ಮಣಿಪಾಲ: ಕಸ್ತೂರ್ಬಾ ಮೆಡಿಕಲ್ ಕಾಲೇಜಿನ 70ನೇ ವಾರ್ಷಿಕೋತ್ಸವ ಸೋಮವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ, ಕೆಎಂಸಿ ಪೂರ್ವ ವಿದ್ಯಾರ್ಥಿ ಡಾ| ಕಿಶೋರ್ ಮುಲುಪುರಿ ಅವರು ಮಾತನಾಡಿ, ಔದ್ಯೋಗಿಕ ಜೀವನ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಕೆಎಂಸಿಯಲ್ಲಿ ಕಳೆದ ಅವಿಸ್ಮರಣೀಯ ದಿನಗಳನ್ನು ನೆನಪಿಸಿಕೊಂಡರು.
ಬೃಹತ್ ಸಂಸ್ಥೆ ಕಟ್ಟಿ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ| ಟಿ.ಎಂ.ಎ. ಪೈಯವರ ಕುಟುಂಬವನ್ನು ಅಭಿನಂದಿಸಿದರು.
ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಟ್ರಸ್ಟ್‌ನ ವಿಶ್ವಸ್ತರಾದ ವಸಂತಿ ಆರ್. ಪೈ, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ| ಶರತ್ ಕೆ. ರಾವ್, ರಿಜಿಸ್ಟ್ರಾರ್ ಪಿ. ಗಿರಿಧರ ಕಿಣಿ, ಸಲಹೆಗಾರ ಡಾ| ಪಿಎಲ್ ಎನ್‌ಜಿ ರಾವ್, ಕೆಎಂಸಿ ಡೀನ್ ಡಾ| ಪದ್ಮರಾಜ ಹೆಗ್ಡೆ ಉಪಸ್ಥಿತರಿದ್ದರು.
ಕೆಎಂಸಿ ಆರಂಭದ ದಿನಗಳಲ್ಲಿ ಡೀನ್‌ಗಳಾಗಿ ಗಣನೀಯ ಸೇವೆ ಸಲ್ಲಿಸಿದ ಡಾ| ಎನ್. ಮಂಗೇಶ್ ರಾವ್, ಡಾ| ಆರ್. ಪಿ. ಕೊಪ್ಪೀಕರ್ ಅವರನ್ನು ಸ್ಮರಿಸಲಾಯಿತು. ಮಾಜಿ ಡೀನ್‌ಗಳಾದ ಡಾ| ಎ. ಕೃಷ್ಣರಾವ್, ಡಾ| ಪಿ. ಲಕ್ಷ್ಮೀನಾರಾಯಣ ರಾವ್, ಡಾ| ಆರ್.ಎಸ್.ಪಿ. ರಾವ್, ಡಾ| ಶ್ರೀಪತಿ ರಾವ್, ಡಾ| ಜಿ. ಪ್ರದೀಪ್ ಕುಮಾರ್, ಡಾ| ಪೂರ್ಣಿಮಾ ಬಾಳಿಗಾ ಬಿ., ಡಾ| ಪ್ರಜ್ಞಾ ರಾವ್, ಡಾ| ಶರತ್ ಕುಮಾರ್ ರಾವ್ ಕೆ. ಅವರನ್ನು, ಕುಟುಂಬದ ಪ್ರತಿನಿಧಿಗಳನ್ನು ಸಮ್ಮಾನಿಸಲಾಯಿತು.
ಸಹಡೀನ್‌ಗಳಾದ ಡಾ| ಅನಿಲ್ ಭಟ್, ಡಾ| ಕೃಷ್ಣಾನಂದ ಪ್ರಭು, ಡಾ| ಕೃತಿಲತಾ ಪೈ, ಡಾ| ನವೀನ್ ಸಾಲಿನ್ಸ್ ಉಪಸ್ಥಿತರಿದ್ದರು.