Advertisement

Manipal Hospitals; ರಂಗಮಂಚ್- ಜೀವನದ ಸುವರ್ಣ ವರ್ಷಗಳನ್ನು ಆಚರಿಸುವ ಸಾಂಸ್ಕೃತಿಕ ಸಂಜೆ

09:21 PM Jul 09, 2024 | Team Udayavani |

ಮಲ್ಲೇಶ್ವರಂ: ಮಲ್ಲೇಶ್ವರಂನ ಮಣಿಪಾಲ ಆಸ್ಪತ್ರೆಯು, ಮಣಿಪಾಲ ವೃದ್ದರ ಮೈತ್ರಿ ಬ್ಯಾನರ್ ಅಡಿಯಲ್ಲಿ, ದಿ ಸೀನಿಯರ್ ಸೆಂಟ್ರಲ್ ಸಹಯೋಗದೊಂದಿಗೆ “ರಂಗಮಂಚ್” ಎನ್ನುವ ಒಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಹಿರಿಯರಿಗೆ ಅವರ ವೃದ್ಧಾಪ್ಯದಲ್ಲಿ ಜೀವನದ ಸಂತೋಷವನ್ನು ಸಂಭ್ರಮಿಸಲು ಮತ್ತು ಅವರ ನೋವು ಅಥವಾ ಆರೋಗ್ಯ ಸಮಸ್ಯೆಗಳ ಬಗ್ಗೆ ಚಿಂತಿಸದೆ ಸಂಭ್ರಮಿಸಿಲು ಪ್ರೋತ್ಸಾಹಿಸಿತು.

Advertisement

ಮಣಿಪಾಲ ವೃದ್ದರ ಮೈತ್ರಿಯು ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಸುಧಾರಿಸಲು ಹಿರಿಯರ ಆರೈಕೆ ಕಾರ್ಯಕ್ರಮವನ್ನು ಆರಂಭಿಸಿದೆ. ಕಾರ್ಯಕ್ರಮದಲ್ಲಿ ನೆರೆಹೊರೆಯ ಸುಮಾರು 200 ಹಿರಿಯ ನಿವಾಸಿಗಳು ಸೇರಿದರು.  ಸಂಗೀತ, ನೃತ್ಯ ಮತ್ತು ಫ್ಯಾಷನ್ ಶೋನಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಈ ಸಮಾರಂಭದಲ್ಲಿ ನಟಿ ಧನ್ಯಾ ರಾಮ್ ಕುಮಾರ್ ಭಾಗವಹಿಸಿದ್ದರು. ಡಾ. ನಿರಂಜನ್ ರೈ, ಆಸ್ಪತ್ರೆ ನಿರ್ದೇಶಕ, ಮಣಿಪಾಲ್ ಆಸ್ಪತ್ರೆ ಮಲ್ಲೇಶ್ವರ, ಡಾ. ಭಾವನಾ ಬದರಿನಾರಾಯಣ್, ರೀಜನಲ್ ಹೆಡ್ – ಮಾರ್ಕೆಟಿಂಗ್, ಮಣಿಪಾಲ್ ಆಸ್ಪತ್ರೆಗಳು ಉಪಸ್ಥಿತರಿದ್ದರು

ಉಪಕ್ರಮದ ಕುರಿತು ಮಾತನಾಡಿದ ಡಾ. ನಿರಂಜನ ರೈ, “ಮಣಿಪಾಲ ವೃದ್ದರ ಮೈತ್ರಿಯೊಂದಿಗೆ, ಮಲ್ಲೇಶ್ವರಂನ ಮಣಿಪಾಲ ಆಸ್ಪತ್ರೆಯಲ್ಲಿ ನಮ್ಮ ಗುರಿಯು ಹಿರಿಯ ನಾಗರಿಕರಿಗೆ ಸಹಾಯದ ಹಸ್ತ ಅಥವಾ ಕುಟುಂಬದ ಸದಸ್ಯರಾಗಿ ಅವರಿಗೆ ಬೆಂಬಲ ಮತ್ತು ಅನುಕೂಲಕರ ವಾತಾವರಣವನ್ನು ನೀಡುವುದು. ತಮ್ಮ ಆರೋಗ್ಯದ ಸಮಸ್ಯೆಗಳು ಮತ್ತು ಚಿಂತೆಗಳನ್ನು ಬದಿಗಿಟ್ಟು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಸಂತೋಷದಿಂದ ಪ್ರದರ್ಶಿಸಲು ಈ ವೇದಿಕೆ ಬೆಂಬಲ ನೀಡಿದೆ” ಎಂದರು.

ಧನ್ಯಾ ರಾಮ್ ಕುಮಾರ್ ಅವರು ಕೃತಜ್ಞತೆ ಸಲ್ಲಿಸುತ್ತಾ ಮಾತನಾಡಿ, “ಈ ಕಾರ್ಯಕ್ರಮದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ. ಈ ವಯಸ್ಸಿನಲ್ಲಿ ನೀವು ತೋರಿಸುತ್ತಿರುವ ಪರಿಶ್ರಮ ಮತ್ತು ದೃಢ ಸಂಕಲ್ಪ ನಿಜಕ್ಕೂ ಶ್ಲಾಘನೀಯ. ನಿಮ್ಮೆಲ್ಲರಲ್ಲಿ ನನ್ನ ಅಜ್ಜ ಮತ್ತು ಅಜ್ಜಿಯ ಪ್ರತಿಬಿಂಬವನ್ನು ನಾನು ನೋಡುತ್ತಿದ್ದೇನೆ. ನಿಮ್ಮ ಸುಂದರವಾದ ನೃತ್ಯಗಳು ಮತ್ತು ಉತ್ಸಾಹಭರಿತ ನಡಿಗೆಗಳು ನನ್ನ ಅಜ್ಜ ಅಜ್ಜಿಯ ನೆನಪನ್ನು ಮರುಕಳಿಸುವಂತೆ ಮಾಡಿತು. ಈ ವಿಶೇಷ ಸಂಜೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು” ಎಂದರು.

Advertisement

ಸೀನಿಯರ್ ಕೇರ್ ಪ್ರೋಗ್ರಾಮ್ ನ ಭಾಗವಾಗಿ, ಮಲ್ಲೇಶ್ವರಂನ ಮಣಿಪಾಲ್ ಆಸ್ಪತ್ರೆಯು ಸೀನಿಯರ್ ನೇಬರ್ ಹುಡ್ ಡೆಸ್ಕ್ ಸ್ಥಾಪಿಸಿದೆ. ಇದು ಹಿರಿಯರಿಗೆ ಅವರ ಬದುಕಿನಲ್ಲಿ ಸಿಗಬೇಕಾದ ಎಲ್ಲ ರೀತಿಯ ಸಮಗ್ರ ಬೆಂಬಲವನ್ನು ನೀಡುತ್ತದೆ. ಅಪಾಯಿಂಟ್ಮೆಂಟ್ಗಳನ್ನು ಕಾಯ್ದಿರಿಸಲು ವಿಶೇಷ ಸಹಾಯವಾಣಿ ಇದೆ, ಜೊತೆಗೆ ವಿಶಿಷ್ಟವಾದ ಐಡಿ ಕಾರ್ಡ್ ನೊಂದಿಗೆ ಹೊರರೋಗಿಗಳ ಚಿಕಿತ್ಸೆಗಳು, ಡಿಸ್ಚಾರ್ಜ್ ನಂತರದ ಆರೈಕೆ, ಹೋಮ್ಕೇರ್ ಸೇವೆಗಳು ಮತ್ತು ಹಾಗೆಯೇ ವಿನಂತಿಯ ಮೇರೆಗೆ ಲಭ್ಯವಿರುವ ಪಿಕ್-ಅಪ್ ಮತ್ತು ಡ್ರಾಪ್-ಆಫ್ ಸೇವೆಯನ್ನು ನೀಡುವ ಮೂಲಕ ನಿರಂತರವಾಗಿ ಅನುಕೂಲಕರ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ. ಒಂದೆಡೆ ಮಲ್ಲೇಶ್ವರಂನ ಮಣಿಪಾಲ್ ಆಸ್ಪತ್ರೆಯು ಹಿರಿಯ ಜೀವಗಳ ಆರೈಕೆಯ ಬಗ್ಗೆ ಆದ್ಯತೆ ನೀಡುತ್ತಿದ್ದರೆ, ಮತ್ತೊಂದೆಡೆ ಮಣಿಪಾಲ ವೃದ್ದರ ಮೈತ್ರಿ ಅವರ ಆರೋಗ್ಯದ ಅಗತ್ಯಗಳನ್ನು ಕಾಳಜಿ ಮತ್ತು ಸಹಾನುಭೂತಿಯಿಂದ ಪೂರೈಸುವುದನ್ನು ಖಚಿತಪಡಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next