ಮಣಿಪಾಲ: ಉಡುಪಿಯಲ್ಲಿ ಶನಿವಾರ ಸಂಜೆ ಧೀಡಿರ್ ಮಳೆ ಬಂದಿದ್ದು, ಈ ವೇಳೆ ಮಲ್ಪೆ– ಮಣಿಪಾಲ ರಸ್ತೆಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ಕಾಮಗಾರಿಯಿಂದಾಗಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಯಿತು.
ಈ ನಡುವೆ ಮಹಿಳೆಯೋರ್ವರು ನೀರು ತುಂಬಿದ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಲು ಪರದಾಡುತ್ತಿದ್ದಾಗ ಕರ್ತವ್ಯದಲ್ಲಿದ ಮಣಿಪಾಲ ಠಾಣೆಯ ಕಾನ್ ಸ್ಟೇಬಲ್ ಗಳಿಬ್ಬರು ಕೂಡಲೇ ಅವರ ನೆರವಿಗೆ ಧಾವಿಸಿ ಮಹಿಳೆಗೆ ಸಹಾಯ ಹಸ್ತ ಚಾಚಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರು ಕಳೆದ 18 ದಿನಗಳಿಂದ ಕನಿಷ್ಠ 7-8 ಜನ ಪೊಲೀಸ್ ಸಿಬಂದಿ ಹಗಲು ರಾತ್ರಿ ಎನ್ನದೆ ಧೂಳಿನಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ನಡೆಯುವಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದಾರೆ. ಕೆಲವೊಮ್ಮೆ ಸಾರ್ವಜನಿಕರು ಕೂಡ ಟ್ರಾಫಿಕ್ ಜಾಮ್ ಆದಾಗ ಮೊದಲು ಬೈಯ್ಯುವುದು ಪೊಲೀಸರನ್ನು. ಆದರೆ ಯಾವುದೇ ಸಂಯಮ ಕಳೆದುಕೊಳ್ಳದೆ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಮಣಿಪಾಲ ಠಾಣೆಯ ಸಿಬಂದಿಗಳ ಕಾರ್ಯ; ಸಾರ್ವಜನಿಕರಿಂದ ಪ್ರಶಂಸೆ
ಎನ್ಎಚ್ 169(ಎ) ರಸ್ತೆ ಕಾಮಗಾರಿ ಸಮಯ ಸಂಚಾರ ನಿರ್ವಹಣೆಗಾಗಿ ಸಾರ್ವಜನಿಕರಿಗೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವಾಗ ಧೀಡಿರ್ ಮಳೆ ಬಂದು ರಸ್ತೆಯ ತಗ್ಗು ಪ್ರದೇಶದಲ್ಲಿ ನೀರು ತುಂಬಿದಾಗ ದ್ವಿ ಚಕ್ರ ಸವಾರರ ಸಹಾಯಕ್ಕೆ ನಿಂತ ಮಣಿಪಾಲ ಪೊಲೀಸರು.
ಸಾರ್ವಜನಿಕರಿಗಾಗಿ ರಸ್ತೆಯಲ್ಲಿ ಧೂಳು ಕುಡಿಯುತ್ತ, ಮಳೆಯಲಿ ಬಿಸಿಲಲ್ಲಿ ಪೊಲೀಸರು ಕರ್ತವ್ಯ ಮಾಡಿದರು ನಮಗೆ ಟ್ರಾಫಿಕ್ ಸಮಸ್ಯೆ ಅರ್ಥ ಮಾಡಿಕೊಂಡು ರಸ್ತೆ ಕಾಮಗಾರಿ ಮುಗಿಯುವರೆಗೂ ಸಹಕರಿಸಬೇಕು ಎಂಬ ಗುಣ ಕೆಲವರಿಗೆ ಇಲ್ಲ… ಆದರೇ ಬಹುಪಾಲು ಜನರು ಸಹನಭೂತಿ, ತಾಳ್ಮೆ ಯಿಂದ ಪೊಲೀಸ್ ರಿಗೆ ಸಹಕಾರ ನೀಡುವುದರ ಮೂಲಕ ಉಡುಪಿ ಮಣಿಪಾಲ ಜನತೆ ಬುದ್ದಿವಂತರು ಎನ್ನುವುದು ಸಾಬೀತು ಪಡಿಸಿದ್ದಾರೆ.