳು ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿರು ವಂತೆಯೇ ಶಾ ಈ ಹೇಳಿಕೆ ನೀಡಿದ್ದಾರೆ. ಕಾಗದ ಎಸೆದದ್ದು, ಪಿಸ್ತೂಲ್ ತಂದದ್ದು, ಘೋಷಣೆ ಕೂಗಿದ್ದು, ಸಂಸದರ ಆಸನದತ್ತ ಜಿಗಿದದ್ದು ಸೇರಿದಂತೆ ಈವರೆಗೆ ಸರಿಸುಮಾರು 40ರಷ್ಟು ಇಂತಹ ಘಟನೆಗಳು ನಡೆದಿವೆ. ಆಯಾ ಸ್ಪೀಕರ್‌ಗಳು ಅದಕ್ಕೆ ಸಂಬಂಧಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶಾ ವಿವರಿಸಿದ್ದಾರೆ.
ಎಡ ಕಾಲಿಗೆ ಧರಿಸುವ ಶೂಗಳ ಸೋಲ್‌ಗಳಲ್ಲಿ ಕೆತ್ತಿಸಲಾದ ಕುಳಿಯ ಒಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಇರಿಸಿಕೊಂಡು ಸದನದೊಳಕ್ಕೆ ಬಂದಿದ್ದರು. ನ್ಪೋರ್ಟ್ಸ್ ಶೂಗಳ ಒಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳಿರುವುದು ಸಹಜವಾಗಿಯೇ ಯಾರ ಗಮನಕ್ಕೂ ಬಂದಿಲ್ಲ. ಅಲ್ಲದೆ ಭದ್ರತ ತಪಾಸಣೆ ವೇಳೆ ಬೂಟುಗಳನ್ನು ಪರಿಶೀಲಿಸುವುದಿಲ್ಲ ಎಂಬುದನ್ನು ಆರೋಪಿಗಳು ದೃಢಪಡಿಸಿಕೊಂಡೇ ಈ ಸಂಚು ಹೂಡಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಸದ್ಯದಲ್ಲೇ ಆರೋಪಿಗಳನ್ನು ಲಕ್ನೋಗೆ ಕರೆದೊಯ್ದು, ಶೂಗಳನ್ನು ಸಿದ್ಧಪಡಿಸಿಕೊಟ್ಟ ಚಮ್ಮಾರನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
7 ದಿನ ವಶಕ್ಕೆಈ ನಡುವೆ ಗುರುವಾರ ರಾತ್ರಿ ಶರಣಾದ ಪ್ರಕರಣದ ಸೂತ್ರಧಾರ ಲಲಿತ್ ಝಾನನ್ನು ಶುಕ್ರವಾರ ಪೊಲೀಸರು ದಿಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ವಿಚಾರಣೆಗೆ ಒಳಪಡಿಸಿ ಪ್ರಕರಣದ ಇಡೀ ಸಂಚನ್ನು ಬಯಲು ಮಾಡಲು ಆತನನ್ನು 15 ದಿನ ವಶಕ್ಕೆ ನೀಡಿ ಎಂದು ಪೊಲೀಸರು ಅರಿಕೆ ಮಾಡಿಕೊಂಡಿದ್ದು, ನ್ಯಾಯಾಲಯವು ಆರೋಪಿಯನ್ನು 7 ದಿನಗಳ ಪೊಲೀಸ್ ವಶಕ್ಕೊಪ್ಪಿಸಿ ಆದೇಶ ನೀಡಿದೆ. ಮನೋರಂಜನ್ ಕೊಠಡಿಗೆ ಬೀಗ ಮೈಸೂರಿನ ಮನೋರಂಜನ್ ಮನೆಗೆ ಕೇಂದ್ರ ಗುಪ್ತಚರ ಅಧಿಕಾರಿಗಳು ಶುಕ್ರವಾರವೂ ಭೇಟಿ ನೀಡಿ ಆತನ ಕೋಣೆಗೆ ಬೀಗಮುದ್ರೆ ಹಾಕಿದ್ದಾರೆ. ಕೊಠಡಿ ಯಲ್ಲಿ ಸಾಕ್ಷ್ಯಾಧಾರ ಕಲೆ ಹಾಕಿದ್ದು, ಬಳಿಕ ಕೋಣೆಯನ್ನು ಸೀಜ್ ಮಾಡಿದ್ದಾರೆ. ಮತ್ತೂಮ್ಮೆ ಬಂದು ಪರಿಶೀಲನೆ ನಡೆಸುವವರೆಗೂ ಕೊಠಡಿಯ ಬಾಗಿಲು ತೆಗೆಯದಂತೆ ಕುಟುಂಬ ಸದಸ್ಯರಿಗೆ ತಾಕೀತು ಮಾಡಿದ್ದಾರೆ. ಆತನ ಹಣದ ಮೂಲದ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.