Advertisement
ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನವರು ಓಟದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು, ಉದ್ಯೋಗಿಗಳು, ಅಧಿಕಾರಿಗಳು ಎಲ್ಲರೂ ಓಟದಲ್ಲಿದ್ದರು. ಮಣಿಪಾಲ ವಿವಿ ಜೊತೆಗೆ ಸಿಂಡಿಕೇಟ್ ಬ್ಯಾಂಕ್, ಅದಾನಿ ಯುಪಿಸಿಎಲ್ ಪ್ರಾಯೋಜಕತ್ವವನ್ನು ನೀಡಿತ್ತು. ಮಣಿಪಾಲದ ಕೆಎಂಸಿ ಗ್ರೀನ್ಸ್‌ನಿಂದ ಬೆಳ್ಳಂಬೆಳಗ್ಗೆ ಓಟ ಪ್ರಾರಂಭಗೊಂಡು ಅಲ್ಲಿಯೇ ಸಮಾಪನಗೊಂಡಿತು. ಕಾರ್ಯಕ್ರಮವು ಶಿಸ್ತುಬದ್ಧವಾಗಿ ನಡೆಯಿತು. ಓಟದ ಬಳಿಕ ಎಲ್ಲರಿಗೂ ರಿಲ್ಯಾಕ್ಸ್ ಆಗಲು ಮ್ಯೂಸಿಕ್ ಹಾಕಲಾಗಿದ್ದು, ವಿದ್ಯಾರ್ಥಿಗಳು, ಮಕ್ಕಳ ಜೊತೆ ಹಿರಿಯರೂ ಕುಣಿದಾಡಿದರು. ಬಳಿಕ ಗಣ್ಯರ ಉಪಸ್ಥಿತಿಯಲ್ಲಿ ಮಣಿಪಾಲ ಗ್ರೀನ್ಸ್‌ನಲ್ಲಿ ವಿಜೇತ ಓಟಗಾರರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಮೂಡಬಿದಿರೆಯ ಆಳ್ವಾಸ್‌ನವರು ಹೆಚ್ಚಿನ ಬಹುಮಾನವನ್ನು ಪಡೆದುಕೊಂಡರು.
(21 ಕಿ.ಮೀ.) ಓಟಗಾರರು ಮಣಿಪಾಲ ಕೆಎಂಸಿ ಗ್ರೀನ್ಸ್, ಕಂಟ್ರಿ ಇನ್ ಆ್ಯಂಡ್ ಸೂಟ್ಸ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಮತ್ತೆ ತಿರುಗಿ ಕಂಟ್ರಿ ಇನ್ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ ಪೆರಂಪಳ್ಳಿ ರಸ್ತೆ, ವೈನ್ ಆ್ಯಂಡ್ ಸ್ಪಿರಿಟ್, ಲೇಡಿ ಆಫ್ ಫಾತಿಮಾ ಚರ್ಚ್, ಅಂಬಾಗಿಲು ಕಲ್ಸಂಕ ರಸ್ತೆ, ಯೂಟರ್ನ್ ಆಗಿ ಮತ್ತೆ ಪೆರಂಪಳ್ಳಿ ಮಾರ್ಗವಾಗಿ ಕಂಟ್ರಿ ಇನ್ ಸರ್ಕಲ್ ಮೂಲಕ ಕೆಎಂಸಿ ಗ್ರೀನ್ಸ್‌ಗೆ ಬಂದರು. 10 ಕಿ.ಮೀ. ಓಟದವರು ಮಣಿಪಾಲ ಕೆಎಂಸಿ ಗ್ರೀನ್ಸ್, ಕಂಟ್ರಿ ಇನ್ ಆ್ಯಂಡ್ ಸೂಟ್ಸ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಮತ್ತೆ ತಿರುಗಿ ಕಂಟ್ರಿ ಇನ್ ಸರ್ಕಲ್‌ಗೆ ಬಂದು ಎಡಕ್ಕೆ ತಿರುಗಿ ಪೆರಂಪಳ್ಳಿ ರಸ್ತೆ, ಲೇಡಿ ಆಫ್ ಫಾತಿಮಾ ಚರ್ಚ್ ಮುಂದೆ ಹೋಗಿ ಯೂಟರ್ನ್ ಆಗಿ ಮತ್ತೆ ಕಂಟ್ರಿ ಇನ್ ಸರ್ಕಲ್ ಮೂಲಕ ಕೆಎಂಸಿ ಗ್ರೀನ್ಸ್‌ಗೆ ಸಾಗಿ ಬಂದರು. 5 ಕಿ.ಮೀ. ಓಟದವರು ಮಣಿಪಾಲ ವಿ.ವಿ., ಕಂಟ್ರಿ ಇನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಅನ್ನು ಹಾದು ಸೋನಿಯಾ ಕ್ಲಿನಿಕ್‌ನಿಂದ ಅನಂತ ನಗರದ ಬಳಿಕ ಎಡಕ್ಕೆ ತಿರುಗಿ ಪ್ರಸನ್ನ ಗಣಪತಿ ದೇವಸ್ಥಾನದ ಅನಂತರ ಎಡಕ್ಕೆ ತಿರುಗಿ ದಶರಥನಗರ, ಹೊಟೇಲ್ ಸಿಗ್ಮಾ, ಎಂಜೆಸಿ, ಮಾಧವಕೃಪಾ ಶಾಲೆ, ಉಡುಪಿ ಮಣಿಪಾಲ ಮುಖ್ಯರಸ್ತೆ ಹಾದು ಮಣಿಪಾಲ ವಿ.ವಿ. ಎದುರು ಬಂದರು. 3 ಕಿ.ಮೀ. ಓಟದವರು ಮಣಿಪಾಲ ವಿ.ವಿ., ಕಂಟ್ರಿ ಇನ್ ಸರ್ಕಲ್, ಸಿಂಡಿಕೇಟ್ ಸರ್ಕಲ್‌ನ ಎಡಕ್ಕೆ ತಿರುಗಿ ಉಡುಪಿ ಮಣಿಪಾಲ ಮುಖ್ಯರಸ್ತೆಯ ಮೂಲಕ ಮಣಿಪಾಲ ವಿ.ವಿ. ಎದುರು ಬಂದು ಓಟವನ್ನು ಮುಗಿಸಿದರು.