Advertisement

ಕೆನಡಾ ಡಾಲ್‌ಹೌಸಿ ವಿ.ವಿ.-ಮಣಿಪಾಲ ವಿ.ವಿ. ಒಪ್ಪಂದ

12:29 AM Sep 29, 2021 | Team Udayavani |

ಉಡುಪಿ: ಮಣಿಪಾಲದ ಮಾಹೆ ಮತ್ತು ಕೆನಡಾದ ಡಾಲ್‌ಹೌಸಿ ವಿಶ್ವವಿದ್ಯಾನಿಲಯಗಳು ಭಾರತ ಮತ್ತು ಕೆನಡಾ ನಡುವೆ ಶೈಕ್ಷಣಿಕ ಮತ್ತು ಸಂಶೋ ಧನ ಆಕಾಂಕ್ಷೆ ಗಳನ್ನು ವಿಸ್ತರಿಸಲು ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಮಾಡಿಕೊಂಡಿವೆ.

Advertisement

ಈ ಒಪ್ಪಂದದಂತೆ ಕ್ಯಾನ್ಸರ್‌ ಇಮ್ಯುನೋಥೆರಪಿಯ ಬಗ್ಗೆ ಯೋಜಿತ ಸರಣಿಯ ಆನ್‌ಲೈನ್‌ ಸಹಯೋಗ ಸಂಶೋಧನ ಕಾರ್ಯಾಗಾರಗಳು ನಡೆದವು. ಇದರಲ್ಲಿ 2 ಪ್ರಮುಖ ಸಂಸ್ಥೆಗಳ ಸಂಶೋಧಕರು ತಮ್ಮ ಸಂಶೋಧನೆ ಮತ್ತು ಪರಿಣತಿಯ ಕ್ಷೇತ್ರಗಳಿಗೆ ಸಂಬಂಧಿಸಿ ಚರ್ಚೆಗಳನ್ನು ನಡೆಸಿದರು.

ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್‌ ಇಮ್ಯುನೋಥೆರಪಿ ಗಮನಾರ್ಹ ಪ್ರಗತಿ ಸಾಧಿ ಸಿದೆ. ವಿಶ್ವದಾದ್ಯಂತದ ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಅದರ ಪ್ರಯೋಜನ ಗಳನ್ನು ತರಲು ನಿರ್ಣಾಯಕ ಕೆಲಸಗಳು ನಡೆಯುತ್ತಿವೆ. ಎರಡೂ ಸಂಸ್ಥೆಗಳಲ್ಲಿ ಜಂಟಿ ಸಂಶೋಧನೆ ಮತ್ತು ಪ್ರಗತಿಗೆ ಹೆಚ್ಚಿನ ಅವಕಾಶ ತೆರೆದುಕೊಂಡಿದೆ.

ಇದನ್ನೂ ಓದಿ:ಹೈದರಾಬಾದ್‌ಗೆ ಬೇಡವಾದ ವಾರ್ನರ್‌

ಔಷಧ ಪತ್ತೆ ಮತ್ತು ವಿತರಣೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ವೈಯಕ್ತಿಕ ಔಷಧ, ಸಾಂಕ್ರಾಮಿಕ ರೋಗಗಳು, ಹವಾಮಾನ ಬದಲಾವಣೆ, ಶಕ್ತಿ, ಕೃತಕ ಬುದ್ಧಿಮತ್ತೆ ಮೊದಲಾದವುಗಳ ಬಗ್ಗೆ ಜಂಟಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಾಹೆ ವಿಶ್ವವಿದ್ಯಾನಿಲಯ ಮತ್ತು ಡಾಲ್‌ಹೌಸಿ ವಿಶ್ವವಿದ್ಯಾನಿಲಯ ವಿವಿಧ ವಿಭಾಗಗಳಲ್ಲಿ ಪಾಲುದಾರಿಕೆಯನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ.
ಈ ಒಪ್ಪಂದದಿಂದ ಸಂಶೋಧನೆ, ಸಂವಾದ ಮತ್ತು ವಿನಿಮಯದ ಮೂಲಕ ಬೌದ್ಧಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಉಭಯ ವಿ.ವಿ.ಗಳು ಸಾಕ್ಷಿಯಾಗಲಿವೆ ಎಂದು ಶಾಸ್ತ್ರಿ ಇಂಡೋ ಕೆನಡಿಯನ್‌ ಸಂಸ್ಥೆಯ ನಿರ್ದೇಶಕ ಡಾ| ಪ್ರಾಚಿ ಕೌಲ್‌ ತಿಳಿಸಿದರು.

Advertisement

ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮತ್ತು ಡಾಲ್‌ಹೌಸಿ ವಿ.ವಿ. ಉಪಾಧ್ಯಕ್ಷ ಮ್ಯಾಟ್‌ ಹೆಬ್‌ ಅವರು ಒಪ್ಪಂದಕ್ಕೆ ಸಹಿ ಮಾಡಿದರು. ಡಾಲ್‌ಹೌಸಿಯಲ್ಲಿರುವ ಗ್ಲೋಬಲ್‌ ರಿಲೇಶನ್ಸ್‌ ಸಹ ಉಪಾಧ್ಯಕ್ಷ ಡಾ| ಬಾಲಕೃಷ್ಣನ್‌ ಪೃಥ್ವಿರಾಜ್‌ ಸ್ವಾಗತಿಸಿ ಮಾಹೆ ವಿ.ವಿ. ಅಂತಾರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ| ರಘು ರಾಧಾಕೃಷ್ಣನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next