Advertisement
ಚುನಾವಣೆ ನಡೆಯಲಿರುವ ರಾಜ್ಯದಲ್ಲಿ 2021ರ ಡಿಸೆಂಬರ್‌ನಲ್ಲಿಯೂ ಕೂಡ ಹಿಂಸಾಚಾರದಲ್ಲಿ ತೌಬಾಲ್ ಜಿಲ್ಲೆಯಲ್ಲಿ ವಿದ್ಯಾರ್ಥಿಯನ್ನು ಗುಂಡು ಹಾರಿಸಿ ಕೊಲ್ಲಲಾ ಗಿತ್ತು. ಕಳೆದ ತಿಂಗಳ ಎರಡನೇ ವಾರ ನಡೆದಿದ್ದ ಮತ್ತೂಂದು ಘಟನೆಯಲ್ಲಿ ಸಮುರೋ ಎಂಬಲ್ಲಿ ಮಣಿಪುರ ಕೃಷಿ ಸಚಿವ ಒ.ಲುಖೋಯ್ ಸಿಂಗ್ ಅವರ ಆಪ್ತ ಸೇರಿದಂತೆ ಇಬ್ಬರನ್ನು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಯಾರಿದ್ದಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಅದೇನೇ ಇರಲಿ ಮಣಿಪುರದಲ್ಲಿ ಹಿಂಸೆಯ ಶೈಲಿ ಬದಲಾ ಗಿದೆಯಷ್ಟೇ. ಹಿಂದಿನ ಸಂದರ್ಭಗಳಲ್ಲಿ ರಾಜ್ಯದಲ್ಲಿ ಚಟುವಟಿಕೆಯಲ್ಲಿ ಇದ್ದ ನಿಷೇಧಿತ ಸಂಘಟನೆಗಳು ನೇರ ವಾಗಿಯೇ ಸಾರ್ವಜನಿಕರು ಚುನಾವಣೆಯಲ್ಲಿ ಪಾಲ್ಗೊಳ್ಳಬಾರದು ಎಂಬ ಕಾರಣಕ್ಕಾಗಿ ಗುಂಡು ಹಾರಿಸುವುದೋ ಅಭ್ಯರ್ಥಿಗಳ ಅಪಹರಣ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹೇರುವುದು ಮತ್ತಿತರ ಕೃತ್ಯಗಳನ್ನು ನಡೆಸುತ್ತಿದ್ದರು. ಈಗ ಅದರ ಬದಲಾಗಿ ಟಿಕೆಟ್ ಸಿಗದ ಕೋಪಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಮಣಿಪುರದಲ್ಲಿ 2017ರಿಂದ 2022 ಅವಧಿಯಲ್ಲಿ ಪಕ್ಷಾಂತರ ಗೊಂಡವರ ಸಂಖ್ಯೆಯೇ ಹೆಚ್ಚು. ಹೀಗಾಗಿ ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವ ಕುದುರೆಯೇ ಪ್ರಧಾನವೇ ಹೊರತು, ಇನ್ನು ಯಾವ ಅಂಶ ಗಳೂ ಪರಿಗಣನೆಗೆ ಬರುವುದಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಚುನಾವಣೆ ಅತ್ಯಂತ ತುರುಸಿನದ್ದು ಮತ್ತು ಕುತೂಹಲಕಾರಿಯಾಗಿ ಪರಿಣಮಿಸಿದೆ. ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಒಕ್ರಂ ಇಬೋಬಿ ಸಿಂಗ್ ರವಿವಾರ ಮಾಡಿರುವ ಹೊಸ ಆರೋಪದಂತೆ ರಾಜ್ಯದಲ್ಲಿನ ಪ್ರತ್ಯೇಕತವಾದಿ ಸಂಘಟನೆಗಳು ಮತ್ತು ಬಿಜೆಪಿ ನಡುವೆ ನಿಕಟ ಸಂಬಂಧವಿದೆ. ಹೀಗಾಗಿಯೇ 2017ರಲ್ಲಿ 28 ಸ್ಥಾನ ಗೆದ್ದರೂ, ಆ ಪಕ್ಷ ಅಧಿಕಾರ ನಡೆಸುವಂತಾಯಿತು ಎಂದು ದೂರಿದ್ದಾರೆ. ಕೆಲವು ದಿನಗಳ ಅಂತರದಲ್ಲಿ ನಡೆದ ಹಿಂಸಾ ಘಟನೆಗಳು ಮತ್ತು ಮಾಜಿ ಮುಖ್ಯಮಂತ್ರಿಗಳ ಈ ಆರೋಪ ಎರಡು ಹಂತಗಳಲ್ಲಿ ನಡೆಯಲಿರುವ ಚುನಾ ವಣೆಯಲ್ಲಿ ಮತ ವಿಭಜಿಸಲು ಕಾರಣವಾಗುತ್ತದೆಯೋ ಗೊತ್ತಿಲ್ಲ. ಪ್ರಸಕ್ತ ಸಾಲಿನ ಮಣಿಪುರ ಚುನಾವಣೆಯಲ್ಲಿನ ವಿಶೇಷವೆಂದರೆ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷ ಜೆಡಿಯು, ಶಿವಸೇನೆ ಮೈತ್ರಿಕೂಟ ಮಾಡಿಕೊಂಡಿವೆ. ಈ ಪೈಕಿ, ಎನ್‌ಪಿಪಿಗೆ ಮಾತ್ರ ರಾಜ್ಯದಲ್ಲಿ ಕೊಂಚ ಬಲ ಉಂಟು. ಉಳಿದ ಎರಡು ಪಕ್ಷಗಳು ನೆಪಮಾತ್ರಕ್ಕೆ ಸ್ಪರ್ಧೆ ಮಾಡಿವೆ. ಹಾಗೆಂದು ಟಿಕೆಟ್ ಸಿಗದ ಕೆಲವು ಮುಖಂಡರು ಜೆಡಿಯು, ಶಿವೇನೆಯತ್ತ ಮುಖ ಮಾಡಿದ್ದಾರೆ.